Advertisement

ಸಂಸತ್ತಿನಲ್ಲಿ ನಮಗೆ ಮೈಕ್ ಆನ್ ಮಾಡಲೂ ಅವಕಾಶವಿಲ್ಲ..; ಬ್ರಿಟಿಷ್ ಸಂಸದರ ಬಳಿ ರಾಹುಲ್

09:54 AM Mar 07, 2023 | Team Udayavani |

ಲಂಡನ್: ಯುಕೆ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಭಾರತದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುವುದನ್ನು ಮುಂದುವರಿಸಿದ್ದಾರೆ. ಭಾರತದ ಸಂಸತ್ ನಲ್ಲಿ ವಿರೋಧ ಪಕ್ಷದವರು ಮಾತನಾಡುವಾಗ ಮೈಕ್ ಗಳನ್ನು ಬಂದ್ ಮಾಡಲಾಗುತ್ತದೆ ಎಂದಿದ್ದಾರೆ.

Advertisement

ಲಂಡನ್‌ನ ಹೌಸ್ ಆಫ್ ಕಾಮನ್ಸ್‌ ನ ಗ್ರ್ಯಾಂಡ್ ಕಮಿಟಿ ರೂಮ್‌ನಲ್ಲಿ ಹಿರಿಯ ಭಾರತೀಯ ಮೂಲದ ವಿರೋಧ ಪಕ್ಷದ ಲೇಬರ್ ಪಾರ್ಟಿ ಸಂಸದ ವೀರೇಂದ್ರ ಶರ್ಮಾ ಅವರು ಆಯೋಜಿಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ರೀತಿ ಹೇಳಿದರು.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ತಂಡದಲ್ಲಿ ಬದಲಾವಣೆ; ಟಿ20 ತಂಡಕ್ಕೆ ನೂತನ ನಾಯಕನ ನೇಮಕ

“ನಮ್ಮ ಮೈಕ್‌ ಗಳು ಸರಿಯಾಗಿಲ್ಲ, ಅವು ಕಾರ್ಯನಿರ್ವಹಿಸುತ್ತಿವೆ, ಆದರೆ ನೀವು ಅವುಗಳನ್ನು ಇನ್ನೂ ಆನ್ ಮಾಡಲು ಸಾಧ್ಯವಿಲ್ಲ. ನಾನು ಮಾತನಾಡುತ್ತಿರುವಾಗ ಅದು ನನಗೆ ಹಲವಾರು ಬಾರಿ ಅನುಭವಕ್ಕೆ ಬಂದಿದೆ” ಎಂದು ತನ್ನ ಬ್ರಿಟಿಷ್ ಸಹವರ್ತಿಗಳೊಂದಿಗೆ ಭಾರತದಲ್ಲಿ ರಾಜಕಾರಣಿಯಾಗಿರುವ ಅನುಭವದ ಬಗ್ಗೆ ರಾಹುಲ್ ಗಾಂಧಿ ಹೇಳಿದರು.

ನೋಟು ಅಮಾನ್ಯೀಕರಣದ ಬಗ್ಗೆ ಚರ್ಚಿಸಲು ಅವರಿಗೆ ಅವಕಾಶ ಇರಲಿಲ್ಲ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ. ಇದು “ಅನಾಹುತಕಾರಿ ಆರ್ಥಿಕ ನಿರ್ಧಾರ” ಎಂದು ಅವರು ಹೇಳಿದರು.

Advertisement

ಭಾರತದ ಗಡಿಯೊಳಗೆ ಚೀನಾ ಪಡೆಗಳು ನುಗ್ಗುತ್ತವೆ, ಆದರೆ ಇದರ ಬಗ್ಗೆ ನಮಗೆ ಮಾತನಾಡಲು ಅವಕಾಶವಿಲ್ಲ. ಬಿಸಿ ಬಿಸಿ ಚರ್ಚೆಗಳು, ವಾದಗಳು ಮತ್ತು ಭಿನ್ನಾಭಿಪ್ರಾಯಗಳು ಇದ್ದ ಸಂಸತ್ತು ನನಗೆ ನೆನಪಿದೆ, ಆದರಲ್ಲಿ ನಾವು ಮಾತುಕತೆ ನಡೆಸಿದ್ದೇವೆ. ಅಂತಹ ಸಂಸತ್ತನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಉಸಿರುಗಟ್ಟುವಿಕೆ ನಡೆಯುತ್ತಿದೆ” ಎಂದು ರಾಹುಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next