Advertisement

Waqf; ಕರ್ನಾಟಕ ಬಳಿಕ ಕೇರಳದಲ್ಲೂ ವಿವಾದ: 2 ಗ್ರಾಮಗಳಲ್ಲಿ ಪ್ರತಿಭಟನೆಗೆ ಚರ್ಚ್‌ಗಳು ಸಾಥ್‌

12:58 AM Nov 04, 2024 | Team Udayavani |

ಎರ್ನಾಕುಳಂ: ವಕ್ಫ್ ಭೂ ವಿವಾದಕ್ಕೆ ಸಂಬಂಧಿಸಿ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿರುವಂತೆಯೇ ನೆರೆ ರಾಜ್ಯ ಕೇರಳದಲ್ಲೂ ವಕ್ಫ್ ವಿವಾದ ಆರಂಭವಾಗಿದ್ದು, ಪ್ರತಿಭಟನೆಗಳೂ ನಡೆದಿವೆ.

Advertisement

ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ವಿಧೇಯಕ-2024ನ್ನು ಬೆಂಬಲಿಸಿ ಎರ್ನಾಕುಳಂ ಜಿಲ್ಲೆಯ ಚೆರಾಯಿ ಮತ್ತು ಮುನಾಂಬಮ್‌ ಗ್ರಾಮಗಳಲ್ಲಿ ಚರ್ಚ್‌ಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆದಿದೆ. ತಲೆಮಾರುಗ ಳಿಂದ ಕ್ರಿಶ್ಚಿಯನ್‌ ಕುಟುಂಬಗಳು ಹೊಂದಿರುವ ಆಸ್ತಿ‌ ಮೇಲೆ ವಕ್ಫ್ ಮಂಡಳಿ ಕಾನೂನುಬಾಹಿರವಾಗಿ ಹಕ್ಕು ಸಾಧಿಸಲು ಯತ್ನಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಶೈಕ್ಷಣಿಕ ಉದ್ದೇಶಗಳಿಗಾಗಿ 1950ರಲ್ಲಿ ಕಲ್ಲಿಕೋಟೆಯ ಫಾರೂಕ್‌ ಕಾಲೇಜಿಗೆ ವಕ್ಫ್ ಗೆ ಸೇರಿರದ ನಮ್ಮ ಭೂಮಿಯನ್ನು ನೀಡಲಾಗಿತ್ತು. ಸದ್ಯ ಈ ಕೇಸ್‌ ಹೈಕೋರ್ಟ್‌ನಲ್ಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ವಕ್ಫ್ ಮಸೂದೆ ವಿರೋಧಿಸಿ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ನಿರ್ಣಯ ಅಂಗೀಕರಿಸಿ ದ್ದವು. ಅದಾಗ್ಯೂ ಎಲ್‌ಡಿಎಫ್ ನ ಭಾಗವಾಗಿರುವ ಸಿಪಿಐನ ರಾಜ್ಯ ಕಾರ್ಯದರ್ಶಿ ಬಿನೋಯ್‌, ವಕ್ಫ್ ಭೂಮಿಯೇ ಆಗಿರಲಿ, ದೇವಸ್ವಂ ಭೂಮಿಯೇ ಆಗಿರಲಿ, ಬಡಜನರನ್ನು ಒಕ್ಕೆಲೆಬ್ಬಿಸಬಾರದು ಎಂದಿದ್ದಾರೆ. ವಿಪಕ್ಷ ನಾಯಕಸತೀಶನ್‌ ಈ ಗ್ರಾಮದ ಜಾಗ ವಕ್ಫ್ ಗೆ ಸೇರಿಲ್ಲ. ಸರಕಾರ ಮನಸ್ಸು ಮಾಡಿದಲ್ಲಿ ಈ ಸಮಸ್ಯೆಯ ನ್ನು 10 ನಿಮಿಷದಲ್ಲಿ ಬಗೆಹರಿಸಬಹುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next