ಅರಣ್ಯ ಮಧ್ಯೆ ಸಾಗುವ ಟಾರ್ ರಸ್ತೆಯೊಂದರಲ್ಲಿ ಮೂರ್ನಾಲ್ಕು ಕಾಡಾನೆಗಳ ತಂಡವೊಂದು ತಮ್ಮ ನಡುವೆಯಿರುವ ಪುಟ್ಟ ಆನೆ ಮರಿಯೊಂದನ್ನು ಜತನದಿಂದ ಕಾಪಾಡಿಕೊಂಡು ಸಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ತಮಿಳುನಾಡಿನ ಕೊಯಮತ್ತೂರಿನ ಸತ್ಯಮಂಗಲಂ ಅರಣ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸುಸಂತಾ ನಂದ ಎಂಬ ಅರಣ್ಯಾಧಿಕಾರಿ 38 ಸೆಕೆಂಡ್‌ಗಳ ಈ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಅಪ್‌ಲೋಡ್ ಆದ ಕೆಲವೇ ನಿಮಿಷಗಳಲ್ಲಿ 3,81,000 ಜನರು ಇದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ, 1,500 ರೀ-ಟ್ವೀಟ್‌ಗಳು, 9 ಸಾವಿರ ಲೈಕ್ಸ್‌ಗಳು ಬಂದಿವೆ.