Advertisement

ಪುರಾತನ ಬಡವಿಲಿಂಗಕ್ಕೆ ಜಲಮುಕ್ತಿ!

10:21 AM Jul 20, 2017 | |

ಹೊಸಪೇಟೆ: ಸದಾ ಜಲದಲ್ಲೇ ಇದ್ದು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದ ಐತಿಹಾಸಿಕ ಹಂಪಿಯ ಬೃಹತ್‌ ಬಡವಿ ಲಿಂಗ(ಶಿವಲಿಂಗ) ಅಪರೂಪಕ್ಕೆ ಜಲಸ್ತಂಭನದಿಂದ ಹೊರಬಂದು ದರ್ಶನ ಭಾಗ್ಯ ನೀಡಿದ್ದಾನೆ.

Advertisement

ಹೌದು! ಹಂಪಿಯ ಪುರಾತನ ಬಡವಿ ಲಿಂಗ ದೇವಸ್ಥಾನ ಸದಾ ಕಾಲವೂ ನೀರಿ ನಿಂದ ಆವೃತ್ತವಾಗಿರುತ್ತದೆ. ಇಲ್ಲಿರುವ ಸುಮಾರು 3 ಮೀಟರ್‌ ಎತ್ತರದ ಏಕ ಶಿಲಾ ಬೃಹತ್‌ ಶಿವಲಿಂಗ ಯಾವಾಗಲೂ ನೀರಿನಲ್ಲೇ ಮುಳುಗಿರುತ್ತದೆ. ನೀರಿನಿಂದಾಗಿ ಶಿವಲಿಂಗದ ಪೂರ್ಣ ದರ್ಶನವಾಗುವುದೇ ಇಲ್ಲ. ಆದರೆ ಇತ್ತೀ ಚೆಗೆ ಶಿವಲಿಂಗ ಸಂಪೂರ್ಣ ಗೋಚರವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ದೇವಾಲಯದಲ್ಲಿನ ಅಷ್ಟೂ ನೀರನ್ನು ಹೊರ ಹಾಕಿ ಸ್ವತ್ಛತಾ ಕಾರ್ಯ ಕೈಗೊಂಡಿದೆ. ಹೀಗಾಗಿ ಸಂಪೂರ್ಣ ಶಿವ ಲಿಂಗ
ದರ್ಶನವಾಗಿದೆ. ವರ್ಷವಿಡೀ ನೀರಿನಲ್ಲಿ ಮುಳುಗಿರುತ್ತಿದ್ದ ಶಿವಲಿಂಗ ಕಂಡಿದ್ದ ಭಕ್ತರು ನೀರು ಖಾಲಿಯಾದ ಸಂದರ್ಭದಲ್ಲಿ ಲಿಂಗದ ದರ್ಶನ ಪಡೆದು ಧನ್ಯರಾದರು.

ದೇವಾಲಯದಲ್ಲಿದ್ದ ನೀರನ್ನು ಹೊರಹಾಕುತ್ತಿದ್ದಂತೆ ವೃತ್ತಾಕಾರದ ಎತ್ತರದ ಶಿವ ಪೀಠವು ಸ್ಥಳದಲ್ಲಿದ್ದ ಕೆಲ ಭಕ್ತರಿಗೆ ಮಾತ್ರ ಗೋಚರವಾಯಿತು. ಹೀಗೆ ಶಿವಲಿಂಗದ ಸಂಪೂರ್ಣ ದರ್ಶನವಾಗುವುದ ಸಹ ಕೆಲ ಹೊತ್ತು ಮಾತ್ರ. ಕಾರಣ ಪುನಃ ದೇವಾಲಯದಲ್ಲಿ ನೀರು ಸಂಗ್ರಹವಾಗಿ ಬಡವಿ ಲಿಂಗದ ತಳ ಭಾಗ ಜಲಾವೃತವಾಗಿ, ವೀಕ್ಷಣೆಗೆ ಅವಕಾಶ ಸಿಗುವುದಿಲ್ಲ.

ಸುಮಾರು 3 ಮೀಟರ್‌ಗಳಷ್ಟು ಎತ್ತರವಾದ ಬೃಹದಾಕಾರದವಾದ ಶಿವ ಲಿಂಗವು ಪಕ್ಕ ದಲ್ಲಿರುವ ಉಗ್ರನರಸಿಂಹ ವಿಗ್ರಹ ದಂತೆ
ಏಕ ಶಿಲಾ ವಿಗ್ರಹವಾಗಿದ್ದು, ಅಲ್ಲಿಯೇ ದೊರೆತ ಹೆಬ್ಬಂಡೆಯಿಂದ ಕೆತ್ತಲ್ಪಟ್ಟಿದೆ. ಸನಿಹದಲ್ಲಿ ತ್ರೀವ ಕೃಷಿ ಚಟುವಟಿಕೆಯಿಂದ
ಈ ಭಗ್ನಗೊಂಡ ದೇವಾಲಯದಲ್ಲಿ ಸದಾ ಕಾಲವೂ ನೀರು ತುಂಬಿರುವುದರಿಂದ ಶಿವ ಲಿಂಗ ಪೀಠವೂ ನೀರಿನಲ್ಲಿ ಜಲಾವೃತವಾಗಿರುತ್ತದೆ. ಸ್ಥಾನಿಕವಾಗಿ ಈ ಶಿವ ಲಿಂಗವನ್ನು ವೃತ್ತಾಕಾರದ ಎತ್ತರ ಪೀಠ ಹಾಗೂ ಪ್ರನಾಳ ಸಹಿತ ಯೋನಿ ಪೀಠ  ಹೊಂದಿದೆ. ಶಿವ ಲಿಂಗವು ಸ್ತಂಭಾ ಕೃತಿಯಲ್ಲಿದ್ದು, ಶಿರೋಭಾಗ ಸ್ವಲ್ಪ ಚಪ್ಪಟೆಯಾಗಿದೆ. ಸೋಮ ಸೂತ್ರದ ಬಳಿಯಲ್ಲಿ ಮೂರು ಕಣ್ಣುಗಳನ್ನು ಚಿತ್ರಿಸಲಾಗಿದೆ. ಗರ್ಭ ಗೃಹದ ಕಟ್ಟಡವನ್ನು ಕಲ್ಲು, ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. ಸ್ಥಾನಿಕವಾಗಿ ಈ ದೇವಾಲಯವನ್ನು ಬಡವಿಯಾದ ಹೆಣ್ಣು ಮಗಳು ಕಟ್ಟಿಸಿದಳೆಂದು ಉಲ್ಲೇಖೀಸಲಾಗಿದೆ. ಹೀಗಾಗಿ ಈ ಶಿವ ಲಿಂಗವನ್ನು ಬಡವಿ ಲಿಂಗ ಎಂದು ಕರೆಯಲಾಗುತ್ತಿದೆ.

ಪಿ. ಸತ್ಯನಾರಾಯಣ

Advertisement
Advertisement

Udayavani is now on Telegram. Click here to join our channel and stay updated with the latest news.

Next