ಎಚ್.ಡಿ.ಕೋಟೆ: ಕಳೆದ 6 ದಿನಗಳ ಬಳಿಕ ಬೋರ್‌ವೆಲ್‌ಗೆ ಮೋಟಾರ್ ಅಳವಡಿಸಿದ್ದು ಬಾಲಕಿಯರ ಹಾಸ್ಟೆಲ್‌ಗೆ ನೀರು ಪೂರೈಕೆ ಆಗುತ್ತಿದೆ.
ಸ್ವಗ್ರಾಮಗಳಿಗೆ ತೆರಳಿದ್ದರು: ಪಟ್ಟಣದ ಹೌಸಿಂಗ್ ಬಡಾವಣೆಯಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದುನೀರಿಲ್ಲದೇ ವಿದ್ಯಾರ್ಥಿನಿಯರು ಪರದಾಡುತ್ತಿದ್ದರು. ಅಲ್ಲದೇ, 110 ಮಂದಿಯಲ್ಲಿ ಕೇವಲ 11 ಮಂದಿ ವಿದ್ಯಾರ್ಥಿನಿಯರು ಮಾತ್ರ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿ ಉಳಿದವರು ಸ್ವ ಗ್ರಾಮಗಳಿಗೆ ತೆರಳಿದ್ದರು.
ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು: ಈ ಸಂಬಂಧ ಜ.26ರಂದು “ಉದಯವಾಣಿ’ಯಲ್ಲಿ “ಹಾಸ್ಟೆಲ್‌ನಲ್ಲಿ ನೀರಿಲ್ಲದೆ ಮನೆಗಳತ್ತ ಹೊರಟರು !’ ಶೀರ್ಷಿಕೆಯಡಿ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಸವಿವರವಾಗಿ ಪ್ರಕಟಿಸಿತ್ತು. ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆಅಧಿಕಾರಿಗಳು, ನಿಲಯ ಪಾಲಕರು ಒಂದೇ ದಿನದಲ್ಲಿ ಬೋರ್‌ವೆಲ್‌ಮೋಟಾರ್ ದುರಸ್ಥಿಗೊಳಿಸಿ ಸಮಸ್ಯೆ ನೀಗಿಸಿದ್ದಾರೆ. ಈ ಮೂಲಕ ಉದಯವಾಣಿಗೆ ವಿದ್ಯಾರ್ಥಿನಿಯರು ಧನ್ಯವಾದ ತಿಳಿಸಿದ್ದಾರೆ.