Advertisement

ನೇಕಾರರ ಕಡೆಗಣಿಸುತ್ತಿರುವುದನ್ನು ಖಂಡಿಸುತ್ತೇವೆ: ಶಿವಲಿಂಗ ಟಿರಕಿ ಕಿಡಿ

10:26 PM Jun 17, 2022 | Team Udayavani |

ರಬಕವಿ-ಬನಹಟ್ಟಿ: ಸರಕಾರದ ಜನಪ್ರತಿನಿಧಿಗಳು, ಅಧಿಕಾರಿಗಳು ನೇಕಾರರನ್ನು ಕಡೆಗಣಿಸುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.

Advertisement

ಶುಕ್ರವಾರ ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯ ಮುಂದೆ ನೇಕಾರರು ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಎಸ್. ಬಿ. ಇಂಗಳೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಮಾನ್ಯ ಮುಖ್ಯ ಮಂತ್ರಿಗಳು ಒಂದು ನಾಯಿಯ ಬಗ್ಗೆ ಮಾತನಾಡಲು ಒಂದು ತಾಸುಗಳ ಸಮಯ ಕೊಡುತ್ತಾರೆ. ಜನರ ಮಾನ ಮುಚ್ಚುವ ನೇಕಾರ ಆತ್ಮ ಹತ್ಯೆ ಮಾಡಿಕೊಂಡರು ಇವರು ಸಾಂತ್ವಾನ ಹೇಳಲು ಇವರಿಗೆ ಸಮಯವಿಲ್ಲ. ಇದೇ ರೀತಿ ಸರಕಾರ ಹಾಗೂ ಅಧಿಕಾರಿಗಳ ವರ್ತನೆ ಮುಂದುವರೆದರೆ ಮುಂದಿನ ದಿನಮಾನಗಳಲ್ಲಿ ಜವಳಿ ಸಚಿವರು ಹಾಗೂ ಮುಖ್ಯ ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ವಿದ್ಯುತ್ ಚಾಲಿತ ಮಗ್ಗಗಳನ್ನು ನಡೆಸುತ್ತಿರುವ ವೃತ್ತಿಪರ ನೇಕಾರರಿಗೆ ವಿದ್ಯುತ್ ಕಂಪನಿಯಿಂದ ವಿದ್ಯುತ್ ಸರಬರಾಜು ಮಾಡುವಲ್ಲಿ ಈಗಾಗಲೇ ಭದ್ರತಾ ಠೇವಣಿ ಪಡೆದುಕೊಂಡಿದ್ದು, ಪ್ರತಿ ವರ್ಷ ಹೆಚ್ಚಿನ ಭದ್ರತಾ ಠೇವಣಿಯನ್ನು ಕೇಳಿ ಭರಿಸಿಕೊಳ್ಳುತ್ತಿದ್ದಾರೆ. ಹಾಗೂ ಮಿನಿಮಮ್ ಚಾರ್ಜನ್ನು 20 ರಿಂದ 90 ರೂಪಾಯಿವರೆಗೆ ಏರಿಕೆ ಮಾಡಿ, ಭರಿಸಿಕೊಳ್ಳುತ್ತಿದ್ದಾರೆ, ಸಬ್ಸಿಡಿಯಲ್ಲಿ ಸಿಗತ್ತಿರುವ ವಿದ್ಯುತ್ ಗಿಂತ ಮಿನಿಮಮ್ ಚಾರ್ಜ, ಸರ್ವಿಸ್ ಚಾರ್ಜ, ಇತರೆ ಚಾರ್ಜಗಳನ್ನು ಸೇರಿಸಿ ಬಲ್ಲನ್ನು ಭರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ನೇಕಾರರಿಗೆ ನೋವಿನ ಮೇಲೆ ಬರೆ ಎಳೆದಂತಾಗಿದೆ. ಕಾರಣ ಸರಕಾರ ಮಿನಿಮಮ್ ಚಾರ್ಜ, ಹೆಚಿನ ಭದ್ರತಾ ಠೇವಣಿ ಭರಿಸಿಕೊಳ್ಳುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಈ ಕುರಿತು ಜವಳಿ ಹಾಗೂ ವಿದ್ಯುತ್ ಖಾತೆ ಸಚಿವರು ಕೂಡಲೆ ತುರ್ತಾಗಿ ಸಭೆ ಕರೆದು ನೇಕಾರರ ಸಮಸ್ಯೆಗಳನ್ನು ಬಗೆ ಹರಿಸಬೇಕು ಇಲ್ಲವಾದಲ್ಲಿ ಉಘ್ರವಾದ ಹೋರಾಟ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆನಂದ ಜಗದಾಳ, ರಾಜೇಂದ್ರ ಮಿರ್ಜಿ, ಮಲ್ಲಪ್ಪ ಮಿರ್ಜಿ, ನಾಗಪ್ಪ ಮಿರ್ಜಿ, ಗುರಲಿಂಗಪ್ಪ ಮಿರ್ಜಿ, ಈರಪ್ಪ ಮದಕವಿ, ಮಹಾಲಿಂಗಪ್ಪ ಕಾಗಿ, ಬಸು ಜಿಡ್ಡಿಮನಿ, ಸಂಗಪ್ಪ ಮುಂಡಗನೂರ, ಮಹಾಲಿಂಗಪ್ಪ ನಂದಿಕೋಲ, ಪ್ರಕಾಶ ನಿಂಬರಗಿ, ಬಸವರಾಜ ಬಿಳ್ಳೂರ ಸೇರಿದಂತೆ ನೂರಾರೂ ನೇಕಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next