Advertisement

Yathindra Siddaramaiah: ನಾವು ಯಾವ ತನಿಖೆಗೂ ಹೆದರಲ್ಲ

09:29 PM Nov 12, 2024 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪ ಮಾಡಿ ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ನಾವು ಯಾವ ತಪ್ಪನ್ನೂ ಮಾಡಿಲ್ಲ. ಹಾಗಾಗಿ ನಮಗೆ ತನಿಖೆಯ ಬಗ್ಗೆ ಯಾವ ಭಯವೂ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ| ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Advertisement

ಎಚ್‌.ಡಿ. ಕೋಟೆಯಲ್ಲಿ ಮಂಗಳವಾರ ಮಾತನಾಡಿ, ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೆಲವು ನ್ಯಾಯಾಲಯಗಳು ಕೂಡ ಕೇಂದ್ರ ಸರಕಾರ ಹೇಳಿದಂತೆ ಕೇಳುತ್ತಿವೆ. ಇದನ್ನು ಪಶ್ನೆ ಮಾಡದಿದ್ದರೆ ಅವರು ಆಡಿದ್ದೇ ಆಟವಾಗಲಿದೆ. ಕೇಂದ್ರದ ಈ ಧೋರಣೆಗೆ ಜನ ಮನ್ನಣೆ ನೀಡಬಾರದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next