Advertisement

ಜಲಸಂರಕ್ಷಣೆ ಪ್ರತಿಯೊಬ್ಬರ ಹೊಣೆ

11:51 AM Aug 26, 2019 | Team Udayavani |

ಯಲಬುರ್ಗಾ: ಸಕಲ ಜೀವಿಗಳ ಬದುಕಿಗೆ ನೆಲ, ಜಲ ಅವಶ್ಯಕ. ನೆಲ, ಜಲದ ಮಹತ್ವವನ್ನು ಅರಿತುಕೊಂಡು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಬೆಂಗಳೂರು ಸುಧಾರಣಾ ಸಂಸ್ಥೆಯ ಮುಖ್ಯಸ್ಥ ಕೊಟ್ರಯ್ಯ ಹೇಳಿದರು.

Advertisement

ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಗ್ರಾಪಂ, ಕೃಷಿ ಇಲಾಖೆ, ತಾಪಂ, ಕೃಷಿ ವಿಶ್ವ ವಿದ್ಯಾಲಯ ಮತ್ತು ಸುಧಾರಣಾ ಸಂಸ್ಥೆ ಆಶ್ರಯದಲ್ಲಿ ನಡೆದ ಜಲಶಕ್ತಿ ಯೋಜನೆ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಯಲಬುರ್ಗಾ ತಾಲೂಕು ನೀರಾವರಿಯಿಂದ ತೀರಾ ಹಿಂದುಳಿದಿದೆ. ಈ ಪ್ರದೇಶದಲ್ಲಿ ನೀರು ಸಂಗ್ರಹಕ್ಕೆ ಯಾವುದೇ ಸ್ಥಳಗಳು ಇಲ್ಲದ ಕಾರಣ ಕೃಷಿ ಮಾಡಲು ರೈತರಿಗೆ ಯಾವ ಅನುಕೂಲಗಳಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ನೀರು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಬೇಕು. ಅಂದಾಗ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಕೇಂದ್ರ ಸರಕಾರ ಯಲಬುರ್ಗಾ ತಾಲೂಕನ್ನು ಜಲಶಕ್ತಿ ಯೋಜನೆಗೆ ಆಯ್ಕೆ ಮಾಡಿಕೊಂಡಿದೆ. ಪ್ರತಿಯೊಬ್ಬರು ಜಲ ಸಂರಕ್ಷಣೆ ಮಾಡುವ ಮೂಲಕ ಇತರೆ ತಾಲೂಕಿಗಳಿಗೆ ಮಾದರಿಯಾಗಬೇಕು ಎಂದರು.

ಕೃಷಿಹೊಂಡ ನಿರ್ಮಿಸಿದರೆ ನೀರಿನ ಜಲ ಹೆಚ್ಚಾಗುತ್ತದೆ. ಇದರಿಂದ ನೀವು ಕೃಷಿ ಮಾಡಬಹುದು ಮತ್ತು ಗ್ರಾಮಗಳಲ್ಲಿ ನಿಮ್ಮ ಮನೆಗಳಿಗೆ ಇಂಗು ಗುಂಡಿಗಳು ಇಲ್ಲವೇ ಮಳೆಕೊಯ್ಲು ಮಾಡಬೇಕು ಅದಕ್ಕಾಗಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಕಷ್ಟು ಶ್ರಮವಹಿಸುತ್ತಿದ್ದು ಅದಕ್ಕೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಬದ್ರಿನಾಥ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಭಾಗದಲ್ಲಿ ಕಪ್ಪು ಮಣ್ಣು ಹೆಚ್ಚಾಗಿರುವುದರಿಂದ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಮಳೆ ಇಲ್ಲದೆ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ನೀರು ಸಂರಕ್ಷಣೆ ಮಾಡಬೇಕು ಅಂದಾಗ ನೀವು ಉತ್ತಮ ಬೆಳೆ ಬೆಳೆಯಲು ಪಡೆಯಲು ಸಾಧ್ಯ ಎಂದರು,

ಜಲ ತಜ್ಞ ಶ್ರೀನಾಥ ಕೃಷಿ ಇಲಾಖೆಯ ಅಧಿಕಾರಿಗಳಾದ ಶರಣಪ್ಪ ಗೂಂಗಾಡಿ, ನಾಗನಗೌಡ್ರ, ಗೋಣಿಬಸಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಭೀಮಣ್ಣ ಹವಳಿ, ಈರಣ್ಣ ತೋಟದ, ರವಿಕುಮಾರ ಸಿದ್ನೆಕೊಪ್ಪ, ಪಿಡಿಒ ಆದಿಬಸಯ್ಯ ಸೇರಿದಂತೆ ರೈತರು ಮಹಿಳಾ ಸಂಘದ ಸದಸ್ಯರು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next