Advertisement

ಇಂಟರ್ನಿಗಳಾಗಿದ್ದವರು ವಿಶ್ವಮಟ್ಟಕ್ಕೆ ಬೆಳೆದರು

06:00 AM May 10, 2018 | |

ನವದೆಹಲಿ: ಅಮೆರಿಕದ ಆನ್‌ಲೈನ್‌ ಸಂಸ್ಥೆಯ ಅಮೆಜಾನ್‌ನ ಭಾರತದ ಆವೃತ್ತಿಯಲ್ಲಿ 11 ವರ್ಷಗಳ ಹಿಂದೆ ಇಂಟರ್ನ್ ಆಗಿ ಸೇರಿಕೊಂಡಿದ್ದ ಸಚಿನ್‌ ಮತ್ತು ಬಿನ್ನಿ ಬನ್ಸಾಲ್‌, 2007ರಲ್ಲಿ ಕಂಪನಿ ತೊರೆದು ಫ್ಲಿಪ್‌ಕಾರ್ಟ್‌ ಆರಂಭಿಸಿದ್ದರು. ಇಬ್ಬರ ಕೊನೆಯ ಹೆಸರೂ ಬನ್ಸಾಲ್‌ ಎಂದಾಗಿದ್ದರೂ, ಇವರು ದೆಹಲಿ ಐಐಟಿಯಲ್ಲಿ ಬ್ಯಾಚ್‌ಮೇಟ್‌ಗಳಷ್ಟೇ. ಅಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಸ್ನೇಹಿತರಾಗಿದ್ದರು. 2007ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಎರಡು ಬೆಡ್‌ರೂಮ್‌ನ ಮನೆ ಬಾಡಿಗೆಗೆ ಪಡೆದು ಆನ್‌ಲೈನ್‌ ಬುಕ್‌ಸ್ಟೋರ್‌ ಸ್ಥಾಪಿಸಿದ್ದರು. ನಂತರ ದೆಹಲಿ ಹಾಗೂ ಮುಂಬೈನಲ್ಲಿ 2009ರಲ್ಲಿ ಕಚೇರಿ ತೆರೆದರು. ಆಗ ಅವರಿಗೆ ಅಮೆಜಾನ್‌ಗೆ ಸ್ಪರ್ಧೆ ಒಡ್ಡುವ ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ ಅವರು ಅಮೆಜಾನ್‌ನ ಮಾದರಿಯನ್ನೇ ಬಳಸಿಕೊಂಡಿದ್ದರು. ಆರಂಭದಲ್ಲಿ ಪುಸ್ತಕಗಳನ್ನು ಮಾತ್ರ ಅವರು ಮಾರಾಟ ಮಾಡುತ್ತಿದ್ದರು. ಆರಂಭದ ಮೂರು ತಿಂಗಳಲ್ಲಿ ವಾರಕ್ಕೆ 8 ರಿಂದ 10 ಪುಸ್ತಕಗಳ ಆರ್ಡರ್‌ ಬರುತ್ತಿತ್ತು. 2008ರಲ್ಲಿ ಅಂಬೂರ್‌ ಅಯ್ಯಪ್ಪ ಮೊದಲ ಪೂರ್ಣಕಾಲಿಕ ನೌಕರರಾಗಿ ನೇಮಕವಾಗಿದ್ದರು. ಅವರು ಈಗ ಕೋಟ್ಯಾಧೀಶರಾಗಿದ್ದಾರೆ. 

Advertisement

ಇದು ವರ್ಷದ ಒಪ್ಪಂದ
ವಾಲ್‌ಮಾರ್ಟ್‌ ಮಾಡಿಕೊಂಡ ಈ ಒಪ್ಪಂದ ಭಾರತದಲ್ಲಿ ಈ ವರ್ಷದಲ್ಲಿಯೇ ಅತ್ಯಂತ ದೊಡ್ಡ ಒಪ್ಪಂದವಾಗಲಿದೆ. ಇದುವರೆಗೆ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಕಂಪನಿಗಳ ಖರೀದಿ ಮತ್ತು ವಿಲೀನವೆಂದರೆ ವೊಡಫೋನ್‌ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ ಕಂಪನಿ ಒಪ್ಪಂದ. ಅದು 23 ಬಿಲಿಯನ್‌ ಡಾಲರ್‌ ಮೊತ್ತದ್ದಾಗಿದೆ. ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಜಗತ್ತಿನ ಅತಿದೊಡ್ಡ ಒಪ್ಪಂದಗಳೆಂದರೆ:

ನೆದರ್‌ಲ್ಯಾಂಡ್‌ನ‌ ರೋಸ್ನೆಫ್ಟ್ 2017ರಲ್ಲಿ ರಷ್ಯಾದ ಯುನೈಟೆಡ್‌ ಕ್ಯಾಪಿಟಲ್‌ ಪಾರ್ಟ್‌ನರ್‌ ಅನ್ನು 12.9 ಬಿಲಿಯನ್‌ ಡಾಲರ್‌ ಮೊತ್ತದಲ್ಲಿ ಖರೀದಿ

ಮ್ಯಾಕ್ಸ್‌ ಫೈನಾನ್ಶಿಯಲ್‌ ಸರ್ವಿಸಸ್‌ ಮತ್ತು ಎಚ್‌ಡಿಎಫ್ಸಿ 2016ರಲ್ಲಿ ವಿಲೀನ,ಡೀಲ್‌ ಮೊತ್ತ 9.73 ಬಿಲಿಯನ್‌ ಡಾಲರ್‌

ಜೈಪ್ರಕಾಶ್‌ ಅಸೋಸಿಯೇಟ್ಸ್‌ ಅನ್ನು ಅಲ್ಟ್ರಾ ಟೆಕ್‌ 2016ರಲ್ಲಿ 2.4 ಅಮೆರಿಕನ್‌ ಡಾಲರ್‌ ಮೊತ್ತದಲ್ಲಿ ಖರೀದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next