Advertisement

ಸೌರವ್ಯವಸ್ಥೆ ಹೊರಗೂ ನೀರಿದೆ

09:51 AM Sep 14, 2019 | mahesh |

ಲಂಡನ್‌: ಅತ್ಯಂತ ಮಹತ್ವದ ಸಂಶೋಧನೆಯೊಂದರಲ್ಲಿ ನಮ್ಮ ಸೌರ ವ್ಯವಸ್ಥೆಯ ಹೊರಗಿನ ಕೆ2-18ಬಿ ಗ್ರಹದಲ್ಲಿ ನೀರು ಇರುವುದು ಕಂಡುಬಂದಿದೆ. ನೇಚರ್‌ ಆಸ್ಟ್ರಾನಮಿ ಎಂಬ ನಿಯತಕಾಲಿಕೆಯಲ್ಲಿ ಈ ಕುರಿತ ವರದಿ ಪ್ರಕಟವಾಗಿದ್ದು, ಭೂಮಿಯನ್ನು ಹೊರತುಪಡಿಸಿದರೆ ಇದೊಂದೇ ಗ್ರಹದಲ್ಲಿ ವಾಸಿಸಲು ಅನುಕೂಲವಾಗುವಂಥ ನೀರು ಮತ್ತು ವಾತಾವರಣ ಇದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

Advertisement

ಭೂಮಿಗಿಂತ 8 ಪಟ್ಟು ದೊಡ್ಡ ಗ್ರಹ: ಭೂಮಿಯಿಂದ 118 ಜ್ಯೋತಿರ್ವರ್ಷ ದೂರದಲ್ಲಿ ಇರುವ ಈ ಗ್ರಹ, ಭೂಮಿಗಿಂತ ಎಂಟು ಪಟ್ಟು ಹೆಚ್ಚು ದೊಡ್ಡದಾಗಿದೆ. ನಾಸಾದ ಹಬಲ್ ಸ್ಪೇಸ್‌ ಟೆಲಿಸ್ಕೋಪ್‌ ಬಳಸಿ ಅಧ್ಯಯನ ನಡೆಸಲಾಗಿದೆ ಎಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ಆಂಗೆಲೋಸ್‌ ಸಿಯಾರಾಸ್‌ ಹೇಳಿದ್ದಾರೆ. ಕೆ2-18ಬಿ ಎಂಬುದು ಭೂಮಿ 2.0 ಅಲ್ಲ. ಭೂಮಿಗಿಂತ ದೊಡ್ಡದು ಹಾಗೂ ವಿಭಿನ್ನ ವಾತಾವರಣವನ್ನು ಹೊಂದಿದೆ.

ಈಗ ಲಭ್ಯವಿರುವ ದತ್ತಾಂಶ ಹಾಗೂ ಸಂಶೋಧನೆ ಮಾಹಿತಿಯನ್ನೇ ಬಳಸಿಕೊಂಡಿರುವ ಇವರು, ವಾತಾವರಣದಲ್ಲಿ ನೀರಿನ ಕಣಗಳು ಇರುವುದನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಗ್ರಹದ ವಾತಾವರಣದಲ್ಲಿ ಹೀಲಿಯಂ ಕೂಡ ಲಭ್ಯವಿದೆ. ನೈಟ್ರೋಜನ್‌ ಹಾಗೂ ಮೀಥೇನ್‌ ಕೂಡ ಇಲ್ಲಿ ಇರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಾವು ಕಂಡುಕೊಂಡ ಅತ್ಯಂತ ತಂಪಾದ ಗ್ರಹ ಇದಾಗಿದೆ ಎಂದು ಇನ್ನೊಬ್ಬ ಸಂಶೋಧಕಿ ಜೋಶ್‌ ಲೋತ್ರಿಂಗರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next