Advertisement

ನಮ್ಮದು ಭೇದಭಾವ ಮಾಡುವ ಪಕ್ಷವಲ್ಲ: ಎಚ್ ಡಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

01:05 PM Aug 01, 2022 | Team Udayavani |

ದಾವಣಗೆರೆ: ಬಿಜೆಪಿ ರಾಷ್ಟ್ರೀಯತೆಯ ಹೊಂದಿರುವ ರಾಷ್ಟ್ರೀಯ ಪಕ್ಷ. ಭೇದಭಾವ ಮಾಡುವಂತಹ ಪಕ್ಷ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯತೆ ಅಜೆಂಡಾದ ರಾಷ್ಟ್ರೀಯ ಪಕ್ಷ. ಯಾವುದೇ ಭೇದಭಾವ ಮಾಡುವುದಿಲ್ಲ. ಬಿಜೆಪಿ ಭೇದಭಾವದ ಸರ್ಕಾರ ಎಂದು ಆರೋಪ ಮಾಡುವಂತಹವರು ಅವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದರೂ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಾಕೀತು ಮಾಡಿದರು.

ರಾಜ್ಯ ಸರ್ಕಾರ ಮಂಕಿಪಾಕ್ಸ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಆ. 2 ರಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವರೊಡಗೂಡಿ ಮಹತ್ವದ ಸಭೆ ನಡೆಸಲಾಗುವುದು. ಮಂಕಿಪಾಕ್ಸ್ ನಿಯಂತ್ರಣ ಕ್ರಮ, ಮಾರ್ಗಸೂಚಿ, ಔಷಧಗಳ ಸಂಗ್ರಹ ಇತರೆ ಕ್ರಮ ತೆಗೆದುಗೊಳ್ಳುವ ಕುರಿತಂತೆ ಸಭೆ ನಡೆಯಲಿದೆ. ಮಂಕಿಪಾಕ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಗೃಹ ಸಚಿವರ ಮನೆ ಮೇಲೆ ದಾಳಿ ಕುರಿತಂತೆ ಮಾತನಾಡಿದ ಅವರು, ಸಚಿವರ ಮನೆಗೆ ಭದ್ರತೆ ಒದಗಿಸಬೇಕಾದ ಅಧಿಕಾರಿಗಳು ಅಲ್ಲಿ ಇರಲಿಲ್ಲ. ಸೂಕ್ತ ಕ್ರಮಕ್ಕೆ ತಾಕೀತು ಮಾಡಲಾಗಿದೆ ಎಂದರು.

ಇದನ್ನೂ ಓದಿ:ಅಗಲಿದ ಮಣಿಪಾಲದ ಹಿರಿಯ ಚೇತನ ಟಿ.ಮೋಹನದಾಸ್ ಪೈ ಪಂಚಭೂತಗಳಲ್ಲಿ ಲೀನ

Advertisement

ರಾಜ್ಯ ಸರ್ಕಾರ ಹಲವಾರು ಕ್ರಮ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ, ಕಾರ್ಯಕರ್ತರ ಹೋರಾಟ ಕಡಿಮೆಯಾಗಿವೆ. ಸರ್ಕಾರದ ಕ್ರಮಗಳಿಂದ ಎಲ್ಲರಲ್ಲೂ ವಿಶ್ವಾಸ ಬಂದಿದೆ. ನಮ್ಮ ಪೊಲೀಸರು ಹಿಂದೆ ಅನೇಕ ಘಟನೆಗಳಿಗೆ ಸಂಬಂಧಿಸಿದಂತೆ ಕೊಲೆಗಡುಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈಗಿನ ಪ್ರಕರಣಗಳಲ್ಲೂ ಯಶಸ್ವಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್, ಆರೋಗ್ಯ ಇಲಾಖೆ ಸಚಿವ ಡಾ. ಕೆ. ಸುಧಾಕರ್, ಸಂಸದ ಡಾ| ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next