Advertisement

‘ಎವರ್ ಗಿವನ್’ ತೇಲುತ್ತಿಲ್ಲ.! ಸುಯೆಜ್ ಬದಲಿಗೆ ಹಡಗುಗಳ ಸಂಚಾರಕ್ಕೆ ಅನ್ಯ ಮಾರ್ಗ..?!

03:43 PM Mar 29, 2021 | Team Udayavani |

ಸುಯೆಜ್ : ಕಳೆದ ಒಂದು ವಾರದಿಂದ ಸುಯೆಜ್ ಕಾಲುವೆಯಲ್ಲಿ ನೂರಾರು ಹಡಗುಗಳ ಸಂಚಾರಕ್ಕೆ ತಡೆಯಂತೆ ಸಿಲುಕಿ ನಿಂತಿದ್ದ ಜಪಾನ್ ಮೂಲದ ದೈತ್ಯ ಸರಕು ಹಡಗು ಎಂವಿ ಎವರ್ ಗಿವನ್ ಸುಮಾರು ಒಂದು ವಾರದ ನಂತರ, ತಿರುಗಿ ನಿಂತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹೊಮ್ಮಿದ ವೀಡಿಯೊಗಳು ತಿಳಿಸಿವೆ. ಆದರೆ ದೈತ್ಯ ಹಡಗು ಇನ್ನೂ ತೇಲುತ್ತಿಲ್ಲ ಎಂದು ಹೇಳಲಾಗುತ್ತಿದೆ.

Advertisement

ಇಂದು ಬೆಳಿಗ್ಗೆಯಿಂದ ಒಟ್ಟು 11 ಟಗ್ ಬೋಟ್‌ ಗಳು ಎವರ್ ಗಿವನ್  ಅನ್ನು ಚಲಿಸುವಂತೆ ಮಾಡಲು ಪ್ರಯತ್ನಿಸುತ್ತಿವೆ” ಎಂದು ವರದಿಯಾಗಿದೆ.

ಓದಿ :ಸಿದ್ದರಾಮಯ್ಯ ಕೂಡಲೇ ಜನರ ಕ್ಷಮೆಯಾಚಿಸಬೇಕು: ಶ್ರೀರಾಮುಲು ವಾಗ್ದಾಳಿ

ಬೃಹತ್ ಕಂಟೇನರ್ ಹಡಗನ್ನು ಶೇಕಡಾ 80 ರಷ್ಟು ತಿರುಗಿಸುವುದರ ಮೂಲಕ ಕಾಲುವೆಯಿಂದ ಹೊರಕ್ಕೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಈಜಿಪ್ಟ್‌ ನ ಸುಯೆಜ್ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಬೃಹತ್ ಹಡಗನ್ನು ಕಾಲುವೆಯಿಂದ ಮುಕ್ತಗೊಳಿಸಲು ಸುಮಾರು 27,000 ಕ್ಯುಬಿಕ್ ಮೀಟರ್ ಮರಳನ್ನು 18 ಮೀಟರ್ ಆಳದಿಂದ ಅಗೆದು ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.

Advertisement

ಮಾರ್ಚ್ 23 ರಿಂದ ವ್ಯಾಪಾರ ಮಾರ್ಗದ ದಕ್ಷಿಣ ಪ್ರವೇಶ ದ್ವಾರದಲ್ಲಿ ಅಂದಾಜು 450 ಕ್ಕೂ ಹೆಚ್ಚು ಹಡಗುಗಳು ಕಾಲುವೆಯನ್ನು ಹಾದು ಹೊಗಲು ಕಾಯುತ್ತಿವೆ ಎಂದು ಕೂಡ ಹೇಳಲಾಗುತ್ತಿದೆ.

ಓದಿ : ಚೈತ್ರಾ ಕೊಟ್ಟೂರು ಕಲ್ಯಾಣ ಕಲಹ: ಮೊದಲ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವದಂಪತಿ

ಇನ್ನು, ಕೆಲವು ಹಡಗುಗಳು ಸುಯೆಜ್ ಬದಲಿಗೆ ಆಫ್ರಿಕಾದ ದಕ್ಷಿಣ ತುದಿಯ ಮಾರ್ಗವಾಗಿ ಸುದೀರ್ಘ ಮತ್ತು ದುಬಾರಿ ಪ್ರಯಾಣವನ್ನು ಆರಿಸಿಕೊಂಡಿವೆ ಎಂಬ ಮಾಹಿತಿಗಳು ಕೂಡ ಸದ್ಯ ಲಭ್ಯವಾಗಿವೆ.

ಕಾಲುವೆಯನ್ನು ನಿಯಂತ್ರಿಸುತ್ತಿರುವ ಈಜಿಪ್ಟ್ ಈ ಆಕಸ್ಮಿಕ ಘಟನೆಯಿಂದಾಗಿ ದಿನಕ್ಕೆ ಸುಮಾರು 14 ಮಿಲಿಯನ್ ಡಾಲರ್ ಆದಾಯವನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕಕಾರಿ ವಿಚಾರ ವರದಿಯಾಗಿದೆ.

ಸದ್ಯಕ್ಕೆ, ಈ ದೈತ್ಯ ಹಡಗನ್ನು ಕಾಲುವೆಯಿಂದ ಹೊರ ತೆರೆಯಲು ಎಷ್ಟು ದಿನಗಳು ಬೇಕಾಗಬಹುದು ಎಂಬ ಮಾಹಿತಿಗಳು ಇದುವರೆಗೂ ಲಭ್ಯವಾಗಿಲ್ಲ. ನಿರಂತರವಾಗಿ ಹಡಗನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿವೆ ಎಂಬ ಮಾಹಿತಿ ದೊರಕಿದೆ.

ಓದಿ : ಇನ್ನು ಗಣಿ ಅಧಿಕಾರಿಗಳಿಗೆ ಪೊಲೀಸ್ ಡ್ರೆಸ್, ದರ್ಜೆಗೆ ತಕ್ಕಂತೆ ಸ್ಟಾರ್:ಮುರುಗೇಶ್ ನಿರಾಣಿ

Advertisement

Udayavani is now on Telegram. Click here to join our channel and stay updated with the latest news.

Next