Advertisement

ನಮಗೂ ಆಪರೇಷನ್‌ ಮಾಡೋಕೆ ಬರುತ್ತೆ: ದಿನೇಶ್‌

11:38 PM Jul 01, 2019 | Lakshmi GovindaRaj |

ಬೆಂಗಳೂರು: “ಮೈತ್ರಿ ಸರ್ಕಾರ ಉರುಳಿಸಲು ಕೇಂದ್ರದ ನಾಯಕರೇ ನೇರವಾಗಿ ಆಪರೇಷನ್‌ ಕಮಲಕ್ಕೆ ಇಳಿದಿದ್ದಾರೆ. ನಮಗೂ ರಿವರ್ಸ್‌ ಆಪರೇಷನ್‌ ಮಾಡಲು ಬರುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, “ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ. ಯಡಿಯೂರಪ್ಪ ಅವರನ್ನು ಹೊರಗಿಟ್ಟು ಬಿಜೆಪಿ ರಾಷ್ಟ್ರೀಯ ನಾಯಕರೇ ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನೇ ಪ್ರಯತ್ನ ಮಾಡಿದರೂ, ಸರ್ಕಾರಕ್ಕೆ ಏನೂ ಆಗುವುದಿಲ್ಲ’ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗುವುದಷ್ಟೇ ಬೇಕಿದೆ. ನಮ್ಮಲ್ಲಿ ಯಾರೂ ಅತೃಪ್ತ ಶಾಸಕರಿಲ್ಲ. ಮಾಧ್ಯಮಗಳಲ್ಲಿ ಹೆಸರು ತೋರಿಸುತ್ತಿರುವ ಶಾಸಕರು ನಮ್ಮೊಂದಿಗಿದ್ದಾರೆ. ಭೀಮಾನಾಯ್ಕ, ಅಮರೇಗೌಡ ಬಯ್ನಾಪುರ ನಮ್ಮ ಜೊತೆಗೆ ಇದ್ದಾರೆ. ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next