ಬೆಂಗಳೂರು: ವಿಪಕ್ಷದವರು ಏನೇ ಟೀಕೆ – ಟಿಪ್ಪಣಿ ಮಾಡಿದರೂ ನಾವು ಸ್ವಾಗತಿಸುತ್ತೇವೆ. ನಮ್ಮಿಂದ ತಪ್ಪುಗಳಾಗಿದ್ದರೆ ಸರಿಪಡಿಸಿ ಕೊಳ್ಳುತ್ತೇವೆ. ನಮ್ಮಿಂದ ತಪ್ಪಾಗಿಲ್ಲ ಅಂದರೆ ವಿಪಕ್ಷದವರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ ಎಂದು ಅವರಿಗೆ ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳಿನ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ:ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾದ ವಿ.ಕೆ. ಶಶಿಕಲಾ : ಬಿಗುಭದ್ರತೆ
ವಿರೋಧ ಪಕ್ಷದವರಾಗಿ ಸಿದ್ದರಾಮಯ್ಯ ಅವರ ಕೆಲಸ ಮಾಡುತ್ತಾರೆ. ನಾಳೆ ಸದನ ಸಲಹಾ ಸಮಿತಿ ಸಭೆಯಿದೆ. ನಾಳೆ ಸಭೆಯಲ್ಲಿ ಚರ್ಚಿಸಲಿ. ಅವರ ಟೀಕೆಗಳು ಏನೇ ಇದ್ದರೂ ಸ್ವಾಗತಿಸುತ್ತೇವೆ ಎಂದರು.
ಮಹದಾಯಿ ವಿಚಾರದಲ್ಲಿ ರಾಜಿ ಇಲ್ಲ ಎಂಬ ಗೋವಾ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಮಹದಾಯಿ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಗೋವಾ ಸಿಎಂ ಅವರ ಸ್ವಾರ್ಥಕ್ಕಾಗಿ ಮಾತಾನಾಡುತ್ತಾರೆ. ನ್ಯಾಯಾಲಯದಲ್ಲೂ ತೀರ್ಪು ನಮಗೆ ಅನುಕೂಲಕರವಾಗಿಯೇ ಇದೆ ಎಂದರು.
ಇದನ್ನೂ ಓದಿ: ರೈತರ ಜತೆ ಮಾತುಕತೆಗೆ ಸಿದ್ಧ ಎಂದ ಪ್ರಧಾನಿ ಮೋದಿ : ಸರ್ವ ಪಕ್ಷಗಳ ಸಭೆಯಲ್ಲಿ ಭರವಸೆ
ಮಹದಾಯಿ ನೀರು ನಮಗೆ ಸಿಗಲೇಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ. ಕೇಂದ್ರದ ನಾಯಕರಿಗೂ ಮಹದಾಯಿ ವಿಚಾರ ಮನವರಿಕೆ ಮಾಡಿಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.