Advertisement

ಅಡಿಕೆ ವರ್ತಕರ ಸಂಘದಿಂದ ಯಡಳ್ಳಿಗೆ ನೀರಿನ ಘಟಕ

02:21 PM Jan 11, 2022 | Team Udayavani |

ಶಿರಸಿ: ತಾಲೂಕಿನ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ  ಸಮಿತಿಗೆ ಶಿರಸಿಯ ಅಡಿಕೆ ಕಾಳುಮೆಣಸು ಹಾಗೂ ಏಲಕ್ಕಿ  ವರ್ತಕರ ಸಂಘದಿಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ  ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ  ಘಟಕವನ್ನು ದೇಣಿಗೆ ನೀಡಲಾಯಿತು.

Advertisement

ಶಿರಸಿ ಅಡಿಕೆ ವರ್ತಕರ ಸಂಗದ ಅಧ್ಯಕ್ಷರಾದ ಸತೀಶ  ಭಟ್ಟ ನಾಡಗುಳಿ, ನೀರಿನ ಘಟಕದ ನಲ್ಲಿ ತಿರುಗಿಸುವ  ಮೂಲಕ ಘಟಕದ ಚಾಲನೆ ಮಾಡಿದರು. ವರ್ತಕರ ಸಂಘದ ಪರವಾಗಿ ಪ್ರಧಾನ ಕಾರ್ಯದರ್ಶಿ ಲೋಕೇಶ ಹೆಗಡೆ ಪ್ರಗತಿ, ಇಂದು ನಮ್ಮ  ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರಮುಖವಾಗಿ ನೀರು  ಎಲ್ಲರಿಗೂ ಬೇಕು ಅದರಲ್ಲೂ ವಿದ್ಯಾರ್ಥಿಗಳಿಗೆ ನೀರು  ಪ್ರಮುಖವಾಗಿದ್ದು ಶುದ್ಧ ನೀರನ್ನು ಸೇವಿಸಿದರೆ ಯಾವುದೇ ರೋಗಗಳು ಬರುವದಿಲ್ಲ ಹಾಗೆ  ಅನುಕೂಲವಾಗಲೆಂದು ವಿದ್ಯಾರ್ಥಿಗಳಿಗಾಗಿ ಈ ಸಂಸ್ಥೆಗೆ  ಶುದ್ಥ ನೀರಿನ ಘಟಕ ನೀದಲಾಗಿದೆ ಎಂದರು.

ವೇದಿಕೆಯಲ್ಲಿ ವರ್ತಕರ ಸಂಘದ ಕಾರ್ಯದರ್ಶಿ  ಸದಾನಂದ ಹೆಗಡೆ, ಖಜಾಂಜಿ ರಿಜ್ವಾನ್ ಬೆಸಾನಿಯಾ, ಪ್ರಾಚಾರ್ಯ  ಡಾ. ಆರ್.ಟಿ.ಭಟ್ಟ,  ಗಿರಿಧರ ಕಬ್ನಳ್ಳಿ ಉಪಸ್ಥಿತರಿದ್ದರು.ನೀರಿನ ಘಟಕದ ದೇಣಿಗೆಗಾಗಿ ಮಾ.ಶಿ.ಪ್ರ ಸಮಿತಿಯ ಗೌರವ ಕಾರ್ಯದರ್ಶಿ ಎಂ.ವಿ ಹೆಗಡೆ ಕಾನಗೋಡ ಅಭಿನಂದನೆ ತಿಳಿಸಿದರು. ಮುಖ್ಯಾಧ್ಯಾಪಕ ಕೆ.ಜಿ. ಭಟ್ಟ ಮಶಿಗದ್ದೆ ಸ್ವಾಗತಿಸಿದರು. ಶಿಕ್ಷಕ  ಹನುಮಂತಪ್ಪ ಎಸ್ ಆರ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next