Advertisement

ನೀರಿನ ಮೂಲ ಪರಿಶೀಲಿಸಿದ ಶಾಸಕ

02:58 PM Apr 28, 2017 | Team Udayavani |

ಶಹಾಬಾದ: ಸಮೀಪದ ತೊನಸನಹಳ್ಳಿ (ಎಸ್‌) ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವ ಸಂಬಂಧ ಗುರುವಾರ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ.ರಾಮಕೃಷ್ಣ ಅವರು ತೆಗನೂರ ಗ್ರಾಮದ ಕೊಳವೆ ಬಾವಿ, ಗೋಳಾ ಗ್ರಾಮದ ಬ್ರಿಡ್ಜ್ ಕಮ್‌ ಬ್ಯಾರೇಜ್‌ಗೆ ಬೇಟಿ ನೀಡಿ ನೀರಿನ ಮೂಲವನ್ನು ಪರಿಶೀಲಿಸಿದರು. 

Advertisement

ನಂತರ ಮಾತನಾಡಿದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ.ರಾಮಕೃಷ್ಣ, ಬಹುಗ್ರಾಮದ ಕುಡಿಯುವ ನೀರಿನ ಯೋಜನೆ ಸರ್ಕಾರ ಮಟ್ಟದಲ್ಲಿ ತಾಂತ್ರಿಕ ತೊಂದರೆ ಇದ್ದು, ಯೋಜನೆ ಅನುಮೋದನೆ ನೀಡಲು ಇನ್ನೂ ನಾಲ್ಕು ತಿಂಗಳು ವಿಳಂಬವಾಗಬಹುದು. ಸದ್ಯದಲ್ಲಿ ತೆಗನೂರ ಗ್ರಾಮದ ಕೊಳವೆ ಬಾವಿಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದರು. 

ಅಂತರ್ಜಲ ಕಡಿಮೆಯಿರುವ ಕಾರಣ ಹಾಗೂ ಪದೇ ಪದೇ ಪೈಪ್‌ಲೈನ್‌ ದುರಸ್ತಿ ಬರುತ್ತಿರುವುದರಿಂದ ಮತ್ತೆ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಬೇಸಿಗೆ ಕಾಲ ಇರುವುದರಿಂದ ತುರ್ತಾಗಿ ಗ್ರಾಮದ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಎಚ್‌.ಕೆ.ಆರ್‌.ಡಿ.ಬಿ ಅನುದಾನದಲ್ಲಿ

ಸುಮಾರು 1.80ಲಕ್ಷ ರೂ.ದಲ್ಲಿ ಗೋಳಾ ಗ್ರಾಮದ ಬ್ರಿಡ್ಜ್ ಕಮ್‌ ಬ್ಯಾರೇಜ್‌ನಿಂದ ತೊನಸನಹಳ್ಳಿ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಸುಮಾರು 10ಕಿಮೀ ಪೈಪ್‌ಲೈನ್‌ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ.

ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ತೊನಸನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಬೀರವಾಗಿದೆ ಎಂದು ಮನವರಿಕೆ ಮಾಡಲಾಗಿದೆ ಎಂದು ಹೇಳಿದರು. ಉಸ್ತುವಾರಿ ಸಚಿವರು ತೊನಸಿನಹಳ್ಳಿ (ಎಸ್‌) ಗ್ರಾಮದ ಕುಡಿಯುವ ನೀರಿನ ಜ್ವಲಂತ ಸಮಸ್ಯೆಯನ್ನು ಹೋಗಲಾಡಿಸಲು

Advertisement

ಗೋಳಾ(ಕೆ) ಗ್ರಾಮದ ಕಾಗಿಣಾ ನದಿಯ ಬ್ರಿಡ್ಜ್ ಕಮ್‌ ಬ್ಯಾರೇಜ್‌ದಿಂದ ತೊನಸನಹಳ್ಳಿ (ಎಸ್‌) ಗ್ರಾಮಕ್ಕೆ ಕುಡಿಯುವ ನೀರಿನ ಪೈಪ್‌ಲೈನ್‌ನ ಸರ್ವೇ ಮಾಡಲು ಮೇಲಾಧಿಧಿಕಾರಿಗಳಿಗೆ ಸೂಚಿಸಿದ್ದಾರೆ. ಒಂದೆರಡು ದಿನದಲ್ಲಿ ಅಧಿಧಿಕಾರಿಗಳು ಸರ್ವೇ ಮಾಡಲು ಬರಲಿದ್ದಾರೆ. ಸದ್ಯದಲ್ಲೇ ಶಾಶ್ವತ ಪರಿಹಾರ ಸಿಗಲಿದೆ.

ಇದರಿಂದ ತೊನಸನಹಳ್ಳಿ ಗ್ರಾಮದ ಜನರು ಎರಡು ದಶಕದಿಂದ ಕುಡಿಯುವ ನೀರಿನ ಕೂಗಿಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎಂದರು.ಯೋಜನೆ ಫಲಪ್ರವಾದರೆ ಮುಂದಿನ ದಿನಗಳಲ್ಲಿ ತರನಳ್ಳಿ ಹಾಗೂ ಕಡೆಹಳ್ಳಿ ಗ್ರಾಮಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದರು. 

ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ, ಮುಖಂಡ ವಿಜಯಕುಮಾರ ರಾಮಕೃಷ್ಣ,ಮರತೂರ ಗ್ರಾಪಂ ಸದಸ್ಯ ಅಜೀತಕುಮಾರ ಪಾಟೀಲ, ಕಾಂಗ್ರೆಸ್‌ ಮುಖಂಡರಾದ ಅಪ್ಪುಗೌಡ ತರನಳ್ಳಿ, ಮರತೂರ ಗ್ರಾಪಂ ಉಪಾಧ್ಯಕ್ಷ ಸಂಜಕುಮಾರ ದಳಪತಿ, ಶೇರ್‌ಅಲಿ ಸೌದಾಗರ್‌, ಮಹೇಶ ದೇವಣಿ, ಹಣಮಂತ ಸೂರಿ, ಲಕ್ಷಣ ತರನಳ್ಳಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next