Advertisement

ನಿರಂತರ ಮಳೆಗೆ ಕುಮಾರಧಾರ ನೀರಿನ ಹರಿವು ಹೆಚ್ಚಳ

02:20 AM Jun 09, 2018 | Team Udayavani |

ಸುಬ್ರಹ್ಮಣ್ಯ: ಘಟ್ಟ ಮೇಲ್ಭಾಗದ ಭಾಗದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ರಾತ್ರಿಯಿಂದ ನಿರಂತರ ವರ್ಷಧಾರೆಯಾಗಿದ್ದು, ಪುಣ್ಯ ನದಿ ಕುಮಾರಧಾರೆಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಮುಂಗಾರು ಪೂರ್ವ ಮಳೆಯಿಂದ ಕುಮಾರಧಾರದಲ್ಲಿ ನೀರು ಹೆಚ್ಚಳಗೊಂಡು ಶುಕ್ರವಾರ ಸ್ನಾನಘಟ್ಟವು ಭಾಗಶಃ ಮುಳುಗಿತ್ತು. ನೀರಿನ ಹರಿವು ಹೆಚ್ಚಳದಿಂದಾಗಿ ದಡದಲ್ಲಿಯೇ ಭಕ್ತರು ತೀರ್ಥಸ್ನಾನ ಪೂರೈಸಿದರು. ಕುಮಾರಧಾರ ನದಿಗೆ ನೂತನ ಸೇತುವೆ ನಿರ್ಮಾಣವಾದುದರಿಂದ ಸೇತುವೆ ಮುಳುಗಡೆ ಭೀತಿ ಈ ಬಾರಿ ಇಲ್ಲ. ಸ್ನಾನಘಟ್ಟದಲ್ಲಿ ನೆರೆಯಿರುವ ಕಾರಣ ಅಪಾಯದ ಸ್ಥಿತಿ ಇದೆ. ಸುಬ್ರಹ್ಮಣ್ಯ ಪರಿಸರದ ಗ್ರಾಮೀಣ ಪರಿಸರದ ಹಳ್ಳ – ಕೊಳ್ಳಗಳು ಮುಂಗಾರಿನ ಅಬ್ಬರಕ್ಕೆ ತುಂಬಿ ಹರಿಯುತ್ತಿದೆ. ಗ್ರಾಮೀಣ ಪ್ರದೇಶ ಬಾಳುಗೋಡು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದ ಪದಕ ಬಳಿಯ ಹೊಳೆ ತುಂಬಿ ಹರಿಯುತ್ತಿದೆ.

Advertisement

ಇಲ್ಲಿನ ಪರಿಸರದ ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ಯೇನೆಕಲ್‌, ನಿಂತಿಕಲ್‌, ಬಿಳಿನೆಲೆ, ನೆಟ್ಟಣ ಮೊದಲಾದೆಡೆ ನಿರಂತರ ಮಳೆಯಾಗಿದೆೆ. ನದಿಗಳು ತುಂಬಿ ಹರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೃಷಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ತೋಟದಲ್ಲಿದ್ದ ಫಸಲುಗಳು ನೀರು ಪಾಲಾಗಿವೆ. ಸುಳ್ಯ-ಸುಬ್ರಹ್ಮಣ್ಯ, ಪುತ್ತೂರು – ಸುಬ್ರಹ್ಮಣ್ಯ, ಉಪ್ಪಿನಂಗಡಿ – ಸುಬ್ರಹ್ಮಣ್ಯ, ಬಾಳುಗೋಡು, ಐನೆಕಿದು, ಪಂಜ, ಹರಿಹರ, ಕಲ್ಮಕಾರು, ಕಮಿಲ, ಮೊಗ್ರ, ಗುತ್ತಿಗಾರು ಮೊದಲಾದೆಡೆ ಮುಂಗಾರು ಮುನ್ನ ಚರಂಡಿಯ ವ್ಯವಸ್ಥೆ ಸಮರ್ಪಕವಾಗಿರದೆ ಇರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next