Advertisement

Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ

11:33 PM Nov 12, 2024 | Team Udayavani |

ಕೊಚ್ಚಿ: ವಕ್ಫ್ ವಿವಾದ ಕೇರಳದಲ್ಲೂ ಆರಂಭವಾಗಿದ್ದು, ಎರ್ನಾಕುಲಂ ಜಿಲ್ಲೆಯಲ್ಲಿ ಸುಮಾರು 404 ಎಕ್ರೆ ಜಾಗವನ್ನು ವಕ್ಫ್ ಬೋರ್ಡ್‌ ತನ್ನದು ಎಂದು ಹೇಳುತ್ತಿದೆ ಎಂದು ಆರೋಪಿಸಲಾಗಿದೆ.

Advertisement

ವಕ್ಫ್ ಬೋರ್ಡ್‌ ತನ್ನದೆಂದು ವಾದಿ­ಸುತ್ತಿರುವ ಜಾಗದಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿದ್ದು, ಇದಕ್ಕೆ ಸಂಬಂಧಿಸಿಂತೆ ಕ್ರೈಸ್ತ ಸಮುದಾಯ ಭಾರಿ ಪ್ರತಿಭಟನೆ ನಡೆಸಿದ್ದು, ಈ ಸಮಸ್ಯೆ ಪರಿಹಾರಕ್ಕೆ ಸರಕಾರ ಮಾನವೀಯ ನೆಲೆಗಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿರಣ್‌ ರಿಜಿಜು, ಕೇವಲ ಎರ್ನಾಕುಲಂನ ಮುನಾಮºಮ್‌ ಮಾತ್ರವಲ್ಲದೆ ಕಣ್ಣೂರಿನ ತಳಿಪರಂಬ­ದಲ್ಲೂ 600 ಎಕ್ರೆ ಜಮೀನಿನ  ಮೇಲೆ ವಕ್ಫ್ ಬೋರ್ಡ್‌ ಕಣ್ಣು ಹಾಕಿದೆ. ಇದೆಲ್ಲಕ್ಕೂ ಕಾಂಗ್ರೆಸ್‌ ಕಾರಣ ಎಂದು ಆರೋಪಿಸಿದರು ರಿಜಿಜು, ಮುಸ್ಲಿಂ ಸಮುದಾಯವನ್ನು ವೋಟ್‌ ಬ್ಯಾಂಕ್‌ ಎಂದು ಪರಿಗಣಿಸಿರುವ ಕಾಂಗ್ರೆಸ್‌ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ.  ಈ ವಿವಾದದ ಬೆನ್ನಲ್ಲೇ ಪ್ರಕರಣವೊಂದರ ವಿಚಾರಣೆ ವೇಳೆ, 2013ಕ್ಕಿಂತ ಮೊದಲು ವಕ್ಫ್ ಬೋರ್ಡ್‌ ಆಸ್ತಿಯನ್ನು ಅತಿಕ್ರಮಿಸಿ­ಕೊಂಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next