Advertisement

ಕುಡಿವ ನೀರಿಗೆ ಸಮಸ್ಯೆ ಆಗದಂತೆ ಗಮನಹರಿಸಿ

09:56 PM Apr 17, 2021 | Team Udayavani |

ಚಿತ್ರದುರ್ಗ : ಬೇಸಿಗೆ ವಿಪರೀತವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ತಿಳಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಮಸ್ಯೆ ಇರುವ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅ ಧಿಕಾರಿಗಳು ಕ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಜ್ಞಾನೇಶ್‌ ಮಾತನಾಡಿ, ಜಿಲ್ಲೆಯಲ್ಲಿ ಇದೇ ರೀತಿ ಬೇಸಿಗೆ ಇನ್ನೊಂದು ತಿಂಗಳು ಮುಂದುವರಿದರೆ ಕುಡಿವ ನೀರಿನ ಸಮಸ್ಯೆ ಉದ್ಭವಿಸಬಹುದಾದ 251 ಗ್ರಾಮಗಳ ಪಟ್ಟಿ ಮಾಡಲಾಗಿದೆ. ನೀರಿನ ಯೋಜನೆಗೆ ಸಂಬಂಧಪಟ್ಟಂತೆ 14 ಕೋಟಿ ರೂ. ಕ್ರಿಯಾಯೋಜನೆ ತಯಾರಿಸಿ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಪಟ್ಟಿ ಮಾಡಿ ತಾಲೂಕುವಾರು ಟಾಸ್ಕ್ಫೋರ್ಸ್‌ ಸಮಿತಿಯಲ್ಲಿ ಅನುಮೋದನೆ ಪಡೆಯಬೇಕು. ನಂತರ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮವಹಿಸಬೇಕು ಎಂದು ಜಿಪಂ ಸಿಇಒ ಡಾ.ಕೆ.ನಂದಿನಿದೇವಿ ತಿಳಿಸಿದರು. ಆರ್‌ಓ ಘಟಕಗಳನ್ನು ಸಜ್ಜುಗೊಳಿಸಿ: ಕೊರೊನಾ ಸೋಂಕು ಹೆಚ್ಚಳ ಹಾಗೂ ಬೇಸಿಗೆ ಇರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಿ, ಸಮರ್ಪಕವಾಗಿಟ್ಟುಕೊಂಡು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು 1052 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಚಿತ್ರದುರ್ಗ ತಾಲೂಕಿನಲ್ಲಿ 188 ಆರ್‌ಓ ಘಟಕಗಳಿದ್ದು, 180 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 8 ಘಟಕಗಳು ದುರಸ್ತಿಯಲ್ಲಿವೆ. ಹೊಸದುರ್ಗದಲ್ಲಿ 163 ಆರ್‌ಓ ಘಟಕಗಳಿದ್ದು, 157 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 6 ಘಟಕಗಳು ದುರಸ್ತಿಯಲ್ಲಿವೆ. ಹಿರಿಯೂರಿನಲ್ಲಿ 201 ಆರ್‌ಓ ಘಟಕಗಳಿದ್ದು, 193 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 8 ಘಟಕಗಳು ದುರಸ್ತಿಯಲ್ಲಿವೆ. ಹೊಳಲ್ಕೆರೆಯಲ್ಲಿ 146 ಆರ್‌ಓ ಘಟಕಗಳಿದ್ದು, 139 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 7 ಘಟಕಗಳು ದುರಸ್ತಿಯಲ್ಲಿವೆ. ಮೊಳಕಾಲ್ಮೂರು 79 ಆರ್‌ಓ ಘಟಕಗಳಿದ್ದು, 65 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 14 ಘಟಕಗಳು ದುರಸ್ತಿಯಲ್ಲಿವೆ. ಚಳ್ಳಕೆರೆ ತಾಲೂಕಿನಲ್ಲಿ 278 ಆರ್‌ಓ ಘಟಕಗಳಿದ್ದು, 260 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 18 ಘಟಕಗಳು ದುರಸ್ತಿಯಲ್ಲಿವೆ ಎಂದು ಅಧಿ ಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲ ಆರ್‌ಓ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲಾಖೆಯಿಂದ ಆರು ತಾಲೂಕುಗಳ ಆರ್‌ಓ ಘಟಕಗಳ ರಿಪೇರಿಗೆ ಟೆಂಡರ್‌ ಕರೆದು ಮೂರು ಗುತ್ತಿಗೆ ಸಂಸ್ಥೆಗಳಿಗೆ ವಹಿಸಲಾಗಿದೆ. ಈ ಸಂಸ್ಥೆಯವರು ಆರ್‌ಓ ಘಟಕಗಳ ರಿಪೇರಿ ಮಾಡಬೇಕು. ಆರ್‌ಓ ರಿಪೇರಿಗೆ ಈಗಾಗಲೇ ಸಂಸ್ಥೆಯವರಿಗೆ ಹಣವನ್ನು ನೀಡಲಾಗಿದೆ. ಆದರೂ ಇದುವರೆಗೂ ಆರ್‌ ಓ ಘಟಕಗಳನ್ನು ಯಾಕೆ ರಿಪೇರಿ ಮಾಡಿಲ್ಲ ಎಂದು ಪ್ರಶ್ನಿಸಿದ ಜಿ.ಪಂ ಅಧ್ಯಕ್ಷರು, ರಿಪೇರಿ ಮಾಡದ ಗುತ್ತಿಗೆ ಸಂಸ್ಥೆಯ ಟೆಂಡರ್‌ ರದ್ದುಗೊಳಿಸಿ, ನೋಟಿಸ್‌ ನೀಡಲು ಸೂಚನೆ ನೀಡಿದರು.

ಆಯುಷ್‌ ಔಷಧ ವಿತರಣೆಗೆ ಕ್ರಮವಹಿಸಿ: ಕೋವಿಡ್‌-19 ಸಾಂಕ್ರಾಮಿಕ ರೋಗ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಯುಷ್‌ ಔಷ  ಧಿಗಳನ್ನು ಜನಸಾಮಾನ್ಯರಿಗೆ ಶೀಘ್ರವಾಗಿ ವಿತರಿಸಿ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಸೂಚಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾ ಆಯುಷ್‌ ಅ ಧಿಕಾರಿ ಡಾ.ಕೆ.ಎಲ್‌.ವಿಶ್ವನಾಥ್‌ ಜನವರಿ ತಿಂಗಳಲ್ಲಿ ಔಷ ಧ ಬಂದಿದೆ. ಲ್ಯಾಬೋರೇಟರಿ ವರದಿ ಬಂದ ನಂತರ ಔಷ ಧ ವಿತರಣೆಗೆ ಕ್ರಮವಹಿಸಲಾಗುವುದು ಎಂದರು. ಜಿಪಂ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next