Advertisement

ಟೆನಿಸ್ ಪ್ಲೇಯರ್ ಆಗಬೇಕೆಂದುಕೊಂಡಿದ್ದವ ‘ಟೀಂ ಇಂಡಿಯಾ’ದ ಆಲ್ ರೌಂಡರ್ ಆದ!

08:33 PM Jul 27, 2020 | Hari Prasad |

ಚಂಡೀಗಢ: ಯುವರಾಜ್ ಸಿಂಗ್ ಅಂದಾಕ್ಷಣ ಕ್ರಿಕೆಟ್ ಪ್ರೇಮಿಗಳಿಗೆ ಮೊದಲು ನೆನಪಾಗುವುದು ನ್ಯಾಟ್ ವೆಸ್ಟ್ ಫೈನಲ್ ಹಾಗೂ 2011 ವಿಶ್ವಕಪ್.

Advertisement

ಇವೆರಡು ಯುವರಾಜ್ ಕ್ರಿಕೆಟ್ ಬದುಕಿನ ಸುವರ್ಣ ಸಾಧನೆಗಳು. ಹೀಗೆ ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವೇ ಆಗಿದ್ದ ಯುವಿ ಫಿಟ್‌ನೆಸ್‌ ಕಾಯ್ದುಕೊಳ್ಳಲು ಅನುಸರಿಸುತ್ತಿದ್ದ ಮಾರ್ಗವೆಂದರೆ ಟೆನಿಸ್‌ ಆಡುವುದು.

ಹಾಗೆ ನೋಡಹೋದರೆ ಯವಿಯ ಮೊದಲ ಪ್ರೀತಿಯೇ ಟೆನಿಸ್‌ ಆಗಿತ್ತು. ಅನಂತರವೇ ಅವರು ಕ್ರಿಕೆಟಿಗನಾಗಿ ರೂಪುಗೊಂಡದ್ದು, ಈ ಸ್ವಾರಸ್ಯವನ್ನು ಸ್ವತಃ ಅವರೇ ಬಣ್ಣಿಸಿದ್ದಾರೆ.

‘ಸ್ಕೇಟಿಂಗ್‌ ಮತ್ತು ಟೆನಿಸ್‌ ನನ್ನ ನೆಚ್ಚಿನ ಕ್ರೀಡೆಗಳಾಗಿದ್ದವು. ಟೆನಿಸಿಗನಾಗಬೇಕೆಂಬುದು ನನ್ನ ಬಯಕೆಯಾಗಿತ್ತು. ಬಾಲ್ಯದಲ್ಲಿ ನಾನು ಟೆನಿಸ್ ಬ್ಯಾಟ್ ತೆಗೆಸಿಕೊಡುವಂತೆ ಅಮ್ಮನನ್ನು ಗೋಳುಹೊಯ್ದುಕೊಳ್ಳುತ್ತಿದ್ದೆ.

ಇದನ್ನು ಅವರು ಅಪ್ಪನ ಗಮನಕ್ಕೆ ತರುತ್ತಿದ್ದರು. ಅಪ್ಪ ತುಸು ಅಸಮಾಧಾನಗೊಂಡರೂ ಆ ಕಾಲದಲ್ಲೇ ಎರಡೂವರೆ ಸಾವಿರ ಬೆಲೆಯ ಟೆನಿಸ್ ಬ್ಯಾಟ್ ಕೊಡಿಸಿದ್ದರು…’ ಎಂಬುದಾಗಿ ಯುವರಾಜ್‌ ನೆನಪಿಸಿಕೊಂಡರು.

Advertisement

ಟೆನಿಸ್ ಬ್ಯಾಟ್ ಮುರಿಯುತ್ತಿದ್ದೆ!
“ಸಾಮಾನ್ಯವಾಗಿ ನಾನು ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ತನಕ ಹೋಗುತ್ತಿದ್ದೆ. ಅಲ್ಲಿ ಸೋಲುವುದು ಖಾಯಂ ಆಗಿತ್ತು. ಆಗ ಬಿರುಸಿನಿಂದ ಬಾರಿಸಿ ಬ್ಯಾಟನ್ನು ತುಂಡು ಮಾಡುತ್ತಿದ್ದೆ. ಪುನಃ ಅಪ್ಪನ ಬಳಿ ಹೋಗಿ ಹೊಸ ಬ್ಯಾಟ್ ಕೊಡಿಸುವಂತೆ ಪೀಡಿಸುತ್ತಿದ್ದೆ.

ಅವರು ಇದಕ್ಕೆ ಕೂಡಲೇ ಸ್ಪಂದಿಸುತ್ತಿರಲಿಲ್ಲ. ಆಗ ನಾನು ಕ್ರಿಕೆಟ್‌ ಆಡುತ್ತಿದ್ದೆ, ಮತ್ತೆ ಟೆನಿಸ್ ಬ್ಯಾಟ್ ನೆನಪಿಸುತ್ತಿದ್ದೆ. ಆದರೆ ಯಾವಾಗ ಕ್ರಿಕೆಟನ್ನು ಆನಂದಿಸತೊಡಗಿದೆನೊ ಅಲ್ಲಿಂದ ಟೆನಿಸ್‌ ದೂರಾಗತೊಡಗಿತು’ ಎಂದು ಯುವಿ ತಮ್ಮ ಕ್ರೀಡಾ ಬದುಕಿನ ಆರಂಭದ ದಿನಗಳನ್ನು ಮೆಲುಕು ಹಾಕಿದರು.

‘ಕ್ರಿಕೆಟ್‌ ಅಂಗಳಕ್ಕಿಳಿದ ಬಳಿಕವೂ ನಾನು ಟೆನಿಸ್‌ ಆಡುತ್ತಿದ್ದೆ. ಇದರಿಂದ ಉತ್ತಮ ಫಿಟ್‌ನೆಸ್‌ ಸಾಧ್ಯವಾಗುತ್ತಿತ್ತು. ಯಾವ ಕಾರಣಕ್ಕೂ ಕ್ರಿಕೆಟನ್ನು ತಪ್ಪಿಸಿಕೊಳ್ಳಬಾರದೆಂಬುದು ನನ್ನ ಉದ್ದೇಶವಾಗಿತ್ತು’ ಎಂದರು ಯುವರಾಜ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next