Advertisement

Dog’s Birthday: ನಾಯಿಗಾಗಿ 16 ಲಕ್ಷ ರೂ.ವಿನ ದುಬಾರಿ ಮನೆ ನಿರ್ಮಿಸಿ ಗಿಫ್ಟ್‌ ಕೊಟ್ಟ ಯುವಕ

05:00 PM Jun 04, 2023 | Team Udayavani |

ಕೆಲವರು ಅತೀವವಾಗಿ ಪ್ರಾಣಿಗಳನ್ನು ಪ್ರೀತಿಸುತ್ತಾರೆ. ತನ್ನ ಪ್ರೀತಿಯ ಸಾಕು ಪ್ರಾಣಿಗೆ ಏನು ಬೇಕಾದರೂ ಮಾಡುತ್ತಾರೆ. ಅದರ ರಕ್ಷಣೆಗೆ ಸಂಬಂಧಿಸಿ ಎಲ್ಲವನ್ನು ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ತಾನು ಸಾಕಿದ ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾನೆ.

Advertisement

ಬ್ರೆಂಟ್ ರಿವೆರಾ ಎನ್ನುವ ವ್ಯಕ್ತಿ ತನ್ನ ಮನೆಯ ಸಾಕು ನಾಯಿ “ಚಾರ್ಲಿ” ಹುಟ್ಟುಹಬ್ಬಕ್ಕೆ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಬ್ರೆಂಟ್ ರಿವೆರಾ ಈ ಬಾರಿ ತನ್ನ ಚಾರ್ಲಿಗೆ ಏನಾದರೂ ದೊಡ್ಡ ಉಡುಗೊರೆ ನೀಡಬೇಕೆನ್ನುವ ನಿಟ್ಟಿನಲ್ಲಿ ಅದಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲು ನಿರ್ಧರಿಸಿದ್ದಾರೆ. ತನ್ನ ಚಾರ್ಲಿಗೆ ಯಾವ ಕೊರತೆಯೂ ಉಂಟಾಗಬಾರದೆನ್ನುವ ನಿಟ್ಟಿನಲ್ಲಿ ಮನೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ.

ಈ ಕುರಿತು ಬ್ರೆಂಟ್ ರಿವೆರಾ ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಚಾರ್ಲಿ”ಗಾಗಿ ಮನೆ ನಿರ್ಮಾಣ ಮಾಡಲು ಅದಕ್ಕೆ ಬೇಕಾದ ಸಾಮ್ರಾಗಿಗಳನ್ನು ತಯಾರು ಮಾಡುವುದು, ಅದರಲ್ಲಿ ಇರಬೇಕಾದ ಸಾಮಾಗ್ರಿಗಳ ಬಗ್ಗೆ ತೋರಿಸಿದ್ದಾರೆ.

ಅಂತಿಮವಾಗಿ ಒಂದು ಬೃಹತ್‌ ಗಾತ್ರದ ಮನೆಯನ್ನು ತನ್ನ ಪ್ರೀತಿಯ ʼʼಚಾರ್ಲಿ” ಗಾಗಿ ಬ್ರೆಂಟ್ ರಿವೆರಾ ನಿರ್ಮಿಸಿದ್ದಾರೆ. ಈ ಮನೆಯಲ್ಲಿ ಟಾಯ್ಲೆಟ್‌ , ಬೆಡ್‌ ರೂಮ್‌, ಕಿಚನ್‌, ಟಿವಿ.. ಹೀಗೆ ಒಂದು ಸಾಮಾನ್ಯ ಮನೆಯಲ್ಲಿ ಏನು ಇದ್ದೆಯೋ ಅದೆಲ್ಲವನ್ನು ಆಳವಡಿಸಿದ್ದಾರೆ. ಮನೆ ಎಷ್ಟು ದೊಡ್ಡದಾಗಿದೆ ಎಂದರೆ ಇದರಲ್ಲಿ ಮನುಷ್ಯ ಕೂಡ ವಾಸವಾಗಿರಬಹುದು. ನಾಯಿಗೆ ಒಂಟಿತನ ಅನ್ನಿಸಬಾರದೆನ್ನುವ  ನಿಟ್ಟಿನಲ್ಲಿ ತಾನು ಇಲ್ಲದಾಗ ಅದರೊಂದಿಗೆ ಇರಲು ಒಬ್ಬ ಅನುಭವಿ ಡಾಂಗ್ ಟ್ರೈನರ್‌ ನ್ನು ಕೂಡ ಮನೆಯಲ್ಲಿರಿಸಿದ್ದಾರೆ.

ನಾಯಿಗೆ ಹುಟ್ಟುಹಬ್ಬದ ದಿನವೇ ಮನೆಗೆ ಪ್ರವೇಶ ಮಾಡಿದ್ದಾರೆ. ನಾಯಿಗೆ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸಿ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಸ್ನೇಹಿತರನ್ನು ಆಹ್ವಾನಿಸಿದ್ದಾರೆ. ಕೊನೆಯದಾಗಿ ಒಂದು ಪುಟ್ಟ ನಾಯಿಯ ಮರಿಯನ್ನು “ಚಾರ್ಲಿ”ಗೆ ಉಡುಗೊರೆಯಾಗಿ ನೀಡಿದ್ದಾರೆ.

Advertisement

ಇಷ್ಟುದೊಡ್ಡ ಮಟ್ಟದ ಮನೆ ನಿರ್ಮಿಸಲು ಇವರಿಗೆ ಆದ ಖರ್ಚು ಬರೋಬ್ಬರಿ 16.4 ಲಕ್ಷ ರೂ. ಈ ವಿಡಿಯೋ ಯೂಟ್ಯೂಬ್‌ ನಲ್ಲಿ ಇದುವರೆಗೆ 7.3 ಮಿಲಿಯನ್‌ ವೀಕ್ಷಣೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next