Advertisement

ವಾರ್ನರ್‌ ಗೈರಿನಿಂದ ಮುಂಬೈಗೆ ಲಾಭ: ಪೊಲಾರ್ಡ್‌

11:00 AM May 02, 2019 | keerthan |

ಮುಂಬಯಿ: ಪ್ರಚಂಡ ಫಾರ್ಮ್ನಲ್ಲಿರುವ ಡೇವಿಡ್‌ ವಾರ್ನರ್‌ ಗೈರಿನಿಂದ ಮುಂಬೈ ಇಂಡಿಯನ್ಸ್‌ಗೆ ಲಾಭವಾಗಲಿದೆ ಎಂದು ಕೈರನ್‌ ಪೊಲಾರ್ಡ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಖಂಡಿತವಾಗಿಯೂ ನಮ್ಮ ತಂಡಕ್ಕೆ ವಾರ್ನರ್‌ ಗೈರಿನಿಂದ ಲಾಭವಾಗಲಿದೆ. ವಾರ್ನರ್‌ ವಿಶ್ವ ದರ್ಜೆಯ ಆಟಗಾರ. ತನ್ನ ಸಾಮರ್ಥ್ಯವೇನು ಎಂಬುದನ್ನು ಅವರು ಈ ಪಂದ್ಯಾವಳಿಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಅವರು ಹೈದರಾಬಾದ್‌ ತಂಡದ ಬೆನ್ನೆಲುಬಾಗಿದ್ದರು’ ಎಂದು ಬಿಗ್‌ ಹಿಟ್ಟರ್‌ ಪೊಲಾರ್ಡ್‌ ಹೇಳಿದರು.

“ವಾರ್ನರ್‌ ಇಲ್ಲವಾದರೂ ಹೈದರಾಬಾದ್‌ ಸಾಮರ್ಥ್ಯವೇನೂ ಕುಂದಿಲ್ಲ. ಅವರಲ್ಲಿ ಇನ್ನೂ ಸಾಕಷ್ಟು ಮಂದಿ ವಿಶ್ವ ದರ್ಜೆಯ ಆಟಗಾರರಿದ್ದಾರೆ. ಮಾರ್ಟಿನ್‌ ಗಪ್ಟಿಲ್‌ ಇವರಲ್ಲೊಬ್ಬರು’ ಎಂದು ಪೊಲಾರ್ಡ್‌ ಹೇಳಿದರು. ಮುಂಬೈ-ಹೈದರಾಬಾದ್‌ ಗುರುವಾರ ವಾಂಖೇಡೆಯಲ್ಲಿ ಪರಸ್ಪರ ಎದುರಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next