Advertisement
ಸಾಮಾನ್ಯವಾಗಿ ಸ್ಮಾರ್ಟ್ ಫೋನ್‌ಗಳ ದರ ಆಫ್ಲೈನ್ (ಅಂಗಡಿಗಳಲ್ಲಿ ಮಾರಾಟ) ಗಿಂತ ಆನ್‌ಲೈನ್ ನಲ್ಲಿ ಕಡಿಮೆ ಇರುತ್ತದೆ. ಕೆಲವೊಂದು ಕಂಪೆನಿಗಳು ಆನ್‌ಲೈನ್ ಮಾರಾಟವನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುತ್ತವೆ. ಆಫ್ಲೈನ್ ಮಾರಾಟಕ್ಕಾಗಿ ತಯಾರಿಸಿರುವ ಮೊಬೈಲ್ ದರ ಆನ್‌ಲೈನ್‌ಗಿಂತ ಶೇ. 50ರಷ್ಟು ಹೆಚ್ಚಿರುತ್ತದೆ. ಹಂಚಿಕೆದಾರರ, ಮಾರಾಟಗಾರರ ಕಮಿಷನ್ ಅನ್ನು ಕೊಡಬೇಕಾಗಿರುವುದರಿಂದ ಕಂಪೆನಿಗಳು ಗ್ರಾಹಕನ ಮೇಲೆಯೇ ಆ ಭಾರ ಹಾಕಿರುತ್ತವೆ. ಆನ್‌ಲೈನ್ ಮಾರಾಟದ ಮೊಬೈಲ್‌ಗಳ ದರ ಮೊದಲೇ ಕಡಿಮೆ ಇರುತ್ತದೆ ಅಂತ ಹೇಳಿದೆನಲ್ಲ, ಆ ದರ ಮತ್ತಷ್ಟು ಕಡಿಮೆಯಾಗುವ ಸಂದರ್ಭಗಳು ವರ್ಷದಲ್ಲಿ ನಾಲ್ಕೈದು ಬಾರಿ ಬರುತ್ತದೆ. ಆನ್‌ಲೈನ್ ಮಾರಾಟ ದೈತ್ಯರಾದ ಅಮೆಜಾನ್, ಫ್ಲಿಪ್‌ಕಾರ್ಟ್, ಪೇ ಟಿಎಂ ಗಳು ಕೆಲವಾರು ಸಂದರ್ಭಗಳಲ್ಲಿ ವಿಶೇಷ ಆಫರ್ ನೀಡುತ್ತವೆ. ಈಗ ಗಣರಾಜ್ಯೋತ್ಸವದ ಅಂಗವಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಜ. 20 ರಿಂದ 23ರವರೆಗೆ ವಿಶೇಷ ಮಾರಾಟ ಮೇಳ ಹಮ್ಮಿಕೊಂಡಿವೆ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್, ಜ. 20 ರಿಂದ 23ರವರೆಗೆ ನಡೆದರೆ, ಫ್ಲಿಪ್‌ಕಾರ್ಟ್ ದಿ ರಿಪಬ್ಲಿಕ್ ಡೇ ಸೇಲ್ ಅನ್ನು ಜ. 20 ರಿಂದ 22ರವರೆಗೆ ಹಮ್ಮಿಕೊಂಡಿದೆ. ಈ ಸೇಲ್‌ಗಳಲ್ಲಿ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳಿಗೆ ನೈಜ ರಿಯಾಯಿತಿ ದೊರಕುತ್ತದೆ. ಈ ಮಾರಾಟ ಮೇಳದಲ್ಲಿ ಅನೇಕ ಮೊಬೈಲ್ ಫೋನ್‌ಗಳ ಮಾರಾಟ ದರವನ್ನು ಕಡಿತಗೊಳಿಸಲಾಗುತ್ತದೆ. ಅಲ್ಲದೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಕೊಂಡರೆ ಇನ್ನಷ್ಟು ರಿಯಾಯಿತಿ ದೊರಕುತ್ತದೆ.
