ನವ ದೆಹಲಿ : ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುವುದರ ಬಗ್ಗೆ ನಿಮಗೆ ಗೊಂದವಿದೆಯೇ ? ಚಿಂತಿಸಬೇಡಿ! ನಾವು ನಿಮಗೆ ಮಾಹಿತಿ ನೀಡುತ್ತೇವೆ. ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಇತ್ತೀಚೆಗೆ ಸಾಕಷ್ಟು ಸ್ಕೂಟರ್ ಗಳು ಬಿಡುಗಡೆಗೊಂಡಿವೆ.
ನೀವು ಭಾರತದಲ್ಲಿ ಖರೀದಿಸಬಹುದಾದ ಉನ್ನತ ಶ್ರೇಣಿಯ ಐದು ಎಲೆಕ್ಟ್ರಿಕ್ ಸ್ಕೂಟರ್ ಗಳ ಪಟ್ಟಿ ಇಲ್ಲಿದೆ.
1) ಆಥರ್ 450 ಎಕ್ಸ್
ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸಿದ ಆಥರ್ 450 ಎಕ್ಸ್, 4ಜಿ ಸಿಮ್ ಕಾರ್ಡ್ ಹಾಗೂ ಬ್ಲುಟೂತ್ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದೆ.ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್ ನಲ್ಲಿ ಫೋನ್ ಕರೆಗಳು ಮತ್ತು ಸಂಗೀತವನ್ನು ನಿರ್ವಹಿಸಲು ದಿ ನ್ಯೂ 7 ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್ ಮತ್ತು ಸ್ನ್ಯಾಪ್ ಡ್ರಾಗನ್ ಕ್ವಾಡ್-ಕೋರ್ ಪ್ರೊಸೆಸರ್ ಒಳಗೊಂಡಿರುತ್ತದೆ.
2) ಹೀರೋ ಎಲೆಕ್ಟ್ರಿಕ್ ಆಪ್ಟಿಮಾ LA
ಹೀರೋ ಎಲೆಕ್ಟರಿಕ್ ಆಪ್ಟಿಮಾ LA ಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಲಭ್ಯವಿದೆ. ದೆಹಲಿ ಮಾರುಕಟ್ಟೆಗಳ ಪ್ರಕಾರ ಸದ್ಯಕ್ಕೆ ಇದರ ಬೆಲೆ ಕೇವಲ 47, 490 ರೂ ಆಗಿದೆ. ಉತ್ತಮ ಲೀಡ್ ಆ್ಯಸಿಡ್ ಬ್ಯಾಟರಿಯನ್ನೊಳಗೊಂಡಿದೆ.
3) ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಪ್ಲಸ್
ಭಾರತದಲ್ಲಿ ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಪ್ಲಸ್ 46,531 ರೂ. ಗೆ ಲಭ್ಯವಿದೆ. ಮೂರು ಬಣ್ಣಗಳ ನಾಲ್ಕು ಮಾಡೆಲ್ ಗಳಲ್ಲಿ ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಪ್ಲಸ್ ಸಿಗಲಿವೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ಉನ್ನತ ಶ್ರೇಣಿಯ ಮಾಡೆಲ್ ನ ಆರಂಭಿಕ ಬೆಲೆ 72, 803 ರೂ. ಆಗಿದೆ. ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ತನ್ನ ಮೋಟರ್ ನಿಂದ 250 W ಶಕ್ತಿಯನ್ನು ಉತ್ಪಾದಿಸುತ್ತದೆ.
4) ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್
ಭಾರತದಲ್ಲಿ ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್, ಆರಂಭಿಕ ಬೆಲೆ 41,650 ರೂ. ಆಗಿದೆ. ಅಷ್ಟಲ್ಲದೇ, 2 ಮಾಡೆಲ್ ಗಳಲ್ಲಿ ಮತ್ತು 2 ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ತನ್ನ ಮೋಟರ್ ನಿಂದ 250 W ಶಕ್ತಿಯನ್ನು ಉತ್ಪಾದಿಸುತ್ತದೆ.
5) ಐ ಕ್ಯೂಬ್
ಟಿ ವಿ ಎಸ್ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ ಅನ್ನು ದೆಹಲಿಯಲ್ಲಿ 1,08,012 ರೂ, ಗೆ ಬಿಡುಗಡೆಗೊಳಿಸಿದೆ. 5000 ರೂ ಟೋಕನ್ ಅಮೌಂಟ್ ನೊಂದಿಗೆ ಕಾಯ್ದಿರಿಸಿಕೊಳ್ಳಬುದಾಗಿದೆ ಎಂದು ಕಂಪೆನಿ ಹೇಳಿದೆ.