Advertisement
ರಾಜ್ಯ ಸರ್ಕಾರವು ಪೂರ್ವ ತಯಾರಿಯೊಂದಿಗೆ ಶಾಲಾ-ಕಾಲೇಜುಗಳನ್ನು ಆರಂಭಿಸಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿ ಆದೇಶಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಪಟ್ಟಣದಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 50 ಜನರಿಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡುತ್ತಿದ್ದು, ತಾಲೂಕಿನ ವಿದ್ಯಾರ್ಥಿಗಳು, ಶಿಕ್ಷಕರು ದಿನನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.
Related Articles
Advertisement
ರಾಯಚೂರು: ತಾಲ್ಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ1.45 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಪೈಪ್‌ಲೈನ್ ಹಾಗೂ ಪ್ರತಿ ಮನೆಗೂ ನಳಗಳ ಸಂಪರ್ಕ ಕಲ್ಪಿಸುವಕಾಮಗಾರಿಗಳಿಗೆ ಗ್ರಾಮೀಣ ಶಾಸಕಬಸನಗೌಡ ದದ್ದಲ್ ಸೋಮವಾರ ಚಾಲನೆ ನೀಡಿದರು.
ಇದೇ ವೇಳೆ ಹಂಚಿನಾಳ ಗ್ರಾಮದಲ್ಲಿ 14 ವೆಚ್ಚದಲ್ಲಿ ಜಲಜೀವನ್‌ಮಿಷನ್ ಯೋಜನೆಯಡಿ ನಳಗಳಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಶಾಸಕಬಸನಗೌಡ ದದ್ದಲ್ ಅವರು, ಮುಂದಿನ ದಿನಗಳಲ್ಲಿ ಎಲ್ಲಮನೆಗಳಿಗೂ ಶಾಶ್ವತ ಕುಡಿಯುವನೀರು ಸರಬರಾಜು ಮಾಡಲಾಗುತ್ತದೆ.ಸಾರ್ವಜನಿಕರು ಅನಾವಶ್ಯಕವಾಗಿನೀರನ್ನು ವ್ಯರ್ಥವಾಗಿ ಹರಿಸದಂತೆ ಮಿತವಾಗಿ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಒಂದು ಕೋಟಿ ವೆಚ್ಚದಲ್ಲಿಆರೋಗ್ಯ ಇಲಾಖೆಯಿಂದನಿರ್ಮಿಸಿದ ಪ್ರಾಥಮಿಕ ಆರೋಗ್ಯಕೇಂದ್ರದ ವಸತಿಗೃಹವನ್ನು ಶಾಸಕ ಬಸನಗೌಡ ಉದ್ಘಾಟಿಸಿದರು.ಮುಖಂಡರಾದ ಶರತಚಂದ್ರರೆಡ್ಡಿ, ಹರಿಶ್ಚಂದ್ರರೆಡ್ಡಿ, ಶ್ರೀನಿವಾಸ, ದಶರಥ ರೆಡ್ಡಿ, ಮಲ್ಲಿಕಾರ್ಜುನಗೌಡ,ಜನಾರ್ದನಗೌಡ, ಕಿಶೋರ ಕುಮಾರ, ಕರಿಯಪ್ಪ ಹಾಗೂ ಗ್ರಾಪಂ ನೂತನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.