Advertisement
ಮಣಿಪಾಲ ಎಂಐಟಿ ಇದರ ಪ್ರೊ| ಹಾಗೂ ಉಡುಪಿ ಜಿಲ್ಲಾ ಸಂಘ ಚಾಲಕ ಡಾ| ನಾರಾಯಣ ಶೆಣೈ ಅವರು ಸ್ವತ್ಛತೆ ಕುರಿತಂತೆ ಮಾರ್ಗದರ್ಶನ ನೀಡಿದರು.ಜಲಭಾರತಿ ಕುಂದಾಪುರ ತಾಲೂಕು ಪ್ರಮುಖ್ ಶ್ರೀಕಾಂತ ನಾಯಕ್ ಐರಬೈಲು, ಸದಸ್ಯ ಪ್ರತಾಪ ಕಿಣಿ, ಶ್ರಮದಾನ ಸಮಿತಿಯ ಉಸ್ತುವಾರಿ ಚಂದ್ರಾನಂದ ಶೆಟ್ಟಿ, ತಾ. ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ, ಉದ್ಯಮಿ. ಡಿ. ಗೋಪಾಲಕೃಷ್ಣ ಕಾಮತ್, ಸಿದ್ದಾಪುರ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಎಸ್. ಪಾಂಡುರಂಗ ಪೈ, ಜಲಭಾರತೀಯ ಉಡುಪಿ ಜಿಲ್ಲಾ ಪ್ರಮುಖ್ ಅಶೋಕ್, ಕರ್ಣಾಟಕ ಬ್ಯಾಂಕ್‌ನ ಪ್ರಬಂಧಕ ಶ್ರೀನಿವಾಸ ಶೆಣೈ, ಗ್ರಾ. ಪಂ. ಸದಸ್ಯ ಕೃಷ್ಣ ಪೂಜಾರಿ ಸೇರಿದಂತೆ ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಜಲಭಾರತಿ ಕರ್ನಾಟಕ ಇದರ ನೂರಾರು ಸದಸ್ಯರು ಹೂಳು ತುಂಬಿದ ಕೆರೆಗೆ ಇಳಿದು ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಸಿದ್ದಾಪುರವನ್ನು ಒಂದು ಧಾರ್ಮಿಕ ಕೇಂದ್ರವಾಗಿಸುವ ನಿಟ್ಟಿನಲ್ಲಿ ಬಸವಪ್ಪ ನಾಯಕನ ಕೊಡುಗೆ ಅಪಾರವಾದುದು. ಈತನ ಆಡಳಿತಾವಧಿಯಲ್ಲಿ ಸಿದ್ದಾಪುರವು ಗಮನಾರ್ಹವಾಗಿ ಬೆಳವಣಿಗೆ ಕಂಡಿದೆ. ಇವರ ಆಡಳಿತದಲ್ಲಿ ನಿರ್ಮಿತವಾದ ಸಿದ್ದಾಪುರ ಕೆಳಪೇಟೆಯಲ್ಲಿ ಕಾಶಿಕಲ್‌ಕೆರೆ, ಮುಸುರೆ ಕೆರೆ, ಬ್ರಹ್ಮನ ಕೆರೆ, ಛತ್ರದ ಕೆರೆ, ಬೀದಿಕೆರೆ, ನಾಗತೀರ್ಥ ಕೆರೆ ಹೀಗೆ ಮುಂತಾದ ಕೆರೆಗಳು ಇಂದಿಗೂ ಇವೆ. 6 ಕೆರೆಗಳಲ್ಲಿ ಒಂದಾದ ಬೀದಿ ಕೆರೆಯ ಹೂಳನ್ನು ಕಳೆದ ವರ್ಷ ಮೇಲೇತ್ತಲಾಗಿದೆ. ಕಾಶಿಕಲ್ಲು ಕೆರೆಯ ಹೂಳೆತ್ತಲು ಚಾಲನೆ ದೊರಕಿದೆ. ಇನ್ನುಳಿದ 4 ಕೆರೆಗಳ ಹೂಳನ್ನು ಮೇಲಕ್ಕೆ ಎತ್ತಿದಲ್ಲಿ ಸಿದ್ದಾಪುರಕ್ಕೆ ಸಮೃದ್ಧವಾದ ನೀರು ಉಣಿಸಬಹುದಾಗಿದೆ.