Advertisement

Waqf Notice: ಸಿಎಂ ಪಿತೂರಿ, ಸಚಿವ ಜಮೀರ್‌ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ

01:53 AM Nov 05, 2024 | Team Udayavani |

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪಿತೂರಿ, ಸಚಿವ ಜಮೀರ್‌ ಎನ್ನುವ ದೇಶದ್ರೋಹಿಯಿಂದ ರಾಜ್ಯದಲ್ಲಿ ರೈತರು, ದೇವಸ್ಥಾನ, ಮಠಮಾನ್ಯಗಳ ಜಮೀನು ಕಬಳಿಸುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ವಕ್ಫ್ ಕಾಯ್ದೆ ಬಳಸಿಕೊಂಡು ರೈತರ ಜಮೀನು ಕಬಳಿಸುವ ಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಯಾವ ಸರಕಾರ ಸಹ ಈ ರೀತಿಯ ಕೆಟ್ಟ ಕೆಲಸ ಮಾಡಿಲ್ಲ. ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿ ಇದ್ದುಕೊಂಡು ಜಿಲ್ಲಾ ಪ್ರವಾಸ ಮಾಡುತ್ತಿರುವ ಸಚಿವ ಜಮೀರ್‌ ಜಿಲ್ಲಾಧಿಕಾರಿಗಳನ್ನು ಬೆದರಿಸಿ, ವಕ್ಫ್ ಆಸ್ತಿಯೆಂದು ರೈತರು, ದೇವಸ್ಥಾನ, ಮಠ ಮಾನ್ಯಗಳಿಗೆ ನೋಟಿಸ್‌ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಕಬಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಸಿದ್ದರಾಮಯ್ಯಗೆ ನಾನು ನೇರ ಸವಾಲು ಹಾಕುತ್ತೇನೆ. ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್‌ ಪುಢಾರಿಗಳು ಕಬಳಿಸಿದ ವಕ್ಫ್ ಜಮೀನು ಮೊದಲು ವಾಪಸ್‌ ಪಡೆಯಬೇಕು. ಹತ್ತಾರು ವರ್ಷಗಳ ಕಾಲ ಜಮೀನಿನಲ್ಲಿ ಉಳುಮೆ ಮಾಡುವ ರೈತರ ಮೇಲೆ ದರ್ಪ ತೋರುವುದನ್ನು ಬಿಡಲಿ ಎಂದರು.

“ಪುಗ್ಸಟೆ ಮಾತನಾಡುವವರ ಆಟ ಬಹುದಿನ ನಡೆಯದು”
ಬಿ.ವೈ. ವಿಜಯೇಂದ್ರ ಇರುವವರೆಗೂ ಉಪಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದಿರುವ ರಮೇಶ್‌ ಜಾರಕಿಹೊಳಿ, ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಚುನಾವಣೆ ಅಂದರೆ ವಿಜಯೇಂದ್ರ ಅಲ್ಲ, ಕಾರ್ಯಕರ್ತರ ಹೋರಾಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು. ಉಪಚುನಾವಣೆಗಳು ನಡೆಯುತ್ತಿರುವ ಸಂಡೂರು, ಶಿಗ್ಗಾವಿ, ಚನ್ನಪಟ್ಟಣದಲ್ಲಿ ಕಾರ್ಯ ಕರ್ತರೇ ಪಕ್ಷ ವನ್ನು ಗೆಲ್ಲಿಸುತ್ತಾರೆ. ಪುಗ್ಸಟೆ ಮಾತನಾಡುವವರ ಆಟ ಬಹಳ ದಿನಗಳ ಕಾಲ ನಡೆಯದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next