ಮೈಸೂರು : ಬರೀ ಮಳಲಿ ದೇವಸ್ಥಾನ ಅಲ್ಲ, ದೇಶದ ಎಲ್ಲಾ ದೇವಸ್ಥಾನ ವಾಪಸ್ ಪಡೆಯುತ್ತೇವೆ. ಅಯೋಧ್ಯೆಗೂ ಕೂಡ ಇದೇ ಹೇಳಿದ್ದರು, ರಕ್ತಪಾತ ಆಗುತ್ತದೆಂದು, ಈಗ ಏನಾಯಿತು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮಳಲಿ ದೇವಸ್ಥಾನದ ಸಂಬಂಧ ತಾಂಬೂಲ ಪ್ರಶ್ನೆ ಹಾಕಲಾಗಿದ್ದು, ಅದು ಹಿಂದೂ ದೇವಸ್ಥಾನ, ವೀರಶೈವ ಮಠ. ಬರಿ ಮಳಲಿ ದೇವಸ್ಥಾನ ಅಲ್ಲ ದೇಶದ ಎಲ್ಲಾ ದೇವಸ್ಥಾನ ವಾಪಸ್ ಪಡೆಯುತ್ತೇವೆ. ಅಯೋಧ್ಯೆಗೂ ಇದೇ ಹೇಳಿದ್ದಿರಿ ರಕ್ತಪಾತ ಆಗುತ್ತದೆ ಎಂದು, ಈಗ ಏನಾಯಿತು. ಅದನ್ನು ಕಟ್ಟುತ್ತಿದ್ದೇವೆ ಏನು ಮಾಡಿದಿರಿ ಎಂದು ಸವಾಲು ಹಾಕಿದರು.
ಉದ್ಧಟತನ , ಸೊಕ್ಕಿನ ಮಾತು ಇನ್ನು ಮೇಲೆ ನಡೆಯುವುದಿಲ್ಲ. ಮೇಲೆ ನಿಮ್ಮ ಅಪ್ಪ ಕುಳಿತಿದ್ದಾನೆ(ಪ್ರಧಾನಿ ನರೇಂದ್ರ ಮೋದಿ). ಸಂವಿಧಾನದ ಆಧಾರದ ಮೇಲೆ ಪಡೆಯುತ್ತೇವೆ. ಇಲ್ಲಿನ ಮುಸ್ಲಿಂರಲ್ಲಿ ಹಿಂದೂ ರಕ್ತ ಇದೆ. ನೀವು ಎಲ್ಲೂ ಹೋಗಬೇಡಿ, ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ. ನಮ್ಮ ಭೂಮಿ ಮೇಲೆ ನೀವು ಇದ್ದೀರಿ. 30 ಸಾವಿರ ದೇವಸ್ಥಾನ ಒಡೆದು ಮಸೀದಿ ಮಾಡಲಾಗಿದ್ದು, ಅಷ್ಟನ್ನೂ ವಾಪಸ್ ಪಡೆಯುತ್ತೇವೆ ಎಂದು ಗುಡುಗಿದರು.
ದಾಳಿ ಮಾಡಿ ವಾಪಸ್ ಪಡೆಯುವುದಿಲ್ಲ. ನ್ಯಾಯಾಲಯದ ಮೂಲಕವೇ ಪಡೆಯುತ್ತೇವೆ. ತಾಂಬೂಲ ಪ್ರಶ್ನೆ ಹೋಮ- ಹವನ ಎಲ್ಲವೂ ಸಾಕಷ್ಟು ಶಕ್ತಿಯುತವಾಗಿವೆ, ವೈಜ್ಞಾನಿಕವಾಗಿದೆ ಇದನ್ನು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಶಾಸ್ತ್ರಗಳು ಅಷ್ಟು ಸುಲಭವಾಗಿಲ್ಲ. ಸಾಧಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸೀಳಿ ಹಾಕುತ್ತೇವೆ ಎಂದರು.
