Advertisement

ಆ್ಯಂಬುಲೆನ್‌ಗಾಗಿ ಗಂಟೆಗಟ್ಟಲೇ ಪರದಾಡಿದರು

03:37 PM Nov 20, 2022 | Team Udayavani |

ಮೇಲುಕೋಟೆ: ಬೆಟ್ಟ ಹತ್ತುವ ವೇಳೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು, ಶಿಕ್ಷಕರಿಗೆ ಗಂಭೀರ ಗಾಯವಾಗಿದ್ದು ಸ್ಥಳಕ್ಕೆ ಆ್ಯಂಬುಲೆನ್ಸ್‌ ಬಾರದ್ದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಘಟನೆಯ ಹಿನ್ನೆಲೆ ಏನು?: ವಿಶ್ವ ವಿಖ್ಯಾತ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟಕ್ಕೆ ಶನಿವಾರ ನಂಜನಗೂಡಿನ ಲಯನ್ಸ್‌ ಶಾಲೆಯಿಂದ 110 ವಿದ್ಯಾರ್ಥಿಗಳು ಪ್ರವಾಸ ಬಂದಿದ್ದರು. ಈ ವೇಳೆ ಬೆಟ್ಟ ಹತ್ತು ವಾಗ ಆಕಸ್ಮಿಕವಾಗಿ ಒಣಗಿದ ಅರಳಿಮರ ಬಿದ್ದು, ವಿದ್ಯಾ ರ್ಥಿ ಗಳಾದ ನಿಶಾಂತ್‌, ವರುಣ್‌, ಯೋಗೇಶ್‌ ಹಾಗೂ ಶಿಕ್ಷಕ ಕೇಶವರಾವ್‌ ಗಂಭೀರವಾಗಿ ಗಾಯಗೊಂಡರು.

ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ: ಗಾಯಗೊಂಡ ವಿದ್ಯಾರ್ಥಿಗಳು, ಶಿಕ್ಷಕರಿಗೆ ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಒಬ್ಬ ವಿದ್ಯಾರ್ಥಿ ಯ ಕಾಲು ಮುರಿದು ಮತ್ತಿಬ್ಬರಿಗೆ ತಲೆ, ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್‌.ಆಸ್ಪತ್ರೆಗೆ ರವಾನಿಸಲಾಗಿದೆ.

ಆ್ಯಂಬುಲೆನ್ಸ್‌ಗಾಗಿ ಪರದಾಟ: ಮೇಲುಕೋಟೆ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್‌ ಇದ್ದರೂ, ಸಿಬ್ಬಂದಿ ಗಳಿಲ್ಲದೇ ಗಾಯಾಳುಗಳು ಪರದಾಡಿದ ಘಟನೆ ಶನಿವಾರ ನಡೆಯಿತು. ಇದರಿಂದಾಗಿ ಭಕ್ತರು- ನಾಗರಿ ಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಪಘಾತ ನಡೆದ ಒಂದು ಗಂಟೆ ಬಳಿಕ ಪಾಂಡ ವ ಪುರದಿಂದ ಬಂದ ಆ್ಯಂಬುಲೆನ್ಸ್‌ನಲ್ಲಿ ವಿದ್ಯಾರ್ಥಿಗಳನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ರವಾನಿಸಲಾಯಿತು. ಮೇಲುಕೋಟೆಯಲ್ಲಿ ಸಮ ರ್ಪಕ ವಾಗಿ ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲ. ಸಿಬ್ಬಂದಿ ರಜೆಯಲ್ಲಿದ್ದಾಗ ಬೇರೆ ಸಿಬ್ಬಂದಿಯನ್ನು ನಿಯೋಜಿಸುವುದಿಲ್ಲ ಎಂಬ ದೂರು ಕೇಳಿ ಬಂದವು.

ಕ್ರಮ ಕೈಗೊಂಡಿಲ್ಲ: ಕಳೆದ 3 ತಿಂಗಳ ಹಿಂದೆಯೂ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಲಭ್ಯವಾಗದೆ ರೋಗಿ ಯೊಬ್ಬರು ಮೃತಪಟ್ಟಿದ್ದರು. ಇಂತಹ ಘಟನೆ ಗಳು ಪದೇ ಪದೆ ಸಂಭವಿಸುತ್ತಿ ದ್ದರೂ ಅಧಿಕಾರಿ ಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ದಿಲೀಪ್‌, ಶಿವಕುಮಾರ್‌, ಶಶಿ, ನರಸಿಂಹ್ಮೆಗೌಡ, ಪ್ರದೀಪ್‌, ಸತ್ಯ ಮತ್ತಿತರರು ದೂರಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next