Advertisement

ಸೋರುತಿಹುದು ಆಸ್ಪತ್ರೆ ಮಾಳಿಗೆ: ಕೋವಿಡ್ ಆಸ್ಪತ್ರೆಯ ಒಳಗೆ ಹರಿಯುತ್ತಿದೆ ಭಾರಿ ನೀರು

05:21 PM Jul 19, 2020 | keerthan |

ಬರೇಲಿ ( ಉತ್ತರ ಪ್ರದೇಶ): ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಮಳೆ ನೀರಿನಿಂದ ತುಂಬಿ ಹೋಗಿದೆ.  ಈ ಮಧ್ಯೆ ಉತ್ತರ ಪ್ರದೇಶ ರಾಜ್ಯದ ಬರೇಲಿಯಲ್ಲಿ ಆಸ್ಪತ್ರೆಯ ಛಾವಣಿ ಸೋರಿಕೆಯಾಗಿ ವಾರ್ಡ್ ನಲ್ಲಿ ನೀರು ತುಂಬಿದ ಘಟನೆ ನಡೆದಿದೆ.

Advertisement

ಬರೇಲಿಯ ಕೋವಿಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ವಾರ್ಡ್ ನ ಛಾವಣಿಯ ಮೇಲಿದ್ದ ಪೈಪ್ ಒಡೆದಿದೆ ಎನ್ನಲಾಗಿದೆ. ವಾರ್ಡ್ ಒಳಗೆ ಧಾರಾಕಾರ ನೀರು ಬೀಳುತ್ತಿದ್ದು, ಸೋಂಕಿತರ ಪಡಬಾರದು ಕಷ್ಟ ಪಡುತ್ತಿದ್ದಾರೆ.

ವಾರ್ಡ್ ಗೆ ನೀರು ಬೀಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರಿಂದ ಛೀಮಾರಿ ಎದುರಿಸಿದ ನಂತರ ಆಸ್ಪತ್ರೆ ಸಿಬ್ಬಂದಿ ರಿಪೇರಿ ಕೆಲಸ ಆರಂಭಿಸಿದ್ದಾರೆ. ಕಟ್ಟಡ ಕೆಲಸ ನಡೆಯುತ್ತಿರುವ ಕಾರಣ ಪೈಪ್ ಒಡೆದಿದೆ, ಸದ್ಯ ದುರಸ್ತಿ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next