Advertisement

ಪುಟ್ಟ ವಿಮಾನದಲ್ಲಿ ತಾಯಿ-ಮಗಳ ಪ್ರಪಂಚ ಸುತ್ತಾಟ

06:05 AM Nov 30, 2017 | Team Udayavani |

ಬೆಂಗಳೂರು: ಮಹಿಳಾ ಸಬಲೀಕರಣ ಹಾಗೂ ಏರ್‌ ಕ್ರಾಫ್ಟ್ ವಲಯಕ್ಕೆ ಹೆಚ್ಚು ಮಹಿಳೆಯರನ್ನು ಆಕರ್ಷಿಸುವ ಉದ್ದೇಶದಿಂದ ಮೈಸೂರಿನ ತಾಯಿ ಮತ್ತು ಮಗಳು ಮೋಟರ್‌ಗ್ಲೆ„ಡರ್‌ನಲ್ಲಿ (ಸಣ್ಣ ಹೆಲಿಕಾಪ್ಟರ್‌ ಅಥವಾ ಏರ್‌ಕ್ರಾಫ್ಟ್)ಮೂಲಕ ಪ್ರಪಂಚ ಪರ್ಯಟನೆಗೆ ಮುಂದಾಗಿದ್ದಾರೆ.

Advertisement

ಮೈಸೂರು ಮೂಲದ ಮಹಿಳಾ ಫೈಲೆಟ್‌ ದೀಪಿಕಾ ಮಬೆನ್‌ ಹಾಗೂ ಅವರ ಮಗಳು ಫೋಟೋಗ್ರಫಿ ವಿದ್ಯಾರ್ಥಿ ಅಮಿÂ ಮೆಹ್ತಾ ಒಟ್ಟಾಗಿ 2018ರ ಫೆಬ್ರವರಿ ಮೊದಲ ವಾರದಲ್ಲಿ “ಮಾಹಿ’ ಮೋಟರ್‌ಗ್ಲೆ„ಡರ್‌ನಲ್ಲಿ 21 ದೇಶ ಸುತ್ತುವ ಯೋಜನೆ ಆರಂಭಿಸಲಿದ್ದಾರೆ.

ಸುಮಾರು 80 ದಿನದ ಈ ಪ್ರವಾಸದಲ್ಲಿ ಭಾರತ,ಜಪಾನ್‌, ರಷ್ಯಾ, ಅಮೆರಿಕಾ, ಯುರೋಪ್‌ ರಾಷ್ಟ್ರಗಳನ್ನು ಸುತ್ತಿ ಪಾಕಿಸ್ತಾನದ ಮಾರ್ಗವಾಗಿ ವಾಪಸ್‌ ಭಾರತಕ್ಕೆ ಬರಲಿದ್ದಾರೆ.

ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ವಿಶ್ವ ಪರ್ಯಟನೆಯ ಮಾಹಿತಿ ನೀಡಿದ ದೀಪಿಕಾ ಮಬೆನ್‌, ಪ್ರತಿಯೊಬ್ಬ ಮಹಿಳೆಯು ಆತ್ಮಸ್ಥೈರ್ಯದಿಂದ ಬದುಕು ನಡೆಸಬೇಕು ಮತ್ತು ಯಾವುದೇ ಸಮಸ್ಯೆ ಬಂದರೂ ಸಮರ್ಥವಾಗಿ ಎದುರಿಸುತ್ತೇನೆ ಎಂಬ ಛಲ ಇರಬೇಕು. ಮಹಿಳಾ ಸಬಲೀಕರಣ ಹಾಗೂ ವಿಮಾನಯಾನ ಕ್ಷೇತ್ರಕ್ಕೆ ಹೆಚ್ಚು ಮಹಿಳೆಯರನ್ನು ಆಕರ್ಷಿಸುವ ದೃಷ್ಟಿ ಯಿಂದ ಮೋಟರ್‌ಗ್ಲೆ„ಡರ್‌ನಲ್ಲಿ ಪ್ರಪಂಚ ಸುತ್ತುವ ಯೋಜನೆ ಹಾಕಿಕೊಂಡಿದ್ದೇವೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ಇದಕ್ಕೆ ಬೆಂಬಲ ಹಾಗೂ
ಸಹಕಾರ ನೀಡಿದೆ ಎಂದರು.

