ನವ ದೆಹಲಿ : ದೇಶದ ಅತ್ಯಂತದೊಡ್ಡನಾಗರಿಕ ಬ್ಯಾಂಕ್ ಗಳಲ್ಲಿ ಒಂದಾದ ಎಸ್ ಬಿ ಐ ತನ್ನ ಗ್ರಾಹಕರಿಗೆ ಮಹತ್ವಪೂರ್ಣ ಮಾಹಿತಿಯೊಂದನ್ನು ನೀಡಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಗ್ರಾಹಕರನ್ನು ತಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡಲು ಕೇಳಿಕೊಂಡಿದ್ದು, ಹೀಗೆ ಮಾಡುವುದರಿಂದ ಬ್ಯಾಂಕ್ ವಹಿವಾಟಿನಲ್ಲಿ ಸಂಭವಿಸಬಹುದಾದ ಎಲ್ಲಾ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದೆ.
ಈಗಾಗಲೇ ಕೇಂದ್ರ ಸರ್ಕಾರ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ ಲಿಂಕ್ ಮಾಡಬೇಕೆಂದು ಹೇಳಿದ್ದರೂ ಕೂಡ ಎಸ್ ಬಿ ಐ ತನ್ನ ಗ್ರಾಹಕರಿಗೆ ವಿಶೇಷವಾಗಿ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ : ವಿವಾಹಕ್ಕೂ ಮುನ್ನ ಕೌನ್ಸಿಲಿಂಗ್ ಕಡ್ಡಾಯ : ಗೋವಾ ಸರ್ಕಾರ
Related Articles
ತನ್ನ ಗ್ರಾಹಕರಿಗೆ ಟ್ವೀಟರ್ ಮೂಲಕ ಮನವಿ ಮಾಡಿಕೊಂಡ ಎಸ್ ಬಿ ಐ :
ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡ ಎಸ್ ಬಿ ಐ, ಬ್ಯಾಂಕಿಗೆ ಸಂಬಂಧಿಸಿದ ಸಂಭವನೀಯ ಸಮಸ್ಯೆಗಳನ್ನು ತಪ್ಪಿಸಲು ಪಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ ಎಂದು ಹೇಳಿದೆ. ಪಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ನಿಮಗೆ ಯಾವುದೇ ರೀತಿಯ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಕೆ ನೀಡಿದೆ.
ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಪಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಜೂನ್ 30ಕೊನೆಯ ದಿನಾಂಕ. ನೀವು ನಿಗದಿತ ದಿನಾಂಕದ ಒಳಗೆ ಈ ಕೆಲಸ ಪೂರ್ಣಗೊಳಿಸದಿದ್ದರೆ ಬ್ಯಾಂಕಿಂಗ್ ವ್ಯವಹಾರದಲ್ಲಿ ನಿಮಗೆ ತೊಂದರೆಯಾಗಬಹುದು. ಹಾಗಾಗಿ ಆದಷ್ಟು ಬೇಗ ನಿಮ್ಮ ಪಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ನನ್ನು ಲಿಂಕ್ ಮಾಡಿಕೊಳ್ಳಿ ಎಂದು ಕೇಳಿಕೊಂಡಿದೆ.
ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ..? ಪರಿಶೀಲಿಸುವುದು ಹೇಗೆ..?
ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಈಗಾಗಲೇ ಲಿಂಕ್ ಆಗಿದ್ದರೆ, ನೀವು ಏನನ್ನೂ ಮಾಡುವ ಅಗತ್ಯವಿಲ್ಲ, ಆದರೆ ಎರಡೂ ಲಿಂಕ್ ಆಗಿದೆಯೆ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಈ ರೀತಿಯಾಗಿ ಪರಿಶೀಲಿಸುವುದರಿಂದ ನಿಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎನ್ನವುದು ತಿಳಿಯುತ್ತದೆ.
ಪರಿಶೀಲಿಸಲು ನೀವು ಆದಾಯ ತೆರಿಗೆ ಇಲಾಖೆಯ ಎಸ್ ಎಂ ಎಸ್ ಸೌಲಭ್ಯವನ್ನು ಬಳಸಬಹುದು.
– UIDPAN ಟೈಪ್ ಮಾಡಿ ಅದನ್ನು 567678 ಅಥವಾ 56161 ಗೆ ಕಳುಹಿಸಬೇಕು
– ಎರಡೂ ಲಿಂಕ್ ಆಗಿದ್ದರೆ “ಆಧಾರ್ … ಈಗಾಗಲೇ ಪ್ಯಾನ್..ಇನ್ ಐಟಿಡಿ ಡೇಟಾಬೇಸ್‌ನೊಂದಿಗೆ ಸಂಬಂಧ ಹೊಂದಿದೆ. ನಮ್ಮ ಸೇವೆಗಳನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು” ಎಂದು ನಿಮಗೆ ಎಸ್ ಎಮ್ ಎಸ್ ಬರುತ್ತದೆ.
ಪ್ಯಾನ್ ಮತ್ತು ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು?
1- ಆದಾಯ ತೆರಿಗೆ ಪೋರ್ಟಲ್ www.incometax.gov.in ನನ್ನು ಪ್ರವೆಶಿಸಿ.
2- ಎಡಭಾಗದಲ್ಲಿ ನೀವು ಲಿಂಕ್ ಆಧಾರ್ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ
3- ಹೊಸ ಪುಟ ತೆರೆಯುತ್ತದೆ, ಅಲ್ಲಿ ನೀವು ಆಧಾರ್ ನಲ್ಲಿ ಉಲ್ಲೇಖಿಸಿರುವಂತೆ ಪಾನ್, ಆಧಾರ್ ಮತ್ತು ನಿಮ್ಮ ಹೆಸರನ್ನು ಭರ್ತಿ ಮಾಡಬೇಕು
4- ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀವು ಹುಟ್ಟಿದ ವರ್ಷ ಮಾತ್ರ ಇದ್ದರೆ ‘ಆಧಾರ್ ಕಾರ್ಡ್‌ನಲ್ಲಿ ನನ್ನ ಹುಟ್ಟಿದ ವರ್ಷ ಮಾತ್ರ ಇದೆ’ ಎಂಬ ಆಯ್ಕೆಯನ್ನು ಟಿಕ್ ಮಾಡಿ.
5- ಕ್ಯಾಪ್ಚಾ ಕೋಡ್ ನಮೂದಿಸಿ ಅಥವಾ ಒಟಿಪಿಗಾಗಿ ಟಿಕ್ ಮಾಡಿ
6- ಲಿಂಕ್ ಆಧಾರ್ ಬಟನ್ ಕ್ಲಿಕ್ ಮಾಡಿ, ನಿಮ್ಮ ಪಾನ್ ಮತ್ತು ಆಧಾರ್ ಲಿಂಕ್ ಸಿಕ್ಕಿದೆ.
ಇದನ್ನೂ ಓದಿ : ನಡುರಸ್ತೆಯಲ್ಲಿ ವಾಹನ ತಡೆದು ಚಾಲಕನನ್ನು ಬೆದರಿಸಿ 30 ಸಾವಿರ ಲೂಟಿ, ಪರಾರಿಯಾದ ಅಪರಿಚಿತರು