Advertisement

ಪದವೀಧರರು ಜಾತಿ, ಧರ್ಮ,ಪಕ್ಷ, ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ : ವಾಟಾಳ್ ನಾಗರಾಜ್ ಮನವಿ

08:35 PM Jun 11, 2022 | Team Udayavani |

ಹುಣಸೂರು : ಚುನಾವಣೆ ಎಂದರೆ ತರಕಾರಿ ಮತ್ತು ಹೋಟೆಲ್ ತಿಂಡಿಯ ರೀತಿ ವ್ಯಾಪಾರವಾಗಿದೆ. ಇದನ್ನು ಪ್ರಜ್ಞಾವಂತ ಪದವೀಧರರು ಬಹಳ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದು ವಾಟಾಳ್ ನಾಗರಾಜ್ ಮನವಿ ಮಾಡಟಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಸುಮಾರು 1.50 ಲಕ್ಷ ಪದವೀಧರ ಮತದಾರರಿದ್ದು,ಪದವಿಧರರಿಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಗೌರವವಿದೆ. ಪದವೀಧರರು ಈ ದೇಶದ ಬುನಾದಿ ಯಾಗಿದ್ದಾರೆ. ಪದವೀಧರರು ಯಾವುದೇ ಕಾರಣಕ್ಕೂ ಕಲುಷಿತ ವಾಗಬಾರದು.ಅವರು ತಮ್ಮ ಮತಕ್ಕೆ ಚ್ಯುತಿ ತಂದುಕೊಳ್ಳಬಾರದು. ಪದವೀಧರರ ಮತಗಳಿಗೆ ಗೌರವವಿದೆ. ಅದನ್ನು ಜಾತಿ, ಧರ್ಮ,ಪಕ್ಷ, ಹಣಕ್ಕಾಗಿ ಮಾರಿಕೊಳ್ಳಬಾರದು.

ದುಡ್ಡು ಮಾಡಿಲ್ಲ: ಈ ಹಿಂದಿನ ಚುನಾವಣೆಗಳಲ್ಲಿ ತಾವು ಸೋತಿರುವುದು ಹೆಚ್ಚು, ಕಾರಣ ಪ್ರಾಮಾಣಿಕತೆ ಮತ್ತು ತತ್ವ ಸಿದ್ಧಾಂತಕ್ಕೆ ಬದ್ದನಾಗಿರುವುದು. ನಾನು ನನ್ನ ರಾಜಕೀಯ ಜೀವನದಲ್ಲಿ ಎಂದು ದರೋಡೆ, ವ್ಯಾಪಾರ, ರೀಯಲ್ ಎಸ್ಟೇಟ್ ಮಾಡಿಲ್ಲ. ಅವುಗಳನ್ನು ಮಾಡಿ ದುಡ್ಡು ಮಾಡಿ ಗೆದ್ದಿದ್ದರೆ ಅದು ಸಂವಿಧಾನಕ್ಕೆ ಮಾಡಿದ ಅಪಮಾನ ಮತ್ತು ಅಗೌರವ.

ಪದವೀಧರರ ಪರ ಧ್ವನಿಯಾಗುತ್ತೇನೆ: ತಾವು ದಕ್ಷಿಣ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿದ್ದು. ನನ್ನನ್ನು ಪದವೀಧರ ಮತದಾರರ ಗೆಲ್ಲಿಸಿದರೆ ಅವರ ಪರವಾಗಿ ನಾನು ಹೋರಾಟ ಮಾಡುತ್ತೇನೆ.

ಕಡ್ಡಾಯ ಕೆಲಸಕ್ಕೆ ಹೋರಾಟ: ಸರ್ಕಾರಿ ನೌಕರರು, ಶಿಕ್ಷಕರು, ಪೊಲೀಸರು ಹಾಗೂ ಪದವೀಧರರ ಪರವಾಗಿ ಧ್ವನಿ ಎತ್ತುತ್ತೇನೆ. ಪದವೀಧರರಿಗೆ ಕನಿಷ್ಠ ವೇತನ 10000 ರೂ ಭತ್ಯೆ ಕೊಡಿಸುತ್ತೇನೆ. ಸರ್ಕಾರಿ-ಖಾಸಗಿ ಕಾರ್ಖಾನೆಗಳಲ್ಲಿ ಪದವೀಧರರಿಗೆ ಕೆಲಸ ಕಡ್ಡಾಯ ಮಾಡುತ್ತೇನೆ ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಾಟಾಳ್ ನಾಗರಾಜ್ ನಿಂದ ಮಾತ್ರ ಸಾಧ್ಯವೆಂದರು.

Advertisement

ಪೊಲೀಸರಿಗೆ ಪ್ಯಾಂಟ್: ಪೋಲೀಸರಿಗೆ ಪ್ಯಾಂಟ್ ಕೊಡಿಸಿದ್ದೆ ನಾನು ಅವರ ಪರವಾಗಿ ಹಲವಾರು ಹೋರಾಟಗಳನ್ನು ಮಾಡಿದ್ದೇನೆ ಏಕೆಂದರೆ ಅವರು ಪ್ರತಿಭಟನೆ ಮಾಡುವ ಹಾಗಿಲ್ಲ ಅವರ ಪರವಾಗಿ ನಾನಿದ್ದೇನೆ.
ವಿಧಾನಪರಿಷತ್ ನಂತಹ ಹಿರಿಯರ ಸದನದಲ್ಲಿ ಹೋರಾಟಗಾರರಿರಬೇಕು. ತಾವು ಸೋತರೆ ಅದು ಪದವೀಧರರಿಗೆ ನಷ್ಟವೇ ಹೊರತು ನನಗಲ್ಲ. ಸದನದಲ್ಲಿ ಪ್ರಾಮಾಣಿಕ, ತತ್ವ ಸಿದ್ಧಾಂತಕ್ಕೆ ಬದ್ಧರಾದವರು ಇರಬೇಕು. ನಾನು ಪಕ್ಷಾಂತರಿ ಅಲ್ಲ, ಒಂದೇ ತತ್ವ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ನಾನು ತತ್ವ ಸಿದ್ಧಾಂತಕ್ಕೆ ಬದ್ಧವಾಗಿರದೆ ಪಕ್ಷಾಂತರಿ ಆಗಿದ್ದರೆ ಎರಡು ಬಾರಿ ಮುಖ್ಯಮಂತ್ರಿಯಾಗಿರುತ್ತಿದ್ದೆ ಆದ್ದರಿಂದ ದಯಮಾಡಿ ಎಲ್ಲಾ ಪದವೀಧರರು ನನ್ನ ಕ್ರಮಸಂಖ್ಯೆ 5ರ ಮುಂದೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ಪಕ್ಷದ ಮುಖಂಡರಾದ ಅಜಯ್, ಪಾರ್ಥಸಾರಥಿ, ಕುಮಾರ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next