Advertisement

ಕಳೆದ 25 ವರ್ಷದಿಂದ ಪೈಲೆಟ್‌ ಸೇರಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಇದೆ. ಹಾಗೆಯೇ ನೂರಕ್ಕೂ ಅಧಿಕ ಮಕ್ಕಳಿಗೆ ವಿಮಾನ ಯಾನದ ತರಬೇತಿಯನ್ನು ನೀಡುತ್ತಿದ್ದೇನೆ. 80 ದಿನದಲ್ಲಿ 21 ದೇಶ ಸುತ್ತುವ ಯೋಜನೆ ಇದಾಗಿದ್ದು, ಆಯಾ ದೇಶದ ಹವಾಮಾನ ಹಾಗೂ ಪ್ರತಿಕೂಲ ಪರಿಸ್ಥಿತಿಗೆ ಅನುಗುಣವಾಗಿ ನಮ್ಮ ಪ್ರವಾಸ ಮುಂದುವರಿಯಲಿದೆ. ಎಲ್ಲಾ ರೀತಿಯ ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಮಾಹಿ ಎಂಬ ಮೋಟರ್‌ ಗ್ಲೆ„ಡರ್‌ನಲ್ಲಿ ದೇಶದಿಂದ ದೇಶಕ್ಕೆ ಸಾಗಲಿದ್ದೇವೆ. ಪ್ರತಿದಿನ ಸೂರ್ಯೋದಯದ ನಂತರ ಆರಂಭವಾಗುವ ನಮ್ಮ ಪ್ರಯಾಣ, ಸೂರ್ಯಾಸ್ಥದೊಳಗೆ ಅಂತ್ಯವಾಗ ಲಿದೆ. ದಿನವೊಂದಕ್ಕೆ 600ರಿಂದ 1200 ಕಿ.ಮೀ ಸಂಚಾರ ಮಾಡುವ ಸಾಮಥ್ಯವನ್ನು ಮೋಟರ್‌ ಗ್ಲೆ„ಡರ್‌ ಹೊಂದಿದೆ ಎಂದು ವಿವರಿಸಿದರು.

ವಿಮಾನಯಾನ ಹೊಸ ಪ್ರಯತ್ನಕ್ಕೆ ಮಗಳು ಕೂಡ ಉತ್ಸುಕಳಾಗಿದ್ದಾಳೆ. ನಮ್ಮ ಈ ಯೋಜನೆಯ ಮಾಹಿತಿಯನ್ನು www.wefl y.org.in ನಲ್ಲಿ ಪಡೆಯಬದು ಎಂದು ತಿಳಿಸಿದರು.

ಮಹಿಳಾ ಸಬಲೀಕರಣ ಮಹತ್ತರ ಉದ್ದೇಶದೊಂದಿಗೆ ಅಮ್ಮನ ಜತೆಗೆ ಮೋಟರ್‌ಗ್ಲೆ„ಡರ್‌ನಲ್ಲಿ ವಿಶ್ವಪ್ರಯಾಣ ಮಾಡಲಿದ್ದೇನೆ. ಆಕಾಶದಲ್ಲಿ ಹಾರಾಡ ಬೇಕೆಂದು ಅನೇಕರು ಬಯಸುತ್ತಾರೆ. ಆದರೆ, ಎಲ್ಲರ ಕನಸು ನನಸಾಗುವುದಿಲ್ಲ. ಈ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು.
–  ಅಮಿÂ ಮೆಹ್ತಾ, ದೀಪಿಕಾ ಮಗಳು

ಮಹಿಳಾ ಸಬಲೀಕರಣ ಉದ್ದೇಶದ ಈ ಯೋಜನೆ ಯಶಸ್ಸು ಸಾಧಿಸಲಿದೆ. ಕೇಂದ್ರ ಸರ್ಕಾರದ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮ ನಡೆಯುತ್ತಿದೆ. ಹೆಣ್ಣು ಮಕ್ಕಳ ಶಿಕ್ಷಣದ ಜತಗೆ ಅವರಿಗೆ ಉತ್ತಮ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಗುರಿಯಾಗಬೇಕು.
–  ಮೊಸೆಸ್‌ ಚಾಲೈ, ಜಂಟಿ ಕಾರ್ಯದರ್ಶಿ,
ಕೇಂದ್ರ ಮಹಿಳಾ, ಮಕ್ಕಳ ಅಭಿವೃದಿಟಛಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next