Advertisement

ಡಿಕೆಶಿಗೆ ಶ್ರೀರಾಮುಲು ಪಲ್ಲಕ್ಕಿ ಸವಾಲ್‌

07:49 AM Mar 27, 2019 | Vishnu Das |

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಪ್ರಚಾರದ ಕಾವು ರಂಗೇರುತ್ತಿದ್ದು, ಮಂಗಳವಾರವೂ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರಿದವು. ರಾಜ್ಯದ ವಿವಿಧೆಡೆ ಪ್ರಚಾರ ನಡೆಸಿದ ನಾಯಕರು ನಡೆಸಿದ ಭಾಷಣದ ಸಣ್ಣ ಝಲಕ್‌ ಇಲ್ಲಿದೆ.

Advertisement

ಡಿಕೆಶಿ ಬಿಜೆಪಿಯ ಪಲ್ಲಕ್ಕಿ ಹೊರಲಿ: ಶ್ರೀರಾಮುಲು

ಸಚಿವ ಡಿಕೆಶಿ ಇನ್ನು ಮುಂದೆ ಪಲ್ಲಕ್ಕಿ ಹೊರುವುದು ಬೇಕಿಲ್ಲ. ಲೋಕಸಭೆ ಚುನಾವಣೆ ಅನಂತರ ಬಿಜೆಪಿ ಪಲ್ಲಕ್ಕಿ ಮೇಲೆ ಇರಲಿದ್ದು, ಅದನ್ನು ಶಿವಕುಮಾರ್‌ ಹೊರಬೇಕು ಅಷ್ಟೆ.

ಚುನಾವಣೆ ಬಳಿಕ ಕಾಂಗ್ರೆಸ್‌ ಪಕ್ಷ ಹೆಣದಂತಾಗಲಿದ್ದು, ಡಿಕೆಶಿ ಅದರ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಜಾಮೀನಿನ ಮೇಲೆ ಹೊರಗಿದ್ದಾರೆ.  ನೆಹರೂ ಕುಟುಂಬದ ಚೋರ್‌ ರಾಹುಲ್‌ ಆಗಿದ್ದು, ಅವರ ಹೆಸರಿನ ಮುಂದೆ ಇರುವ ಗಾಂಧಿ  ಹೆಸರನ್ನು ತೆಗೆದು ಹಾಕಬೇಕು.

Advertisement

ಮಹಾತ್ಮ ಗಾಂ ಧಿ ಹೆಸರಿಟ್ಟುಕೊಂಡು ರಾಹುಲ್‌ ರಾಷ್ಟ್ರಪಿತನಿಗೆ ಅವಮಾನ ಮಾಡುತ್ತಿದ್ದಾರೆ.

ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಕಾಂಗ್ರೆಸ್‌ನ ಯಾವ ಶಾಸಕರೂ ನಮ್ಮ ಸಂಪರ್ಕದಲ್ಲಿ ಇಲ್ಲ.

ಮೋದಿ ಅಲೆ ನಾಶ ಮಾಡುವ ತಾಕತ್ತಿದೆ: ಸಿಎಂ
ರೈತರ ಕುಟುಂಬಗಳಿಗೆ 6 ಸಾವಿರ ರೂ. ನೀಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಚುನಾವಣ ಗಿಮಿಕ್‌.

ಮೋದಿ ಅಲೆ ನಾಶ ಮಾಡುವ ಶಕ್ತಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರಿಗಿದೆ.
ಮೈತ್ರಿ ಪಕ್ಷಗಳ ಕಾರ್ಯಕರ್ತರು ಮೋದಿ ಸರಕಾರದ ವೈಫ‌ಲ್ಯಗಳನ್ನು ಗ್ರಾಮೀಣ ಪ್ರದೇಶಗಳ ಮತದಾರರಿಗೆ ಒಯ್ಯಬೇಕು.

ರಾಜ್ಯ ಯಾರಿಂದ ಅಭಿವೃದ್ಧಿಯಾಗುತ್ತಿದೆ, ಯಾರಿಂದ ಅಭಿವೃದ್ಧಿ ಕಾಣಲು ಸಾಧ್ಯ ಎಂಬ ಸಾಮಾನ್ಯ ತಿಳುವಳಿಕೆ ನಗರವಾಸಿಗಳಿಗಿಲ್ಲ. ನಗರವಾಸಿಗಳಿಗೆ ಮೋದಿ ಬಗ್ಗೆ ವಿಶೇಷ ಮಮಕಾರ.

