Advertisement

ಶುದ್ಧ ನೀರಿನ ಘಟಕದ ಡ್ರಮ್‌ನಲ್ಲಿ ಬಿದ್ದು ವಾಟರ್‌ಮ್ಯಾನ್‌ ಸಾವು

02:06 PM Nov 22, 2019 | Team Udayavani |

ನೆಲಮಂಗಲ: ಶುದ್ಧ ಕುಡಿಯುವ ನೀರಿನ ಘಟಕದ ಸ್ಟೀಲ್‌ ಡ್ರಮ್‌ಗೆ ಬಿದ್ದು ವಾಟರ್‌ಮ್ಯಾನ್‌ ಸಾವನಪ್ಪಿರುವ ಘಟನೆ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.  ಅರಿಶಿನಕುಂಟೆ ಗ್ರಾಮದ ನಿವಾಸಿಯಾದ ಸೋಮಶೇಖರ್‌ (44) ಮೃತ ದುದೈವಿಯಗಿದ್ದು, 5 ವರ್ಷಗಳಿಂದ ಅರಿಶಿನಕುಂಟೆ ಗ್ರಾಮ ಪಂಚಾಯಿತಿಯಲ್ಲಿ ವಾಟರ್‌ ಮ್ಯಾನ್‌ ಕೆಲಸಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದನು.

Advertisement

ಗುರುವಾರ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಬಂದ ಸೋಮಶೇಖರ್‌ ಪಂಚಾಯಿತಿ ಹಿಂಭಾಗದ ಶುದ್ಧ ಕುಡಿಯುವ ನೀರಿನ ಘಟಕದ ಒಳಭಾಗದಲ್ಲಿನ ಸ್ಟೀಲ್‌ ಡ್ರಮ್‌ನಲ್ಲಿ ನೀರು ತುಂಬಿರುವುದನ್ನು ತಿಳಿಯಲು ಎಣಿಯ ಸಹಾಯದಿಂದ ಹತ್ತಿ ನೋಡಲು ಹೋದಾಗ ಡ್ರಮ್‌ನ ಒಳಗೆ ಬಿದ್ದಿದ್ದಾನೆ, ನಂತರ ಸೋಮಶೇಖರ್‌ ಘಟಕದಿಂದ ಹೊರಗೆ ಬರದಿರುವುದನ್ನು ಕಂಡ ಸಹೋದ್ಯೋಗಿಗಳು ಪರಿಶೀಲಿಸಿದಾಗ ಸ್ಟೀಲ್‌ ಡ್ರಮ್‌ ಹೊಳಭಾಗದಲ್ಲಿ ಮೃತನಾಗಿರುವುದು ಕಂಡು ಬಂದಿದೆ. ನೆಲಮಂಗಲ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸೋಮ ಶೇಖರ್‌ಗೆ 12 ಹಾಗೂ 13 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖನಾಗಿದ್ದನು.

ಸೋಮಶೇಖರ್‌ ಸಾವಿನಿಂದ ಹೆಂಡತಿ ಮತ್ತು ಸಣ್ಣ ಮಕ್ಕಳು ಪೋಷಕರು ಕಂಗಾಲಾಗಿದ್ದು, ಜೀವನ ಸಾಗಿಸಲು ದಿಕ್ಕುತೋರದಂತಾಗಿದೆ. ಪರಿಹಾರದ ಭರವಸೆ: ಗ್ರಾಮಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್‌ ಕೆಲಸದ ಸಮಯದಲ್ಲಿಮೃತನಾಗಿರುವ ಕಾರಣ 2 ಲಕ್ಷ ಪರಿಹಾರ ನೀಡುವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದು, ಇಂದು ನಡೆಯುವ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಪರಿಹಾರವನ್ನು ನೀಡಲಾಗುತ್ತದೆ. ವಿದ್ಯಾರ್ಹತೆ ಅನುಗುಣವಾಗಿ ಮೃತನ ಪತ್ನಿಗೆ ಕೆಲಸ ನೀಡಲಾಗುವುದು. ಈಗಾಗಲೇ ಅಂತ್ಯಕ್ರಿಯೆಗೆ 15 ಸಾವಿರ ನೀಡಲಾಗಿದೆ ಎಂದು ಇಓ ಲಕ್ಷ್ಮೀನಾರಾಯಣಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next