Advertisement

ಆಧಾರ್‌ ಕಾರ್ಡ್‌ಗೆ ನಿತ್ಯ ಪರದಾಟ

02:20 PM Jun 07, 2019 | Suhan S |

ಮುಂಡರಗಿ: ತಾಲೂಕಿನ ಜನರು ಆಧಾರ ಕಾರ್ಡ್‌ಗಾಗಿ ಹಗಲು-ರಾತ್ರಿಯೆನ್ನದೇ ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಲಕ್ಷಾಂತರ ಜನರಿಗೆ ಪಟ್ಟಣದ ಕೆವಿಜಿ ಬ್ಯಾಂಕಿನಲ್ಲಿರುವ ಆಧಾರ್‌ ಕೇಂದ್ರ ಒಂದೇ ಆಸರೆಯಾಗಿದೆ.

Advertisement

ವಾರಗಟ್ಟಲೇ ಸರದಿಗಾಗಿ ಜನರು ಕಾಯ್ದು ಹೈರಾಣ ಆಗುವಂತಹ ಸ್ಥಿತಿ ಬಂದಿದೆ. ದಿನವೊಂದಕ್ಕೆ ಬರೀ ಇಪ್ಪತ್ತೈದು ಜನರ ಆಧಾರ್‌ ಕಾರ್ಡ್‌ಗಳು ಮಾತ್ರ ಕಂಪ್ಯೂಟರ್‌ನಲ್ಲಿ ಅಪಲೋಡ್‌ ಆಗುತ್ತಿವೆ. ಇದರಿಂದ ಜನರು ಮತ್ತೆ ಮರಳಿ ಮನೆಗೆ ಹೋಗುತ್ತಿದ್ದಾರೆ. ಪ್ರತಿ ದಿನ ಹಳ್ಳಿಗಳಿಂದ ಬರುವ ಜನರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಬಂದು ಸರದಿ ಸಾಲಿನಲ್ಲಿ ನಿಂತರೂ ಆಧಾರ ಕಾರ್ಡ್‌ ಆಗುತ್ತಿಲ್ಲ. ಏಕೆಂದರೆ ಒಂದೇ ಒಂದು ಆಧಾರ್‌ ಕಾರ್ಡ್‌ ಅಪಲೋಡ್‌ ಮಾಡಲು ತಾಸುಗಟ್ಟಲೇ ಸಮಯ ವ್ಯಯವಾಗುತ್ತದೆ. ಜತೆಗೆ ನೆಟ್ವರ್ಕ ಇಲ್ಲವೇ ಕಂಪ್ಯೂಟರ್‌ನ ಸರ್ವರ್‌ ಡೌನ್‌ ಆದರೆ ಮತ್ತೆ ಮರುದಿನವೇ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗುತ್ತದೆ.

ತಾಲೂಕಿನಲ್ಲಿ ಪ್ರತಿ ಗ್ರಾಪಂ ಕಚೇರಿಯಲ್ಲಿ, ತಾಪಂ ಆವರಣದಲ್ಲಿ ಹಾಗೂ ತಹಶೀಲ್ದಾರ್‌ ಕಚೇರಿ, ಅಂಚೆ ಇಲಾಖೆ ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ನವೀಕರಣ ಇಲ್ಲವೇ ಹೊಸದಾಗಿ ಮಾಡುವ ಕೇಂದ್ರಗಳನ್ನು ತೆರೆಯಬೇಕಾಗಿತ್ತು. ಆದರೆ ಪಟ್ಟಣದ ಕೆವಿಜಿ ಬ್ಯಾಂಕ್‌ನಲ್ಲಿ ಮಾತ್ರ ಆಧಾರ್‌ ಕಾರ್ಡ್‌ ಮಾಡುವ ಕೇಂದ್ರವೊಂದೇ ಇದ್ದು, ಜನರು ಆಧಾರ್‌ ಕಾರ್ಡ್‌ಗಾಗಿ ಪರದಾಡುವಂತಾಗಿದೆ. ಪಟ್ಟಣದ ಎಸ್‌ಬಿಐನಲ್ಲಿ ಇದ್ದ ಕೇಂದ್ರ ಕಳೆದ ಮೂರು ತಿಂಗಳಿಂದ ತಾಂತ್ರಿಕ ಕಾರಣಗಳಿಗಾಗಿ ಬಂದಾಗಿದೆ. ಇದರಿಂದ ಪಟ್ಟಣದ ಕೆವಿಜಿ ಬ್ಯಾಂಕ್‌ನಲ್ಲಿರುವ ಆಧಾರ ಕೇಂದ್ರದ ಮೇಲೆ ಕೆಲಸದ ಒತ್ತಡ ಸಹ ಜಾಸ್ತಿಯಾಗಿದೆ.

•ಹು.ಬಾ. ವಡ್ಡಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next