Advertisement

ಕ್ಯಾನ್ಸರ್‌ ಗೆದ್ದ ಇಪ್ಪತ್ತು ಮಂದಿಯಿಂದ ಕ್ರಿಕೆಟ್‌ ವೀಕ್ಷಣೆ

11:04 AM May 22, 2023 | Team Udayavani |

ಬೆಂಗಳೂರು: ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಅಧಿಕೃತ ಆರೋಗ್ಯ ಪಾಲುದಾರರಾಗಿರುವ ಮಣಿಪಾಲ್‌ ಹಾಸ್ಪಿಟಲ್ಸ್‌ ಕ್ಯಾನ್ಸರ್‌ ಗುಣವಾಗಿ ಬದುಕುಳಿದ 20 ಮಂದಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಅನುವುಮಾಡಿಕೊಡಲಾಗಿತ್ತು.

Advertisement

ಕ್ಯಾನ್ಸರ್‌ ರೋಗದಿಂದ ಬದುಕುಳಿದ 20 ಮಂದಿ ಮತ್ತು ಅವರ ಆರೈಕೆ ನೋಡಿಕೊಳ್ಳುವವರು ಜತೆಯಾಗಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ವೀಕ್ಷಿಸಲು ಮಣಿಪಾಲ್‌ ಹಾಸ್ಪಿಟಲ್ಸ್‌ ಅವಕಾಶ ಮಾಡಿಕೊಟ್ಟಿತ್ತು. ಕ್ರೀಡಾಂಗಣವನ್ನು ಪ್ರವೇಶಿಸುವ ಮುನ್ನ ಅವರ ಆರೋಗ್ಯ ಸ್ಥಿತಿಗಳನ್ನು ಪರೀಕ್ಷಿಸಲಾಗಿತ್ತು. ಅವರಿಗೆ ಎಲ್ಲ ಅಗತ್ಯ ಔಷಧಗಳನ್ನು ಪೂರೈಸಲಾಗಿತ್ತು. ಕ್ರೀಡಾಂಗಣದ ಒಳಗೆ ವೈದ್ಯಕೀಯ ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಇವುಗಳಲ್ಲಿ ಐವರು ಸಮರ್ಪಿತ ಸ್ವಯಂಸೇವಕರ ತಂಡ ಪಂದ್ಯದ ಉದ್ದಕ್ಕೂ ಈ ರೋಗಿಗಳ ಅಗತ್ಯಗಳನ್ನು ನೋಡಿಕೊಳ್ಳುವಂತೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಕ್ಯಾನ್ಸರ್‌ನಿಂದ ಬದುಕುಳಿದವರಿಗೆ ಅತ್ಯಂತ ಅನುಕೂಲವಾಗಿರುವ ಖಾತ್ರಿಯನ್ನು ಮಾಡಿಕೊಂಡಿದ್ದ ಮಣಿಪಾಲ್‌ ಹಾಸ್ಪಿಟಲ್ಸ್‌ ಕ್ರೀಡಾಂಗಣದ ಸ್ಟ್ಯಾಂಡ್‌ನ‌ಲ್ಲಿ ಮೂರು ದಾದಿಯರನ್ನು ನೇಮಿಸಿತ್ತಲ್ಲದೆ, ಇವರು ಸತತವಾಗಿ ಕ್ಯಾನ್ಸರ್‌ನಿಂದ ಬದುಕುಳಿದವರ ಯೋಗ ಕ್ಷೇಮವನ್ನು ಗಮನಿಸುತ್ತಿದ್ದರು. ಹೆಚ್ಚುವರಿಯಾಗಿ ವೈದ್ಯರೊಬ್ಬರು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಅವರು ಪ್ರತಿ ಗಂಟೆಗೊಮ್ಮೆ ಸಂದರ್ಶಿಸಿ ಇವರ ಸ್ಥಿತಿಯನ್ನು ಮೌಲ್ಯೀಕರಿಸುವುದರ ಜತೆಗೆ ಅಗತ್ಯವಿದ್ದಲ್ಲಿ ವೈದ್ಯಕೀಯ ಗಮನ ನೀಡಲು ಸಿದ್ಧರಾಗಿದ್ದರು. ಗುರುತಿನ ಉದ್ದೇಶಕ್ಕಾಗಿ ಕ್ಯಾನ್ಸರ್‌ನಿಂದ ಬದುಕು ಳಿದಿರುವ ಪ್ರತಿಯೊಬ್ಬರಿಗೆ ರಿಸ್ಟ್‌ಬ್ಯಾಂಡ್‌ ಒಂದನ್ನು ನೀಡಲಾಗಿತ್ತು.

ಆರ್‌ಸಿಬಿ ತಂಡದೊಂದಿಗೆ ಸಹಭಾಗಿತ್ವದಲ್ಲಿ ಮಣಿಪಾಲ್‌ ಹಾಸ್ಪಿಟಲ್ಸ್‌ ಇವರಿಗಾಗಿ ಪ್ರತ್ಯೇಕವಾದ ಪ್ರವೇಶ ಮತ್ತು ನಿರ್ಗಮನದ ವ್ಯವಸ್ಥೆ ಮಾಡಿತ್ತು. ಅವರ ಯೋಗಕ್ಷೇಮದ ಖಾತ್ರಿ ಮಾಡಿಕೊಳ್ಳಲು ಕ್ರೀಡಾಂಗಣಕ್ಕೆ ಅವರನ್ನು ಬಸ್‌ ಮೂಲಕ ಸಾಗಿಸಲಾಗಿತ್ತು.

ಕ್ಯಾನ್ಸರ್‌ನಿಂದ ಪಾರಾದವರಿಗೆ ನೆರವು: ಮಣಿಪಾಲ್‌ ಹಾಸ್ಪಿಟಲ್ಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಕಾರ್ತಿಕ್‌ ರಾಜ್‌ಗೋಪಾಲ್‌ ಅವರು ಮಾತನಾಡಿ, ಕ್ಯಾನ್ಸರ್‌ನಿಂದ ಬದುಕುಳಿದವರು ಭಯದಿಂದ ಹೊರಬಂದು ತಮ್ಮ ಜೀವನವನ್ನು ಆನಂದಿಸಲು ವಾತಾವರಣ ಸೃಷ್ಟಿಸಿ ಅನನ್ಯವಾದ ಪಂದ್ಯದ ದಿನದ ಅನುಭವವನ್ನು ಸಾದರಪಡಿಸುವುದು ನಮಗೆ ವಿಶೇಷ ಗೌರವದ ವಿಷಯವಾಗಿದೆ. ನಮ್ಮ ರೋಗಿಗಳು ಹೊಸದಾಗಿ ತಮ್ಮ ಜೀವನವನ್ನು ಆರಂಭಿಸುವಲ್ಲಿ ನೆರವು ನೀಡಲು ವಾತಾವರಣವನ್ನು ಸೃಷ್ಟಿಸುವುದರ ಮೂಲಕ ನಮ್ಮ ಆರೋಗ್ಯ ಸೇವೆಗಳನ್ನು ಮೀರಿ ಸಾಗುವ ಪ್ರಯತ್ನವನ್ನು ಮಣಿಪಾಲ್‌ ಯಾವಾಗಲೂ ಕೈಗೊಳ್ಳುತ್ತದೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next