Related Articles
Advertisement
ಆನರ್ 8ಎಕ್ಸ್ ಮೊಬೈಲ್‌ಗೆ 15 ಸಾವಿರ ರೂ. ದರವಿದ್ದು, ಎಚ್‌ಡಿಎಫ್ಸಿ ಕಾರ್ಡ್‌ನಲ್ಲಿ 1500 ರೂ. ಕಡಿಮೆಯಾಗಿ 13500 ರೂ.ಗೆ ದೊರಕುತ್ತದೆ. ನಿಮ್ಮ ಹಳೆಯ ಮೊಬೈಲ್‌ಗೆ ಬದಲಿಸಿದರೆ ಅದಕ್ಕೆ 2 ಸಾವಿರ ರೂ. ಬೋನಸ್ ದರವಿರುತ್ತದೆ. ರೆಡ್‌ಮಿ ವೈ 2 32 ಜಿಬಿ ಮಾಡೆಲ್ ಮೊಬೈಲ್‌ಗೆ ಈಗ 9 ಸಾವಿರ ರೂ ದರವಿದ್ದು,ಆಫರ್‌ನಲ್ಲಿ 8 ಸಾವಿರಕ್ಕೆ ಸಿಲಿದೆ. ರೆಡ್‌ಮಿ 6 ಪ್ರೊಗೆ ಹಳೆಯ ಮೊಬೈಲ್ ಬದಲಿಸಿ ಕೊಂಡರೆ ಕನಿಷ್ಟ 2 ಸಾವಿರ ರೂ. ಎಕ್ಸ್‌ಟ್ರಾ ಬೋನಸ್ ಸಿಗಲಿದೆ. ರಿಯಲ್‌ಮಿ ಯು1 ಮೊಬೈಲ್ 3 ಜಿಬಿ ರ್ಯಾಮ್ ವರ್ಷನ್‌ಗೆ 12 ಸಾವಿರ ರೂ. ದರವಿದ್ದು, ಅದು 11 ಸಾವಿರಕ್ಕೆ ದೊರಕಲಿದೆ. ಒನ್‌ಪ್ಲಸ್ 6 ಟಿ ಯನ್ನು ಕೊಳ್ಳುವಾಗ ನಿಮ್ಮ ಹಳೆಯ ಫೋನ್ ಬದಲಿಸಿದರೆ ಹಳೆಯ ಫೋನ್ ದರಕ್ಕೆ ಎಕ್ಸ್‌ಟ್ರಾ 2 ಸಾವಿರ ರೂ. ನೀಡಲಾಗುತ್ತದೆ. ಇವೆಲ್ಲಾ ಅಮೆಜಾನ್ ನಲ್ಲಿ ದೊರಕುವ ಆಫರ್‌ಗಳು. ಇಲ್ಲಿ ನೀಡಿರುವುದು ಕೆಲವು ಮೊಬೈಲ್‌ಗಳ ಆಫರ್ ಮಾತ್ರ. ಇನ್ನೂ ಹಲವಾರಿವೆ. ಅಮೆಜಾನ್.ಇನ್ ನಲ್ಲಿ ಪರಿಶೀಲಿಸಿ.
ಈಗ ಫ್ಲಿಪ್‌ಕಾರ್ಟ್ ಆಫರ್‌ಗಳ ಬಗ್ಗೆ ನೋಡೋಣ. ಫ್ಲಿಪ್‌ಕಾರ್ಟ್ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಕೊಂಡರೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ನೀಡುತ್ತದೆ. ಡೆಬಿಟ್ ಕಾರ್ಡ್‌ಗೆ ಆಫರ್ ಬಗ್ಗೆ ಆ್ಯಪ್‌ನಲ್ಲಿ ಶುಕ್ರವಾರದವರೆಗೂ ಮಾಹಿತಿ ನೀಡಿರಲಿಲ್ಲ. ಈಗೊಮ್ಮೆ ಪರಿಶೀಲಿಸಿ ನೋಡಿ. ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್ 6 ಪ್ರೊ ಮೊಬೈಲ್‌ಗೆ 64+4 ಜಿಬಿ ವರ್ಷನ್‌ಗೆ 14 ಸಾವಿರ ರೂ. ದರವಿದ್ದು, ಆಫರ್‌ನಲ್ಲಿ 13 ಸಾವಿರಕ್ಕೆ ದೊರಕಲಿದೆ. ರಿಯಲ್ ಮಿ 2 ಪ್ರೊ 64+4 ಜಿಬಿಗೆ 14 ಸಾವಿರ ದರವಿದ್ದು, ಆಫರ್‌ನಲ್ಲಿ 13 ಸಾವಿರಕ್ಕೆ ದೊರಕುತ್ತದೆ. ಸ್ಯಾಮ್‌ಸಂಗ್ ಗೆಲಾಕ್ಸಿ ಆನ್ 6 ಮಾಡೆಲ್ 64+4 ಜಿಬಿ 13 ಸಾವಿರ ದರವಿದ್ದು, 10 ಸಾವಿರಕ್ಕೆ ದೊರಕಲಿದೆ. ಆನರ್ 9ಎನ್ ಮೊಬೈಲ್ 32ಜಿಬಿ 3 ಜಿಬಿಗೆ 10 ಸಾವಿರ ದರವಿದ್ದು, ಆಫರ್‌ನಲ್ಲಿ 8500 ರೂ.ಗೆ ದೊರಕಲಿದೆ. ಮೊಟೊರೊಲಾ ಮೋಟೋ ಒನ್ ಪವರ್ 4+64 ಜಿಬಿ 15 ಸಾವಿರ ರೂ. ದರವಿದ್ದು, 14 ಸಾವಿರಕ್ಕೆ ದೊರಕಲಿದೆ. ಆಸುಸ್ ಝೆನ್‌ಪೋನ್ ಮ್ಯಾಕ್ಸ್ ಎಂ2 32 ಜಿಬಿ 3 ಜಿಬಿ ರ್ಯಾಮ್‌ಗೆ 10 ಸಾವಿರ ದರವಿದ್ದು 9500 ರೂ.ಗೆ ದೊರಕಲಿದೆ. ಒಪ್ಪೋ ಎಫ್ 9ಗೆ 17 ಸಾವಿರ ದರವಿದ್ದು, ಆಫರ್ ನಲ್ಲಿ 13 ಸಾವಿರ ರೂ.ಗೆ ದೊರಕುತ್ತದೆ! ಇನ್ನೂ ಅನೇಕ ಆಫರ್‌ಗಳಿವೆ ಫ್ಲಿಪ್‌ಕಾರ್ಟ್ ಆ್ಯಪ್‌ನಲ್ಲಿ ಚೆಕ್ ಮಾಡಿ.
– ಕೆ.ಎಸ್. ಬನಶಂಕರ ಆರಾಧ್ಯ