Advertisement

ಫೆ.17ರಂದೇ ವರ್ಗದ ಮಾಹಿತಿ ಸಿಕ್ಕಿತ್ತು ಎಂದ ನ್ಯಾಯಮೂರ್ತಿ ಮುರಳೀಧರ್‌

09:58 AM Mar 06, 2020 | sudhir |

ನವದೆಹಲಿ: ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ಗೆ ವರ್ಗಾವಣೆಯಾಗುವ ಬಗ್ಗೆ ಫೆ.17ರಂದೇ ಮಾಹಿತಿ ಸಿಕ್ಕಿತ್ತು. ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನ್ಯಾ.ಎಸ್‌.ಮುರಳೀಧರ್‌ ಹೇಳಿದ್ದಾರೆ. ದೆಹಲಿ ಹೈಕೋರ್ಟ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬೆx ಅವರೇ ಫೆ.17ರಂದು ವರ್ಗಾವಣೆ ಬಗ್ಗೆ ಮಾಹಿತಿ ನೀಡಿದ್ದರು.

Advertisement

ದೆಹಲಿ ಗಲಭೆ ವಿಚಾರದಲ್ಲಿ ಫೆ.26ರಂದು ಕೇಂದ್ರ ಸರ್ಕಾರವನ್ನು ಹಾಗೂ ಪೊಲೀಸರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ಆ ನ್ಯಾಯಪೀಠದಲ್ಲಿ ನ್ಯಾ.ಎಸ್‌.ಮುರಳೀಧರ್‌ ಕೂಡ ಇದ್ದರು. ಆ ದಿನವೇ ಅವರನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಕೇಂದ್ರದ ವಿರುದ್ಧ ಆಕ್ಷೇಪ ಮಾಡಿದ್ದಕ್ಕಾಗಿಯೇ ಸರ್ಕಾರ ಪ್ರತೀಕಾರಾತ್ಮಕವಾಗಿ ಈ ಕ್ರಮ ಕೈಗೊಂಡಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next