Advertisement

ದೇವರಾಣೆ ನಾವು ಪಕ್ಷ ಬಿಡುತ್ತಿಲ್ಲ:ಶಾಸಕರ ಅಳಲು 

06:00 AM Sep 12, 2018 | Team Udayavani |

ಬೆಂಗಳೂರು: ಜಾರಕಿಹೊಳಿ ಸಹೋದರರೊಂದಿಗೆ ಕಾಂಗ್ರೆಸ್‌ ತೊರೆದು ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಅನೇಕ ಶಾಸಕರು ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ, ತಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ.

Advertisement

ಬಿಜೆಪಿಯವರು ಅನಗತ್ಯವಾಗಿ ತಮ್ಮ ಹೆಸರನ್ನು ಸೇರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಶಾಸಕ ಸತೀಶ್‌ ಜಾರಕಿಹೊಳಿ ನೇರವಾಗಿ ಪಕ್ಷದ ನಾಯಕರಿಗೆ ತಾವು ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರೆ, ಶಾಸಕರಾದ ಅಮರೇಗೌಡ ಬಯ್ನಾಪುರ, ರಹೀಂಖಾನ್‌, ಎಂ.ಟಿ.ಬಿ.ನಾಗರಾಜ್‌. ಬಿ.ನಾರಾಯಣರಾವ್‌, ತುಕಾರಾಂ, ಮಹೇಶ್‌ ಕವಟಹಳ್ಳಿ,
ಸೀಮಂತ್‌ ಪಾಟೀಲ್‌, ಬಸವನಗೌಡ, ಡಿ.ಎಸ್‌. ಹುಲಗೇರಿಯವರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ದೂರವಾಣಿ ಕರೆ ಮಾಡಿ ತಾವು 
ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು  ಹೇಳಿದ್ದಾರೆ ಎನ್ನಲಾಗಿದೆ. ಮುಳಬಾಗಿಲು ಶಾಸಕ ನಾಗೇಶ್‌ ಕೂಡ ತಮ್ಮ ಹೆಸರು ಆಪರೇಷನ್‌ ಕಮಲದ ಶಾಸಕರ ಪಟ್ಟಿಯಲ್ಲಿ ಕೇಳಿ ಬರುತ್ತಿರುವುದನ್ನು ಕಂಡು ತಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ಗೆ ಕರೆ ಮಾಡಿ, ತಾವು ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲಕ್ಕೆ ಒಳಗಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next