Advertisement

ಡಿಯರ್ ದೀದಿ … ಮುಸ್ಲಿಮರು ಸಹ ನಿಮ್ಮಿಂದ ದೂರ ಸರಿದಿದ್ದಾರೆ : ಪ್ರಧಾನಿ ಮೋದಿ

02:40 PM Apr 06, 2021 | Team Udayavani |

ಕೊಲ್ಕತ್ತಾ :  ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಸ್ಲಿಮರಲ್ಲಿ ತಮ್ಮ ಮತಗಳನ್ನು ವಿಭಜಿಸಬಾರದೆಂದು ಮಾಡಿದ ಮನವಿ, ಅವರು ಮುಸ್ಲೀಮರ ಬೆಂಬಲವನ್ನು ಕಳೆದುಕೊಂಡಿರುವುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಉತ್ತರ ಬಂಗಾಳದ ಕೂಚ್ ಬೆಹಾರ್‌ ನಲ್ಲಿ ಮೂರನೇ ಹಂತದ ಚುನಾವಣೆಗಾಗಿ ನಡೆಸಿದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಿಮ್ಮ ಪ್ರೀತಿಯನ್ನು ಅಭಿವೃದ್ಧಿಯ ರೂಪದಲ್ಲಿ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ.

 ಓದಿ : ಕೋವಿಡ್ 19 ಸೋಂಕು ಹೆಚ್ಚಳ: ಮುಂಬೈ ಬಳಿಕ ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ಜಾರಿ

ದೀದಿ, ನೀವು ಚುನಾವಣಾ ಆಯೋಗದ ಬಗ್ಗೆ ನಿಂದನೆ ಮಾಡುತ್ತಿದ್ದೀರಿ. ಆದರೆ ನಾವು ಹಿಂದೂಗಳನ್ನು ಒಗ್ಗೂಡಿಸಿ ಬಿಜೆಪಿಗೆ ಮತ ಚಲಾಯಿಸುವಂತೆ ಕೇಳಿದ್ದರೆ ನಮಗೆ ಚುನಾವಣಾ ಆಯೋಗದಿಂದ ಎಂಟು ಅಥವಾ ಹತ್ತು ನೋಟಿಸ್ ಬರುತ್ತಿತ್ತು ಎಂದರು.

ಡಿಯರ್ ದೀದಿ, ಮುಸ್ಲೀಮರೆಲ್ಲಾ ಒಂದಾಗಬೇಕು, ಮುಸ್ಲೀಮರ ಮತಗಳು ವಿಭಜನೆಯಾಗಬೇಕು ಎಂದು ಹೇಳಿದ್ದೀರಿ. ನೀವು ಇದನ್ನು ಹೇಳುತ್ತಿರುವುದನ್ನು ಗಮನಿಸಿದರೆ, ಮುಸ್ಲಿಂ ಮತ ಬ್ಯಾಂಕ್ ಸಹ ನಿಮ್ಮ ಕೈಯಿಂದ ಹೊರಹೋಗಿದೆ ನಿಮಗೆ ಮನವರಿಕೆಯಾಗಿದೆ ಎಂದು ಸೂಚಿಸುತ್ತದೆ. ಮುಸ್ಲಿಮರು ಸಹ ನಿಮ್ಮಿಂದ ದೂರ ಸರಿದಿದ್ದಾರೆ ಎಂದು ಮೋದಿ ಮಮತಾ ವಿರುದ್ಧ ವ್ಯಂಗ್ಯವಾಡಿದ್ದಾರೆ.

Advertisement

 ಓದಿ : ಸೈಕಲ್‍ನಲ್ಲಿ ಆಗಮಿಸಿ ಮತ ಚಲಾಯಿಸಿದ ತಮಿಳು ನಟ ವಿಜಯ್

Advertisement

Udayavani is now on Telegram. Click here to join our channel and stay updated with the latest news.

Next