Advertisement

ವಿದ್ಯಾರ್ಥಿನಿಯರ ಜತೆ ಶಿಕ್ಷಕಿ ನೃತ್ಯ-ವೀಡಿಯೋ ವೈರಲ್‌

01:10 AM Jun 19, 2022 | Team Udayavani |

ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ಅವರೊಂದಿಗೆ ಮೋಜು ಮಸ್ತಿ ಯನ್ನೂ ಮಾಡುವುದುಂಟು. ದಿಲ್ಲಿ ಶಾಲೆಯ ಈ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರೊಂದಿಗೆ ಹೆಜ್ಜೆ ಹಾಕಿದ್ದು, ಅದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಶಿಕ್ಷಕಿ ಮನು ಗುಲಾಟಿ, ಬೇಸಗೆ ಕ್ಯಾಂಪ್‌ನ ಕೊನೆಯ ದಿನದಂದು ವಿದ್ಯಾರ್ಥಿನಿಯರೊಂದಿಗೆ ನೃತ್ಯ ಮಾಡಿ ದ್ದಾರೆ. ಬಾಲಿವುಡ್‌ನ‌ ಎವರ್‌ಗ್ರೀನ್‌ ಹಾಡಾಗಿ ರುವ “ಕಜ್ರಾ ಮೊಹಬತ್‌ ವಾಲಾ’ಕ್ಕೆ ಹೆಜ್ಜೆ ಹಾಕಿದ್ದಾರೆ.

ಈ ನೃತ್ಯದ ವೀಡಿಯೋವನ್ನು ಶಿಕ್ಷಕಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದಾರೆ. ವೀಡಿಯೋವನ್ನು ಮೆಚ್ಚಿರುವ ನೆಟ್ಟಿಗರು, “ನಿಮ್ಮಂತ ಶಿಕ್ಷಕರು ಎಲ್ಲ ಮಕ್ಕಳಿಗೂ ಸಿಗಬೇಕು’ ಎಂದು ಕಾಮೆಂಟ್‌ ಹಾಕಲಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next