Advertisement
ಗಾಯತ್ರಿ ನಗರ, ಶಂಕರಮಠ, ಕೋಡಿಚಿಕ್ಕನಹಳ್ಳಿ, ಹೊಸಕೆರೆಹಳ್ಳಿ ಸೇರಿದಂತೆ ನಗರದ ಪ್ರತ್ಯೇಕ ಹತ್ತು ಸ್ಥಳಗಳಲ್ಲಿ ಸುಮಾರು 40 ಮನೆಗಳಿಗೆ ನೀರು ನುಗ್ಗಿದ್ದು, ಜನ ಜಾಗರಣೆ ಮಾಡುವಂತಾಯಿತು. ಗಾಯತ್ರಿನಗರದ ನಾಗಪ್ಪಬ್ಲಾಕ್‌ನಲ್ಲಿ ರಸ್ತೆಯಲ್ಲೇ ಹಾದುಹೋಗಿರುವ ಮ್ಯಾನ್‌ಹೋಲ್ ತುಂಬಿ ಹರಿದು ಸುಮಾರು ಐದು ಮನೆಗಳು ಜಲಾವೃತಗೊಂಡವು. ಸ್ಥಳೀಯ ನಿವಾಸಿಗಳು ಪಂಪ್‌ಗ್ಳನ್ನು ಬಳಸಿ ನೀರ ಹೊರಹಾಕಿದರು. ಈ ಮಧ್ಯೆ ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲಾಡಿದವು. ಪಾಲಿಕೆ ಸದಸ್ಯೆ ಚಂದ್ರಕಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Related Articles
Advertisement
ವಿಮಾನಗಳ ಹಾರಾಟ ಸ್ಥಗಿತ: ಮಳೆಯಿಂದ ನಗರದಿಂದ ವಿಮಾನಗಳ ಹಾರಾಟಕ್ಕೂ ತೊಂದರೆ ಉಂಟಾಗಿ ಸುಮಾರು 39 ನಿಮಿಷಗಳ ಕಾಲ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಸಂಜೆ 6.57ರಿಂದ 7.35ರವರೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಈ ಅವಧಿಯಲ್ಲಿ ವಿವಿಧೆಡೆಯಿಂದ ನಗರಕ್ಕೆ ಬಂದಿಳಿಯಬೇಕಾದ ಏಳು ವಿಮಾನಗಳ ಪೈಕಿ ಆರು ಚೆನ್ನೈ ಮತ್ತು ಒಂದು ಕೊಚ್ಚಿಯತ್ತ ಮುಖಮಾಡಿದವು ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ.
ಉತ್ತರದಲ್ಲಿ ಕುಸಿದ ತಾಪಮಾನ: ಅರಬ್ಬಿ ಸಮುದ್ರದಲ್ಲಿ ಕಂಡುಬಂದ ತೀವ್ರ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಮಳೆಯ ಆಟಾಟೋಪ ಮುಂದುವರಿದಿದೆ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆ ಶುಕ್ರವಾರ ಮಳೆ ಅಬ್ಬರ ತುಸು ಹೆಚ್ಚಿತ್ತು. ಮಂಡ್ಯ ಮತ್ತು ಮೈಸೂರಿನಲ್ಲಿ ಗರಿಷ್ಠ ಮಳೆ ದಾಖಲಾಗಿದೆ. ಇದರಿಂದ ರಾಜ್ಯಾದ್ಯಂತ ತಾಪಮಾನ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ 2-3 ಡಿ.ಸೆ. ಹೆಚ್ಚಿರುತ್ತದೆ. ಆದರೆ, ಸತತ ಮೂರು ದಿನಗಳ ಮಳೆ ಮತ್ತು ಮೋಡಕವಿದ ವಾತಾವರಣದಿಂದ ತಾಪಮಾನ 5ರಿಂದ 6 ಡಿ.ಸೆ.ಕುಸಿತ ಕಂಡಿದೆ.