ಹೋಬರ್ಟ್: ಅಂತಿಮ ಓವರ್‌ನಲ್ಲಿ 5 ವಿಕೆಟ್ ಉಡಾಯಿಸಿದ ಟ್ಯಾಸ್ಮೆನಿಯಾ ತಂಡ ಆಸ್ಟ್ರೇಲಿಯದ ವನಿತಾ ನ್ಯಾಶನಲ್ ಲೀಗ್ ಏಕದಿನ ಪಂದ್ಯಾವಳಿಯ ಫೈನಲ್‌ನಲ್ಲಿ ಒಂದು ರನ್ ರೋಚಕ ಜಯದೊಂದಿಗೆ ಪ್ರಶಸ್ತಿ ಉಳಿಸಿಕೊಂಡಿದೆ. ಅದು ಸೌತ್ ಆಸ್ಟ್ರೇಲಿಯ ವಿರುದ್ಧ ಈ ಸಾಧನೆಗೈದಿತು.
ಮೊದಲು ಬ್ಯಾಟಿಂಗ್ ನಡೆಸಿದ ಟ್ಯಾಸ್ಮೆನಿಯಾ 50 ಓವರ್‌ಗಳಲ್ಲಿ 264 ರನ್ ಪೇರಿಸಿತು. ಪ್ರತಿಕೂಲ ಹವಾಮಾನದಿಂದ ಸೌತ್ ಆಸ್ಟ್ರೇಲಿಯಕ್ಕೆ 47 ಓವರ್‌ಗಳಲ್ಲಿ 243 ರನ್ ಟಾರ್ಗೆಟ್ ಲಭಿಸಿತು. ಅಂತಿಮವಾಗಿ ಅದು 241ಕ್ಕೆ ಸರ್ವಪತನ ಕಂಡಿತು.
ಸಾರಾ ಕೋಯ್ ಅಂತಿಮ ಓವರ್ ಆರಂಭಿಸುವಾಗ ಸೌತ್ ಆಸ್ಟ್ರೇಲಿಯ 5ಕ್ಕೆ 239 ರನ್ ಮಾಡಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಈ ಓವರ್‌ನ 2ನೇ ಎಸೆತವೊಂದನ್ನು ಹೊರತುಪಡಿಸಿ ಉಳಿದೆಲ್ಲ ಎಸೆತಗಳಲ್ಲೂ ವಿಕೆಟ್ ಉರುಳಿತು. ಕೋಯ್r 3 ವಿಕೆಟ್ ಹಾರಿಸಿದರು. ಉಳಿದಿಬ್ಬರು ರನೌಟ್ ಆದರು!