Related Articles
ಇದನ್ನೂ ಓದಿ : ಮತಾಂಧ ಬಾಬರ್ ಮೂಲ ಹಾಗೂ ಇಂದಿರಾ ಗಾಂಧಿ ಮೂಲ ಒಂದೇ ಆಗಿದೆಯೇ: ಸಿದ್ದರಾಮಯ್ಯಗೆ BJP ತಿರುಗೇಟು
ಮುಸ್ಲಿಮರು ಎಲ್ಲಾ ಕೈ ತಪ್ಪುತ್ತಿದೆ ಅಂತ ಹತಾಶರಾಗಿದ್ದಾರೆ. ಮಂಗಳೂರು ಹಿಜಾಬ್ ಸಂಘರ್ಷ ವಿಚಾರ ಮುಗಿದಿತ್ತು, ಇದರ ಹಿಂದೆ ಹಿಡನ್ ಅಜೆಂಡಾ ಇದೆ. ಮುಂದಿನ ದಿನದಲ್ಲಿ ಗಲಭೆಗೆ ಷಡ್ಯಂತ್ರ ಇದೆ. ಪಿಎಫ್ಐ, ಸಿಎಫ್‌ಐ, ಎಸ್‌ಡಿಎಫ್‌ಐ ಮೇಲೆ ಕ್ರಮ ಕೈಗೊಳ್ಳಬೇಕು. ಅವರು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ನೀಚರು. ನ್ಯಾಯಾಲಯದ ಆದೇಶ ಪಾಲಿಸದೆ ಮತ್ತೆ ಸೊಕ್ಕಿನಿಂದ ಬರುವ ಇವರ ಹಿಂದೆ ಕೆಲ ಶಕ್ತಿ ಕೆಲಸ ಮಾಡುತ್ತಿದ್ದು, ಬ್ರೈನ್ ವಾಶ್ ಮಾಡಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಮಜೀದ್ ಹೇಳಿಕೆಗೆ ಖಂಡನೆ
ಮಳಲಿ ಮಸೀದಿಯನ್ನು ದೇವಸ್ಥಾನ ಮಾಡುವುದು ಕನಸಿನ ಮಾತು, ಒಂದು ಹಿಡಿ ಮರಳು ಕೊಡುವುದಿಲ್ಲ ಎಂಬ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಗೆ ಕಿಡಿ ಕಾರಿದ ಮುತಾಲಿಕ್, ಒಂದು ಹಿಡಿ ಮರಳು ಮಾತ್ರವಲ್ಲ, ಮಳಲಿಯ ಸಂಪೂರ್ಣ ದೇವಸ್ಥಾನ ಪಡೆದೆ ಪಡೆಯುತ್ತೇವೆ. ತಾಕತ್ತಿದರೆ ನೀವು ತಡೆಯಿರಿ. ದೇವಸ್ಥಾನವನ್ನು ಕಾನೂನಿನ ಪ್ರಕಾರವೇ ಪಡೆಯುತ್ತೇವೆ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಸೌಹಾರ್ದಯತೆಯಿಂದ ಬದುಕುವ ಆಸೆ ಇದ್ದರೆ ಕಬಳಿಸಿರುವ ದೇವಸ್ಥಾನ ವಾಪಾಸ್ ಕೊಡಿ. ಇದು ಯಾರ ಅಪ್ಪನ ಸೊತ್ತು ಅಲ್ಲ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಸಾವರ್ಕರ್- ಟಿಪ್ಪು ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಕನ್ನಡ ದ್ರೋಹಿ ದೇವಸ್ಥಾನ ಒಡೆದು ಹಾಕಿದವನು. ಮತಾಂಧ, ದೇಶ ದ್ರೋಹಿ ಜತೆ ಸಾವರ್ಕರ್ ಹೋಲಿಕೆ ಸರಿ ಅಲ್ಲ.ಇದೇ ಕಾರಣಕ್ಕೆ ಟಿಪ್ಪುವಿನ ಕೆಲ ವಿಷಯ ಕೈ ಬಿಡಲಾಗಿದೆ ಎಂದರು.