Advertisement

ಚಿಕ್ಕಬಳ್ಳಾಪುರ ಜಿಲ್ಲೆಗೆ ಕೇಂದ್ರದ ಜಲಶಕ್ತಿ ನಿಯೋಗ ದಿಡೀರ್ ಭೇಟಿ

10:13 AM Aug 30, 2019 | Team Udayavani |

ಚಿಕ್ಕಬಳ್ಳಾಪುರ :  ನೆರೆ ಪ್ರವಾಹದಿಂದ ಉತ್ತರ ಕರ್ನಾಟಕದ ಜನ ತತ್ತರಗೊಂಡಿದ್ದರೆ ಮತ್ತೊಂದು ಕಡೆ ಹನಿ ಹನಿ ನೀರಿಗೂ ಪರದಾಡಿ ಬರದಿಂದ ಕಂಗೆಟ್ಟಿರುವ ಬರ ಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಗೆ ಬುಧವಾರ ಕೇಂದ್ರದ ಜಲಶಕ್ತಿ ತಂಡದ ಸದಸ್ಯರು ಭೇಟಿ ನೀಡಿ ಜಿಲ್ಲೆಯ ಅಂತರ್ಜಲ ಪರಿಸ್ಥಿಯನ್ನು ವಿಕ್ಷೀಸಿದರು.

Advertisement

ಕೇಂದ್ರದ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್ ಕುಮಾರ್ ನೇತ್ರತ್ವದಲ್ಲಿ ಕೇಂದ್ರ ಅಯುಷ್ ಇಲಾಖೆಯ ನಿರ್ದೇಶಕ ಶಶಿ ರಂಜನ್, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿರ್ದೇಶಕ ಮನೋಜ್ ಕುಮಾರ್ ಗಂಗೇಯಾ ಹಾಗೂ ಕೇಂದ್ರ ಅಂತರ್ಜಲ ಮಂಡಳಿಯ ತಾಂತ್ರಿಕ ಅಧಿಕಾರಿ ಆರ್.ರಾಕಿ ಮತ್ತಿತರ ಹಿರಿಯ ಅಧಿಕಾರಿಗಳ ತಂಡ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ತಾಲೂಕುಗಳಿಗೆ ಭೇಟಿ ನೀಡಿ ಅಂತರ್ಜಲ ಬಗ್ಗೆ ಅದ್ಯಯನ ನಡೆಸಿತು.

ಜಿಲ್ಲೆಯಲ್ಲಿ ಶಾಶ್ಬತವಾಗಿ ಜಲಮೂಲಗಳ ಸಂರಕ್ಷಣೆಗೆ ಒತ್ತು ಕೊಡಬೇಕು. ಅಂತರ್ಜಲ ಬಳಕೆ ಮಿತಗೊಳ್ಳಬೇಕು, ಪರಿಸರ ಸಂರಕ್ಷಣೆಗೆ ಒತ್ತು ಕೊಡುವಂತೆ ಸಲಹೆ ನೀಡಿದೆ.

ಈ ಸಂದರ್ಭದಲ್ಲಿ ಜಿಪಂ ಸಿಇಒ ಫೌಜಿಯಾ, ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಮತ್ತಿತರರು ಉಪಸ್ಥಿತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next