ಡಿಕೆಶಿ ನಿಖೀಲ್‌ಗೆ ರಾಮನಗರ ಬಿಟ್ಟು ಕೊಡಲಿ: ಸುಮಲತಾ
ನಮ್ಮ ಮನೆಯ ಮಕ್ಕಳಂತಿರುವ ದರ್ಶನ್‌ ಮತ್ತು ಯಶ್‌ ಅವರು ನನ್ನ ಜತೆ ಪ್ರಚಾರಕ್ಕಿಳಿದರೆ ಅವರ ವಿರುದ್ಧ ಕಳ್ಳೆತ್ತು ಎಂಬ ಪದ ಬಳಸುವುದು ಸಿಎಂ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ.

ಹಿಂದೆ ಯಶ್‌ ಅವರು ಸಾ.ರಾ.ಮಹೇಶ್‌ ಪರವೂ ಪ್ರಚಾರ ಮಾಡಿದ್ದರು. ಅವರ ಪರ ಪ್ರಚಾರ ಮಾಡಿದರೆ, ಅದು ಪ್ರಚಾರ. ನಮ್ಮ ಪರ ನಮ್ಮ ಮಕ್ಕಳು ಪ್ರಚಾರ ಮಾಡಿದರೆ ಅದು ಅನಾಚಾರವೇ?.

ಅಂಬರೀಷ್‌ ನಂಬಿದ ಜನರಿಗೆ ಮೋಸ ಮಾಡಿಲ್ಲ. ಜನರಿಗೆ ಕೊಟ್ಟಿದ್ದನ್ನು ಇಲ್ಲಿವರೆಗೂ ಹೇಳಿಕೊಳ್ಳಲಿಲ್ಲ. ಜನರಿಗೆ ಸುಳ್ಳು ಹೇಳುವ ಗುಣ ಅಂಬರೀಷ್‌ ಅವರಲ್ಲಿ ಇರಲಿಲ್ಲ.

ನಾನು ಜನರ ಕಷ್ಟಗಳಿಗೆ ನೆರವಾಗಲು ಅಂಬರೀಷ್‌ ಹೆಸರು ಹೇಳಿಕೊಂಡು ಬಂದಿದ್ದೇನೆ.

ಒಬ್ಬ ಮಹಿಳೆ ಎನ್ನದೆ ವಿಪಕ್ಷದವರು ಬಹಳ ನೋವಿನ ಮಾತುಗಳನ್ನು ಆಡುತ್ತಿದ್ದಾರೆ. ಇದು ಮಹಿಳೆಯರಿಗೆ ಚೆನ್ನಾಗಿ ಅರ್ಥವಾಗುತ್ತದೆ.

ನನ್ನ ಗಂಡನ ಹೆಸರು ಹೇಳಿ ನಾನು ಚುನಾ ವಣೆಯಲ್ಲಿ ಮಾತನಾಡಬಾರದೆ? ಅವರು ಮಾತ್ರ ಹೆಸರನ್ನು ಬಳಸಿಕೊಳ್ಳಬಹುದಾ?.

ಬಿಜೆಪಿಯವರು ಬೇಷರತ್‌ ಬೆಂಬಲ ನೀಡಿದ್ದು, ಅವರಿಗೆ ಕೃತಜ್ಞತೆ ಹೇಳಿದ್ದೇನೆ.

ನಾನು ನಾಮಪತ್ರ ಸಲ್ಲಿಕೆ ವೇಳೆ ಕರೆಂಟ್‌ ಕಟ್‌ ಮಾಡಿದ್ದಕ್ಕೆ ಚುನಾವಣಾಧಿಕಾರಿಗಳಿಗೆ ಈಗಾಗಲೆ ದೂರು ನೀಡಿದ್ದೇನೆ.

ಸಚಿವ ಡಿಕೆಶಿಯವರಿಗೆ ನಿಖೀಲ್‌ ಬಗ್ಗೆ ಅಷ್ಟು ಕಾಳಜಿ ಇದ್ದಿ ದ್ದರೆ ಅವರ ತಮ್ಮನ ಕ್ಷೇತ್ರವನ್ನೇ ಬಿಟ್ಟು ಕೊ ಡ ಬಹುದಲ್ಲವಾ?.

