Advertisement

ಪುರದಮಠದ ಬಳಿ ತ್ಯಾಜ್ಯ ವಿಲೇವಾರಿ ಘಟಕ ಬೇಡ

01:34 PM Jan 25, 2022 | Team Udayavani |

ಹುಳಿಯಾರು: ಪಟ್ಟಣ ಪಂಚಾಯ್ತಿಯ ತ್ಯಾಜ್ಯ ವಿಲೇವಾರಿ ಘಟಕವನ್ನು ಪುರಾಣ ಪ್ರಸಿದ್ಧ ಕೆಂಕೆರೆಬಳಿಯ ಪುರದಮಠದ ಬಳಿ ನಿರ್ಮಾಣಮಾಡುವುದು ಬೇಡ ಎಂದು ಸ್ಥಳೀಯರು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.

Advertisement

ಪ್ರತಿ ಸೋಮವಾರ ವಿಶೇಷ ಪೂಜೆ ಸೇರಿದಂತೆಪುರದ ಮಠದಲ್ಲಿ ಅನೇಕ ಧಾರ್ಮಿಕ ಕೈಂಕರ್ಯನಡೆಯುತ್ತವೆ. ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ, ಕಾರ್ತಿಕ ಮಾಸದಲ್ಲಿ ಸಾವಿರಾರು ಜನಸೇರುವ ಮುದ್ದೆ ಜಾತ್ರೆ ಸಹ ನಡೆಯುತ್ತದೆ.ಮುಖ್ಯವಾಗಿ ಈ ಭಾಗದಿಂದಲೇ ನೀರು ಸರಬರಾಜುಆಗುತ್ತದೆ. ಹಾಗಾಗಿ, ತ್ಯಾಜ್ಯ ವಿಲೇವಾರಿ ಘಟಕನಿರ್ಮಿಸಿದರೆ ಅಂತರ್ಜಲ ಕೆಡುತ್ತದೆ. ದುರ್ವಾಸನೆಯಿಂದ ದೇವಸ್ಥಾನಕ್ಕೆ ಬರುವ ಭಕ್ತರು ಸೇರಿದಂತೆಸ್ಥಳಿಯ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂದು ಮನವಿ ಮಾಡಿದರು.

ಇದಕ್ಕೆ ಸಚಿವರು ಈ ತ್ಯಾಜ್ಯ ವಿಲೇವಾರಿ ಘಟಕಕ್ಕೆದ್ರವರೂಪದ ತ್ಯಾಜ್ಯ ತರುವುದಿಲ್ಲ. ಪ್ಲಾಸ್ಟಿಕ್‌, ಹಾಲಿನಕವರ್‌, ಸಾಲಿಡ್‌ ವೇಸ್ಟ್‌ ತರುತ್ತೇವೆ. ಅಲ್ಲದೆ ಸುತ್ತಲೂಶೆಡ್‌ ಕಟ್ಟಿ ಇವುಗಳನ್ನು ನೆಲದ ಮೇಲೆ ಹಾಕದೆ ಎನ್‌ಜಿಒ ಅಥವಾ ಸ್ತ್ರೀಶಕ್ತಿ ಸಂಘದವರಿಂದ ವಿಂಗಡಣೆಮಾಡಿ ಮಾರುತ್ತೇವೆ. ಇದರಿಂದ ಪಂಚಾಯ್ತಿಗೆಆದಾಯ ಬರುತ್ತದೆ. ಅಲ್ಲದೆ ಆಸ್ಪತ್ರೆಗೆ ಸಂಬಂಧಪಟ್ಟಯಾವುದೇ ತ್ಯಾಜ್ಯ ಇಲ್ಲಿ ತರುವುದಿಲ್ಲ. ಹಾಗಾಗಿ, ಆತಂಕ ಪಡುವ ಅಗತ್ಯವಿಲ್ಲ ಎಂದರು.

ಹುಳಿಯಾರು ಪಟ್ಟಣ ಪಂಚಾಯ್ತಿಯ ತ್ಯಾಜ್ಯ ಇಲ್ಲಿಗೆಬೇಡ. ಅಂತರ್ಜಲ ಕಲುಷಿತ ಆಗುತ್ತದೆ ಎಂದು ಮತ್ತೆ ತಕರಾರು ತೆಗೆದಾಗ ಸುತ್ತಮುತ್ತಲೂ ಯಾವುದೇತೊಂದರೆಯಾಗುವುದಿಲ್ಲ ಎಂದು ಈ ಜಾಗ ಆಯ್ಕೆ ಮಾಡಿದ್ದೇವೆ. ಹೀಗೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರೆ ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಮತ್ತೂಮ್ಮೆ ಕೂಲಂಕಶವಾಗಿ ತಾವೆಲ್ಲರೂ ಹೇಳಿದ ಅಂಶಗಳ ಬಗ್ಗೆಅಧಿಕಾರಿಗಳಿಗೆ ವರದಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next