Advertisement

ಚುನಾವಣೆ ಗೆಲ್ಲಲ್ಲು ಮೂರು ಪಕ್ಷಗಳಿಂದ ವಾಮಮಾರ್ಗ: ವಾಟಾಳ್ ನಾಗರಾಜ್

08:46 PM Dec 02, 2021 | Team Udayavani |

ಪಿರಿಯಾಪಟ್ಟಣ: ಚುನಾವಣೆ ಗೆಲ್ಲಲು ಎಲ್ಲಾ ಪಕ್ಷಗಳು ವಾಮಮಾರ್ಗಗಳನ್ನು ಅನುಸರಿಸಿದರೆ ನಾನು ಗ್ರಾಪಂ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಮಹದಾಸೆಯಿಂದ ಸ್ಪರ್ಧೆ ಮಾಡಿದ್ದದೇನೆ ಎಂದು ಕನ್ನಡ ಚಳುವಳಿ ಪಕ್ಷದ ಮುಖಂಡ ಹಾಗೂ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ವಾಟಾಳ್ ನಾಗರಾಜ್ ತಿಳಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿ ಗುರುವಾರ ಗೋಣಿಚೀಲ ಚಳುವಳಿ ನಡೆಸಿ ಮಾತನಾಡಿದರು.

ಪರಿಷತ್ ಎಂದರೆ ಚಿಂತಕರ ಚಾವಡಿಯಿದ್ದಂತೆ. ಆದರೆ, ಈಗಿನ ಚುನಾವಣೆಯನ್ನು ಗಮನಿಸಿದರೆ ಬೇಸರವಾಗುತ್ತದೆ. ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ವ್ಯವಸ್ಥೆಯನ್ನು ಹಾಳು ಮಾಡಿವೆ. ಗ್ರಾಪಂ ಸದಸ್ಯರು ಆಸೆ ಆಮಿಷಗಳಿಗೆ ಬಲಿಯಾಗಬೇಡಿ. ನನಗೆ ಒಂದು ಮತ ನೀಡಿ ಬೆಂಬಲಿಸಿ. ಎರಡು ಜಿಲ್ಲೆಗಳಿಂದ ಇಬ್ಬರು ಗೆಲ್ಲಬೇಕಿದೆ. ಒಂದು, ಎರಡು, ಮೂರು, ನಾಲ್ಕನೇ ಪ್ರಾಶಸ್ತ್ಯದ ಮತಗಳಿಗೂ ಮಹತ್ವವಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದರು.

ವಾಮಮಾರ್ಗದಲ್ಲಿ ಮೂರು ಪಕ್ಷಗಳು:
ಎಂಎಲ್‌ಸಿ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅವರದೇ ಆದ ಚಿಂತನೆಯಿಂದ ಮತ ಯಾಚಿಸುತ್ತಿವೆ ಆದರೆ ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ಸಮಸ್ಯೆಗಳಿದ್ದು ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ಚಿಂತಿಸುತ್ತಿಲ್ಲ ಎಂದು ದೂರಿದರು. ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವದ ಬುನಾದಿ ಹಾಗೂ ತಾಯಿಬೇರು ಇದ್ದಂತೆ. ಗ್ರಾಮಗಳ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಸ್ಪಂದಿಸುವ ಹೊಣೆಗಾರಿಕೆ ಹೊಂದಿದ್ದು ಆ ಸದಸ್ಯರಿಗೆ ನೀಡುತ್ತಿರುವ ಬಿಡಿಗಾಸು ಗೌರವಧನ ಯಾವುದಕ್ಕೂ ಸಾಲುತ್ತಿಲ್ಲ ಎಂದರು. ಸಂಸದರು ಮತ್ತು ಶಾಸಕರು ಲಕ್ಷಗಟ್ಟಲೆ ವೇತನ ಇತರ ಭತ್ಯೆಗಳನ್ನು ಪಡೆಯುತ್ತಿದ್ದು ಗ್ರಾ.ಪಂ. ಸದಸ್ಯರ ಸಮಸ್ಯೆಯನ್ನು ಯಾರೂ ಗಮನಿಸುತ್ತಿಲ್ಲ ಆದ್ದರಿಂದ ನನ್ನಂತ ಹೋರಾಟಗಾರರಿಗೆ ವಿಧಾನ ಪರಿಷತ್ ಮೆಟ್ಟಿಲೇರಲು ಅವಕಾಶ ಕಲ್ಪಿಸಿದರೆ ಗ್ರಾಪಂ ಅಧ್ಯಕ್ಷರಿಗೆ 10 ಸಾವಿರ, ಉಪಾಧ್ಯಕ್ಷರಿಗೆ ರೂ 7500 ಹಾಗೂ ಸದಸ್ಯರಿಗೆ 5 ಸಾವಿರ ಮಾಸಿಕ ಭತ್ಯೆ ನೀಡುವಂತೆ ಸದನದಲ್ಲಿ ಹೋರಾಟ ಮಾಡುತ್ತೇನೆ. ಗ್ರಾಪಂಸದಸ್ಯರು ಧೈರ್ಯವಾಗಿ ನನ್ನನ್ನು ಆರಿಸಿ ಕಳುಹಿಸಿ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

Advertisement

ತಂಬಾಕು ರೈತರ ಸಮಸ್ಯೆಗೆ ಹೋರಾಟ:
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ರಾಜ್ಯದಲ್ಲಿಯೇ ಮಾದರಿಯಾಗಿ ತಂಬಾಕು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಇಲ್ಲಿನ ರೈತರ ಸಮಸ್ಯೆಗಳಿಗೆ ಶಾಸಕ ಸಂಸದರಾಧಿಯಾಗಿ ಯಾರೂ ಸ್ಪಂಧಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ತಂಬಾಕು ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತರಾದ ಶೈಲೇಶ್, ಅಂಕನಾಯಕ, ಶಿವಣ್ಣ, ಚೆನ್ನನಾಯಕ, ಗಂಗಾಧರ್, ವಸಂತ್ ಕುಮಾರ್ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next