Advertisement

ಬಿಬಿಎಂಪಿ ಚುನಾವಣೆಗೆ ನಾವು ಸಿದ್ದರಿದ್ದೇವೆ, ಕಾಂಗ್ರೆಸ್ ಗೆ ವಿಶ್ವಾಸವಿಲ್ಲ: ಅಶ್ವಥ್ ನಾರಾಯಣ

02:52 PM Aug 06, 2022 | Team Udayavani |

ಬೆಂಗಳೂರು: ಬಿಬಿಎಂಪಿ ಚುನಾವಣೆ ಎದುರಿಸಲು ನಾವು ಸಿದ್ದರಿದ್ದೇವೆ. ಆದರೆ ಕಾಂಗ್ರೆಸ್ ನವರಿಗೆ ಈಗ ಚುನಾವಣೆ ಬೇಕಿಲ್ಲ. ಚುನಾವಣೆಗೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಕಾಂಗ್ರೆಸ್ ಆತ್ಮವಿಶ್ವಾಸ ಕಳೆದುಕೊಂಡಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಟೀಕಿಸಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಮೀಸಲಾತಿ ಮಾಡಲಾಗಿದೆ 50% ಒಬಿಸಿ, 50 ಸಾಮಾನ್ಯ ಮಾಡಲಾಗಿದೆ. 50% ಮಹಿಳೆಯರಿಗೂ ನೀಡಲಾಗಿದೆ. ಬೇರೆ ಪಕ್ಷಗಳು ಅವರದ್ದೇ ಆದ ವಿರೋಧ ಮಾಡುತ್ತಿದ್ದಾರೆ. ಏಕಾಏಕಿ ಗೂಂಡಾಗಿರಿ ಮಾಡಿದ್ದರೆ. ತೋಳ್ಬಲದ ಮೂಲಕ ಗಲಭೆ ಮಾಡಿದ್ದಾರೆ. ಸಚಿವರಾಗಿದ್ದವರು, ಸರ್ಕಾರ ನಡೆಸಿದವರು ವಿಧಾನಸೌಧದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ. ಕಾನೂನನ್ನು ಗಾಳಿಗೆ ತೂರಿ, ತಲೆಯಲ್ಲಿ ಏನೂ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ. ಸರ್ಕಾರ ಇದನ್ನ ಖಂಡಿಸುತ್ತದೆ. ಸಾರ್ವಜನಿಕರು ಕೂಡ ಇವರ ವರ್ತನೆ ಖಂಡಿಸಿದೆ ಎಂದರು.

ಯಾವುದೇ ಮುಸ್ಲಿಂ ಮಹಿಳೆಯರು ಪ್ರತಿನಿಧಿ ಆಗುವಂತಿಲ್ಲ ಎಂದು ಜಮೀರ್ ಹೇಳಿದ್ದರು. ಈಗ ಮಹಿಳೆಯರಿಗೆ ಮಿಸಲಾತಿ ಬೇಡ ಎನ್ನುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ಉನ್ನತ ಸ್ಥರಕ್ಕೆ ಬರಬಾರದೇ? ರಾಮಲಿಂಗಾರೆಡ್ಡಿ ಅವರು ಬಂದಾಗಿನಿಂದ ಮಂತ್ರಿಗಳೇ. ರಾಜಕೀಯವಾಗಿ ಎಲ್ಲೆಡೆ ಬೇರೂರಿದ್ದಾರೆ. ನಮ್ಮ ಪಕ್ಷ, ನಮ್ಮ ಸರ್ಕಾರ ಕಾನೂನಿನ ಪ್ರಕಾರವೇ ಮೀಸಲಾತಿ ನೀಡಿದ್ದೇವೆ. ಕಾನೂನಿನ ಉಲ್ಲಂಘನೆ ಆಗಿದ್ದರೆ ತೋರಿಸಲಿ ಎಂದು ಸವಾಲೆಸೆದರು.

ಇದನ್ನೂ ಓದಿ:ಮಲೆನಾಡಲ್ಲಿ ಮಳೆಯ ಅಬ್ಬರ : ನಾಟಿಗೆ ಸಜ್ಜಾಗಿದ್ದ ಭತ್ತದ ಗದ್ದೆಯಲ್ಲಿ ಭೂಕುಸಿತ, ಕಂಗಾಲಾದ ರೈತ

ರಾಜಕೀಯ ಪಕ್ಷವೆಂದರೆ ವಿರೋಧ ಇದ್ದೇ ಇರುತ್ತದೆ. ಬಿಜೆಪಿ ಪಕ್ಷದಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಸರ್ಕಾರದ ಹಂತದಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ‌ ಕಾನೂನು ಪ್ರಕಾರ ಎಲ್ಲವೂ ಮಾಡಿದ್ದೇವೆ. ಯಾವುದಾದ್ರೂ ತಪ್ಪಿದ್ದರೆ ತೋರಿಸಲಿ ಎಂದರು.

Advertisement

ಇವರು ಜೋಪಡಿಯಲ್ಲಿ ಬರೀ ಗಲಾಟೆ ಮಾಡುವವರು. ಕೈ ಕಾಲು ಆಡಿಸುವುದು ಬಿಟ್ಟು, ತಲೆ‌ ಉಪಯೋಗಿಸಲಿ. ನನಗೆ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಜಮೀರ್‌ ಅಹಮದ್ ಅವರಷ್ಟು ರಾಜಕೀಯ ಅನುಭವ ಇಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ಟಾಂಗ್ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next