Advertisement

15 ವರ್ಷಗಳ ಬಳಿಕ ಕಾಣಿಸಿದೆ ನೀರಿನ ಸಮಸ್ಯೆ

10:55 PM Apr 21, 2019 | Team Udayavani |

ಬಜಪೆ: ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶದಲ್ಲೂ ಈಗ ನೀರಿನ ಸಮಸ್ಯೆ ಕಾಣಿಸಲಾರಂಭಿಸಿದೆ. ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅದ್ಯಪಾಡಿ ದೇವಸ್ಥಾನದ ಬಳಿ ಇರುವ ಸರಕಾರಿ ಬಾವಿಯ ನೀರಿನ ಮಟ್ಟ 15 ವರ್ಷಗಳ ಬಳಿಕ ಅಳಕ್ಕೆ ಇಳಿದಿದೆ.ಇದರಿಂದ ಈ ಪ್ರದೇಶ ಈಗ ನೀರಿನ ಕೊರತೆ ಕಾಡತೊಡಗಿದೆ.

Advertisement

ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬಳಿ ಇರುವ ಸರಕಾರಿ ಬಾವಿಯಿಂದ ಸುಮಾರು 50 ಮನೆಗಳಿಗೆನೀರು ಸರಬರಾಜು ಮಾಡಲಾಗುತ್ತಿದೆ. ಅದ್ಯಪಾಡಿ, ಅರ್ಬಿ,ಕೊಲ್ಲೊಟ್ಟು, ಸಂಕೇಶ ಹಾಗೂ ದೇವಸ್ಥಾನದ ಪರಿಸರದ ಮನೆಗಳು ಈ ಬಾವಿಯ ನೀರನ್ನೇ ಅವಲಂಬಿಸಿದೆ.

ಸುಮಾರು 35 ರಿಂದ 40 ಅಡಿ ಅಳದ ಈ ಬಾವಿಯಲ್ಲಿ ನೀರಿನ ಮಟ್ಟ ಅಳಕ್ಕೆ ಇಳಿದ ಕಾರಣ 30 ಮನೆಗಳಿಗೆ ನೀರಿನ ಅಭಾವ ಕಾಡತೊಡಗಿದೆ.ಇದರಿಂದ ಸಂಕಷ್ಟ ಎದುರಾಗಿದೆ.

ಬಾವಿಯ ಕೆಸರು ತೆಗೆಯದೆ 15 ವರ್ಷ
15 ವರ್ಷಗಳ ಹಿಂದೆ ಈ ಸರಕಾರಿ ಬಾವಿಯನ್ನು ಕೊರೆಯಲಾಗಿತ್ತು. ನೀರಿನ ಸಮಸ್ಯೆ ಇಲ್ಲದ ಕಾರಣ ಈ ಬಾವಿಯ ಕೆಸರನ್ನೇ 15 ವರ್ಷಗಳಿಂದ ತೆಗೆದಿಲ್ಲ. ಇದರಿಂದ ಸುಮಾರು 4 ಅಡಿಗಳಷ್ಟು ಬಾವಿಯಲ್ಲಿ ಕೆಸರು ತುಂಬಿದ್ದು, ಇಲ್ಲಿನ ಜನರಿಗೆ ನೀರಿನ ಅಭಾವ ಕಂಡು ಬಂದ ಕಾರಣ ಕೆಸರು ತೆಗೆಯುವ ಅನಿವಾರ್ಯತೆ ಎದುರಾಯಿತು.

ತಾ. ಪಂ. ಮಾಜಿ ಸದಸ್ಯ ಶಿವಪ್ಪ ಬಂಗೇರ ಹಾಗೂ ಬಜರಂಗದಳದ ಭುಜಂಗ ಕುಲಾಲ್‌ ಅವರ ನೇತೃತ್ವದಲ್ಲಿ ರವಿವಾರ ಬಾವಿಯ ಕೆಸರು ತೆಗೆ ಯಲು ಸುಮಾರು 16 ಮಂದಿ ಒಗ್ಗೂಡಿದರು.40 ಅಡಿ ಅಳದ ಈ ಬಾವಿಗೆ ಇಳಿಯುವುದೇ ಒಂದು ಸಾಹಸವಾಗಿತ್ತು. ಬಾವಿಯಲ್ಲಿ ತುಂಬಿದ್ದ ಕೆಸರನ್ನು ತೆಗೆಯ ಲಾಯಿತು. ಕೆಸರು ತೆಗೆದ ಕಾರಣ ನೀರಿನ ಮಟ್ಟ ಏರತೊಡಗಿದ್ದು, ಪಂಪ್‌ನ ಮೂಲಕ ಟ್ಯಾಂಕ್‌ಗೆ ನೀರು ಸರಬರಾಜು ಮಾಡಿ ಪರಿಸರದ ಜನರಿಗೆ ಒದಗಿಸಲು ಸಹಕಾರಿಯಾಗಲಿದೆ.

Advertisement

ಅಂತರ್ಜಲ ಕುಸಿತ ಕಾರಣ
ಗುರುಪುರ ನದಿ ಕೇವಲ 200 ಮೀಟರ್‌ ದೂರದಲ್ಲಿ ಹರಿಯುತ್ತಿದೆ. ಅದರೂ ಕೂಡ ನೀರಿನ ಮಟ್ಟ ಅಳಕ್ಕೆ ಇಳಿದಿ ರುವುದು ಅಂತರ್ಜಲ ಮಟ್ಟದ ಕುಸಿತದ ಪರಿಣಾಮ ವಾಗಿದೆ. ಈ ಬಾವಿಯ ಕೆಸರನ್ನು ತೆಗೆದುದ್ದರಿಂದ ನೀರಿನ ಅಭಾವ ಕೊಂಚ ಮಟ್ಟಿಗೆ ಸುಧಾರಿಸಲಿದೆ.

 ನೀರಿನ ಸಮಸ್ಯೆ
ಆದ್ಯ ಪಾಡಿ ಭಾಗದಲ್ಲಿ ಈ ಬಾರಿ ಇಲ್ಲಿ ನೀರಿನ ಸಮಸ್ಯೆ ಎದು ರಾಗಿದೆ. ಬಾವಿಯ ಕೆಸರು ತೆಗೆಯದೇ 15 ವರ್ಷಗಳಾಗಿತ್ತು. ಹೀಗಾಗಿ ಈ ಬಾರಿ ಕೆಸರು ತೆಗೆಸಿ ಸ್ವಚ್ಛ ಗೊಳಿಸಲಾಯಿತು.
 - ಶಿವಪ್ಪ ಬಂಗೇರ,
ಮಾಜಿ ಸದಸ್ಯ, ತಾಲೂಕು ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next