Advertisement

ಹಿಂದಿ ದಿವಸ್ ನಾವು ಪ್ರಾರಂಭ ಮಾಡಿದ್ದಲ್ಲ..: ಎಚ್ ಡಿಕೆಗೆ ಸಿ.ಟಿ.ರವಿ ತಿರುಗೇಟು

01:28 PM Sep 13, 2022 | Team Udayavani |

ಬೆಂಗಳೂರು: ಹಿಂದಿ ಹೇರುವ ಪ್ರಶ್ನೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ಸಹ ಭಾರತದ ಆತ್ಮ. ಹಿಂದಿ ದಿವಸ್ ನಾವು ಪ್ರಾರಂಭ ಮಾಡಿದ್ದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವ ಪಕ್ಷದ ಬೆಂಬಲದಲ್ಲಿ ದೇವೆಗೌಡರು ಪ್ರಧಾನಿಯಾಗಿದ್ದರೋ ಆ ಪಕ್ಷದವರೇ ಹಿಂದಿ ಏರಿಕೆ ಮಾಡಿರುವುದು ಎಂದು ಮಾಜಿ ಸಿಎಂ‌ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಏಕ್ ಭಾರತ್ ಶ್ರೇಷ್ಟ ಭಾರತ್ ಅಂತ ನಮ್ಮ ಪಕ್ಷ ಹೊಸ ಯೋಜನೆ ಜಾರಿ ಮಾಡಿದೆ. ಬೇರೆ ಬೇರೆ ರಾಜ್ಯಗಳ ಉತ್ಸವಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮಾಡಬೇಕು. ಭಾಷೆ ಬಾಂಧವ್ಯದ ಸಂಕೇತ ಅಂತಾ ನಾನು ಭಾವಿಸುತ್ತೇನೆ. ಆದರೆ ಕೆಲವರು ಅದನ್ನ ಬೆಂಕಿ ಹಚ್ಚೋಕೆ ಬಳಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಗೋಧ್ರಾ ಕೇಸ್; ಅಮಿತ್ ಶಾಗೆ ಶರದ್ ಪವಾರ್ ನೆರವು ನೀಡಿದ್ರು: ಸಾಮ್ನಾದಲ್ಲಿ ಆರೋಪ

ಸಿದ್ದರಾಮಯ್ಯ ಕಚ್ಚೆ ಹರುಕ ಅನ್ನೋ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಜನರ ಮಾತು ಅಂತ ಅವರು ಹೇಳಿದ್ದರು. ನಾನು ಕೂಡಾ ಜನರ ಮಾತು ಎಂದೇ ಹೇಳಿದ್ದೇನೆ. ಮಾತು ಎನ್ನುವುದು ಅವರಿಗೆ ಮಾತ್ರ ಬರುವುದಲ್ಲ ನಮಗೂ ಬರುತ್ತದೆ. ಕೆಲವರು ಪ್ರಧಾನಿಗಳನ್ನು, ಸ್ವಾಮೀಜಿಗಳನ್ನು ಏಕವಚನದಲ್ಲಿ ಮಾತನಾಡಿದ್ದಾರೆ. ಅಂತವರನ್ನು ನಾವು ನೋಡಿದ್ದೇವೆ. ಅವರು ಮಾತನಾಡುವಾಗ ಹುದ್ದೆಗಳು ನೆನಪಾಗುವುದಿಲ್ಲವೇ? ಎಂದು ತಿರುಗೇಟು ನೀಡಿದರು.

Advertisement

ನಿನ್ನೆ ಕಾಂಗ್ರೆಸ್ ನವರು ಆರ್‌ಎಸ್‌ಎಸ್‌ ಚಡ್ಡಿಯನ್ನು ಸುಡುವ ಪೋಸ್ಟ್ ಹಾಕಿದ್ದಾರೆ. ಜೋಡೋ ಹೆಸರಿನಲ್ಲಿ ಭಾರತೀಯತೆ ಸುಡೋ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಒಂದು ರಾಷ್ಟ್ರ ಸೇವೆ ಮಾಡುವ ಸಂಘ. ಕಾಂಗ್ರೆಸ್ ನವರು ಬಿನ್‌ ಲಾಡೆನ್‌ ನನ್ನು ಒಸಮಾಜೀ ಎನ್ನುತ್ತಾರೆ. ತುಕ್ಡೆ ಗ್ಯಾಂಗ್‌ ಗಳೆಲ್ಲ ಕಾಂಗ್ರೆಸ್ ಸದಸ್ಯತ್ವ ಪಡೆಯುತ್ತಿದ್ದಾರೆ. ಚಡ್ಡಿ ಸುಟ್ಟವರೆಲ್ಲಾ ಚಡ್ಡಿ ಹಾಕೊಂಡು ಆರ್‌ಎಸ್‌ಎಸ್‌ ಶಾಖೆಗೆ ಬರೋ ದಿನ ದೂರವಿಲ್ಲ ಎಂದು ಹೇಳಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next