Advertisement

ಜಗಳೂರು ಕ್ಷೇತ್ರದ 57 ಕೆರೆಗಳಿಗೆ ಶೀಘ್ರ ನೀರು

09:31 AM Jun 23, 2020 | Suhan S |

ಜಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಗಳೂರು ಕ್ಷೇತ್ರದ 57 ಕೆರೆಗೆ ನೀರು ಹರಿದು ಬರಲಿದ್ದು, ಬರದ ನಾಡು ಎಂಬ ಹಣೆಪಟ್ಟಿಯನ್ನು ತೆಗೆದು ಹಾಕಲಾಗುವುದು ಎಂದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು.

Advertisement

ಸೋಮವಾರ ಹರಿಹರ ತಾಲೂಕಿನ ದೀಟೂರು ಬಳಿ ಹಾಗೂ ಹರಪನಹಳ್ಳಿ ತಾಲೂಕಿನ ಚಟ್ನಹಳ್ಳಿ ಬಳಿ 57ಕೆರೆ ನೀರು ತುಂಬಿಸುವ ಯೋಜನೆಯ ಜಾಕ್‌ ವೆಲ್‌ ಮತ್ತು ಪೈಪ್‌ಲೈನ್‌ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಪೈಪ್‌ಲೈನ್‌ ಆಳವಡಿಸಲು ಈಗಾಗಲೇ ಟ್ರಂಚ್‌ ಹೊಡೆದಿದ್ದು ಲೊರೊನಾ ಕಾರಣದಿಂದ 18 ಕಿಮೀ ಪೈಪ್‌ಲೈನ್‌ ಕಾಮಗಾರಿ ವಿಳಂಬವಾಗಿದೆ. ಆದರೂ ಕಾಮಗಾರಿಗೆ ಚುರುಕು ಮುಟ್ಟಿಸಲಾಗಿದೆ ಎಂದರು.

ಸೆಪ್ಟಂಬರ್‌ ಅಥವಾ ಅಕ್ಟೋಬರ್‌ ವೇಳೆಗೆ ತಾಲೂಕಿನ 57 ಕೆರೆಗಳಿಗೆ ನೀರು ಬರುವಂತೆ ಮಾಡಲಾಗುವುದು. ಇದು ಸಿರಿಗೆರೆ ಶ್ರೀಗಳ ಕೃಪಾಕಟಾಕ್ಷವಾಗಿದ್ದು, ಶಾಸಕ ಎಸ್‌ .ವಿ. ರಾಮಚಂದ್ರಪ್ಪ ಪ್ರಯತ್ನ ಹಾಗೂ ನಾನು ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಮಂಜೂರಾತಿ ಮಾಡಿಸಿದ್ದೇನೆ. ಹರಿಹರದಲ್ಲಿ ಯಾವುದೇ ಅಡಚಣೆ ಬಂದರೂ ಮಿತ್ರ ಶಾಸಕ ರಾಮಪ್ಪನವರು ನಮಗೆ ಸಹಕರಿಸುತ್ತಾರೆ. ಅವರ ಬೇಡಿಕೆಗೆ ಸ್ಪಂದಿಸಿ ಸರ್ಕಾರದ ಗಮನಕ್ಕೆ ತಂದು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಸಂಸದ ಸಿದ್ದೇಶ್ವರ ಅವರ ಸಹಕಾರದಿಂದ ನೀರಾವರಿ ಯೋಜನೆಗಳ ಕನಸು ನನಸಾಗುತ್ತಿದೆ. ಕೆಲವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಕಿವಿಗೊಡದೆ ನನ್ನ ಹಾಗೂ ಬಿಜೆಪಿ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದು ಮನವಿ ಮಾಡಿದರು. ಹರಿಹರ ಶಾಸಕ ರಾಮಪ್ಪ ಮಾತನಾಡಿ, ಜಗಳೂರು ವಿಧಾನಸಭಾ ಕ್ಷೇತ್ರಕ್ಕೆಕೆರೆನೀರು ತುಂಬಿಸುವ ಯೋಜನೆ ಕಾಮಗಾರಿಗೆ ಅಡ್ಡಿಯಾಗದಂತೆ ನಾನು ಸಹಕಾರ ನೀಡುತ್ತೇನೆ. ನನ್ನ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕಗಳು ಬಂದರೆ ನಿಭಾಯಿಸುತ್ತೇನೆಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್‌ ಪಲ್ಲಾಗಟ್ಟೆ, ಮುಖಂಡರಾದ ಚಟ್ನಹಳ್ಳಿ ರಾಜಪ್ಪ, ಕರ್ನಾಟಕ ನೀರಾವರಿ ನಿಗಮದ ಇಂಜಿನಿಯರ್‌ಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next