“ತಾಕತ್ತಿದ್ರೆ ಅಮ್ಮನನ್ನು ಕಟ್ಟಾಕ್ರೋ’
ಮಂಡ್ಯ: ಜಿಲ್ಲೆಯ ಹಲವೆಡೆ ಮಂಗಳವಾರ ಅಮ್ಮನ ಪರ ಪ್ರಚಾರ ನಡೆಸಿದ ಅಂಬರೀಷ್‌ ಪುತ್ರ ಅಭಿಷೇಕ್‌, “ಮಂಡ್ಯದ ಜನ ಅಂಬರೀಷ್‌ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಯನ್ನು ಬಿಟ್ಟು ಕೊಡುವ ಚಾನ್ಸೇ ಇಲ್ಲ. ಅಮ್ಮ ನಡೆದಿದ್ದೆ ದಾರಿ, ತಾಕತ್ತಿದ್ರೆ ಕಟ್ಟಾಕ್ರೋ’ ಎಂದು ಡಿ.ಬಾಸ್‌ ಸ್ಟೆ çಲ್‌ನಲ್ಲಿ ಡೈಲಾಗ್‌ ಹೊಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಮೈಕ್‌ ಕೈಕೊಟ್ಟಿತು. ತತ್‌ಕ್ಷಣ ಮಗನ ಕೈಯಿಂದ ಮೈಕ್‌ ಪಡೆದ ಸುಮಲತಾ, “ಮೊನ್ನೆ ಕರೆಂಟ್‌ ತೆಗೆದ್ರು, ಇವತ್ಯಾರು ಮೈಕ್‌ ಕಟ್‌ ಮಾಡಿದ್ದು’ ಎಂದು ವ್ಯಂಗ್ಯವಾಡಿದರು. ಬೆಂಬಲಿಗರಿಂದ ಕೇಕೆ, ಜೈಕಾರ ಕೇಳಿ ಬಂತು.

ತಮ್ಮದೇ ಪ್ರಧಾನಿಗೆ ಬೆಲೆ ಕೊಡದ ರಾಹುಲ್‌

ಅಂದು ತಮ್ಮದೇ ಪಕ್ಷದ ಕಾರ್ಯಸೂಚಿಯಂತೆ ರೂಪಿತವಾದ ಕಾಯಿದೆ
ಪ್ರತಿಯನ್ನು ಪತ್ರಿಕಾ ಗೋಷ್ಠಿಯಲ್ಲಿ ಹರಿದು ಎಸೆದಿದ್ದ ವ್ಯಕ್ತಿ, ಇಂದು ತಾನೇ ಪ್ರಧಾನಿಯಾಗುವ ಹಗಲುಗನಸು ಕಾಣುತ್ತಿದ್ದಾರೆ.

ತಮ್ಮದೇ ಪ್ರಧಾನಿಗೆ ಗೌರವ ನೀಡದ ವ್ಯಕ್ತಿಯ ಹಗಲುಗನಸು ನನಸಾಗದು.

ಕಾಂಗ್ರೆಸ್‌ ನಾಯಕರು ಸೈನಿಕರಿಗೆ ಗೌರವ ನೀಡುವ ಬದಲು ಕೀಳಾಗಿ ಮಾತನಾಡಿದ್ದಾರೆ.

ಒಬ್ಬ ಕಾಂಗ್ರೆಸ್‌ ನಾಯಕ “ಸೈನ್ಯದ ಮುಖ್ಯಸ್ಥ ರಸ್ತೆ ಬದಿಯ ಗೂಂಡಾ’ ಎಂದು ನಿಂದಿಸಿದರೆ, ಕರ್ನಾಟಕದ ಇನ್ನೋರ್ವ ಕಾಂಗ್ರೆಸ್‌ ನಾಯಕ, ಶ್ರೀ ರಾಮಾಯಣ ದರ್ಶನಂ ಬರೆದಿರುವ ಜ್ಞಾನಿ “ವಾಯುಪಡೆ ಮುಖ್ಯಸ್ಥ ಸುಳ್ಳುಗಾರ’ ಎಂದು ಕರೆದರು.

ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌, ಪಾಕಿಸ್ಥಾನಕ್ಕೆ ಹೋಗಿ “ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಪಾಕಿಸ್ತಾನದ ಸಹಾಯ
ಬೇಕು’ ಎಂದರು.

ಅಭಿನಂದನ್‌ನ್ನು ವಾಪಸ್‌ ಮಾಡಿದ ಪಾಕ್‌ ಪ್ರಧಾನಿಗೆ ನೋಬೆಲ್‌ ಕೊಡಬೇಕು ಎನ್ನುವ ವಾದವನ್ನು ಕಾಂಗ್ರೆಸ್‌ ಸಮರ್ಥಿಸುತ್ತಿದೆ.
(ಉಡುಪಿಯಲ್ಲಿ ಕಾಂಗ್ರೆಸ್‌ ವಿರುದ್ಧ ನಿರ್ಮಲಾ ಸೀತಾರಾಮನ್‌ ಟೀಕೆ)

Advertisement

Udayavani is now on Telegram. Click here to join our channel and stay updated with the latest news.

Next